Thursday 25th, April 2024
canara news

`ಸೂಪರ್ ಮರ್ಮಯೆ' ಕಾಮಿಡಿ ಚಿತ್ರದ ಧ್ವನಿಸುರುಳಿ ಬಿಡುಗಡೆ

Published On : 25 Apr 2015   |  Reported By : Rons Bantwal


ಮಂಗಳೂರು : ಆನಂದ ಫಿಲಂಸ್ ಲಾಂಛನದಲ್ಲಿ ಅಡ್ಯಾರು ಮಾಧವ ನಾಯ್ಕ ನಿಮಾ೯ಣದ, ರಾಮ್ ಶೆಟ್ಟಿ ನಿದೇ೯ಶನದ ತುಳು ಚಿತ್ರರಂಗದ ಬಹುನಿರೀಕ್ಷಿತ `ಸೂಪರ್ ಮರ್ಮಯೆ' ಕಾಮಿಡಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಂಗಳೂರಿನಲ್ಲಿ ನಡೆಯಿತು.

ನಗರದ ಪ್ರಸ್ಕ್ಲಬ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿದ ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ತುಳುಚಿತ್ರರಂಗದಲ್ಲಿ ಪ್ರಸ್ತುತ ಬದಲಾವಣೆ ಕಂಡು ಬಂದಿದ್ದು, ಸಮೃದ್ಧಿಯ ಕಾಲ ಆರಂಭವಾಗಿದೆ ಎಂದರು.

ಚಿತ್ರದ ನಿದರ್ೆಶಕ ರಾಮ್ ಶೆಟ್ಟಿ ಮಾತನಾಡಿ, ಈಗಾಗಲೇ ನೂರಾರು ಸಾಹಸಮಯ ಸಿನೆಮಾಗಳನ್ನು ನೀಡಿರುವ ತಾನು ಸಂಪೂರ್ಣ ಹಾಸ್ಯವನ್ನೇ ಕೇಂದ್ರವಾಗಿಸಿರಿಸಿಕೊಂಡು "ಸೂಪರ್ ಮರ್ಮಯೆ' ಸಿನೆಮಾ ನಿದೇ೯ಶಿಸಿದ್ದೇನೆ. ಶೀಘ್ರದಲ್ಲಿ "ಎಕ್ಕ-ಸಕ್ಕ' ಚಿತ್ರ ಬಿಡುಗಡೆಗೊಳ್ಳಲಿದ್ದು, ಬಳಿಕ "ಸೂಪರ್ ಮರ್ಮಯೆ' ಸಿನೆಮಾ ಕರಾವಳಿಯಾದ್ಯಂತ ತೆರೆ ಕಾಣಲಿದೆ ಎಂದರು.

ಮಾವನಿಗೆ ಬೇಡದ ಅಳಿಯನಾಗಿ ಪಂಚರಂಗಿ ಪೊಂ ಪೊಂ ಖ್ಯಾತಿಯ "ಮಂಗಳೂರು ಮೀನನಾಥ' ರಾಘವೇಂದ್ರ ರೈ ನಟಿಸಿದ್ದಾರೆ. ಗಂಭೀರ ಪಾತ್ರಧಾರಿಯಾಗಿ ನಗಿಸುವ ಮಾವನ ಪಾತ್ರಧಾರಿಯಾಗಿ ಗೋಪಿನಾಥ ಭಟ್ ಅಭಿನಯಿಸಿದ್ದಾರೆ. ಕರಾವಳಿಯ ಶ್ರೇಷ್ಠ ಕಲಾವಿದರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಈ ಚಿತ್ರದಲ್ಲಿ ನಗುವಿನ ಲಹರಿ ಹರಿಸಿದ್ದಾರೆ ಎಂದರು.

ಕಲಾವಿದ ನವೀನ್ ಡಿ. ಪಡೀಲ್ ಮಾತನಾಡಿ, ಕಾಮಿಡಿ ಲುಕ್ನಲ್ಲಿ ಸಿನೆಮಾ ಅದ್ಬುತವಾಗಿ ಮೂಡಿಬಂದಿದೆ. 700ಕ್ಕೂ ಹೆಚ್ಚು ಹಿಂದಿ, ಮರಾಠಿ, ಗುಜರಾತಿ, ಕನ್ನಡ, ತೆಲುಗು, ತಮಿಳು ಚಲನಚಿತ್ರಗಳಲ್ಲಿ "ಸ್ಟಂಟ್ ಮಾಸ್ಟರ್' ಆಗಿ ದುಡಿದು, ಹಲವು ಹಿಂದಿ ಚಿತ್ರಗಳನ್ನು ನಿಮಿ೯ಸಿ, ನಿದರ್ೆಶಿಸಿರುವ ರಾಮ್ ಶೆಟ್ಟಿ ಹಾಗೂ ನಿಮಾ೯ಪಕ ಮಾಧವ ನಾಯ್ಕ ಅವರ ಗರಡಿಯಲ್ಲಿ ಅತ್ಯಂತ ಉತ್ತಮ ದಜೆ೯ಯ ತುಳು ಸಿನೆಮಾವಾಗಿ ಇದು ಮೂಡಿಬಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿಮಾ೯ಪಕ ಅಡ್ಯಾರು ಮಾಧವ ನಾಯ್ಕ, "ಕಡಲ ಮಗೆ' ಖ್ಯಾತಿಯ ಸಂಗೀತ ನಿದೇ೯ ಶಕ ಎಸ್.ಪಿ. ಚಂದ್ರಕಾಂತ್, ಚಿತ್ರನಟರಾದ ಅರವಿಂದ ಬೋಳಾರ್,ಭೋಜರಾಜ ವಾಮಂಜೂರು, ಪುರುಷೋತ್ತಮ ಭಂಡಾರಿ, ಗೋಪಿನಾಥ್ ಭಟ್, ಗೀತೆ ಸಾಹಿತ್ಯ ಬರೆದ ಶಶಿರಾಜ್ ಕಾವೂರು, ಸಂಭಾಷಣೆ ಬರೆದ ನವೀನ್ ಶೆಟ್ಟಿ ಅಳಕೆ, ಕಲಾ ನಿದೇ೯ ಶಕ ತಮ್ಮಲಕ್ಷ್ಮಣ ಮೊದಲಾದವರು ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here