Saturday 20th, April 2024
canara news

ಶ್ರೀ ಕ್ಷೇತ್ರ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೆ೯ಶ್ವರಿ ಅಮ್ಮನವರ ಆರಾಧಕ ಸಾತ್ರಸ್ತಾ ಶ್ರೀ ನಿರಂಜನ ಸ್ವಾಮೀಜಿ ಅಸ್ತಂಗತ

Published On : 21 May 2015   |  Reported By : Rons Bantwal


ಮುಂಬಯಿ, ಮೇ.21: ಮಹಾನಗರದ ಮಹಾಲಕ್ಷಿ ್ಮ ಇಲ್ಲಿನ ಸಾತ್ರಸ್ತಾ ಜಾಕೋಬ್ ಸರ್ಕಲ್ ಇಲ್ಲಿನ ಹಾಗೂ ಮಂಗಳೂರು ಬಜ್ಪೆಯ ಶ್ರೀ ಕ್ಷೇತ್ರ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೆ೯ಶ್ವರಿ ಅಮ್ಮನವರ ಆರಾಧಕ, ಬಜ್ಪೆ-ಸುಂಕದಕಟ್ಟೆ ಶ್ರೀ ನಿರಂಜನಾ ಸ್ವಾಮಿ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕ ಶ್ರೀ ಶ್ರೀ ನಿರಂಜನ ಸ್ವಾಮೀಜಿ (93.) ಅವರು ಇಂದಿಲ್ಲಿ ಗುರುವಾರ ಮುಂಜಾನೆ ಅಸ್ತಂಗತರಾದರು.

ಕಳೆದ ಬುಧವಾರ ರಾತ್ರಿ ಅನಾರೋಗ್ಯದಿಂದ ಬಳಲಿದ ಶ್ರೀಗಳನ್ನು ತಕ್ಷಣವೇ ಸ್ಥಾನೀಯ ಬ್ರೀಜ್ಕೇಂಡಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಶ್ರೀ ನಿರಂಜನ ಸ್ವಾಮೀಜಿ ಅವರು ಹೃದಯಾಘಾತದಿಂದಾಗಿ ದೈವಕ್ಯರಾದರು. ಶ್ರೀಗಳ ಪಾಥಿ೯ವ ಶರೀರವನ್ನು ಇಂದಿಲ್ಲಿ ಗುರುವಾರ ಮಹಾಲಕ್ಷ್ಮೀ ಸಾತ್ರಸ್ತಾ ಅಲ್ಲಿನ ಶ್ರೀ ಅಂಬಿಕಾ ಅನ್ನಪೂಣೆ೯ಶ್ವರಿ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗಿದ್ದು, ಶುಕ್ರವಾರ ಅಪರಾಹ್ನ ಬಜ್ಪೆ ಅಲ್ಲಿನ ಶ್ರೀ ಕ್ಷೇತ್ರ ಸುಂಕದಕಟ್ಟೆ ಶ್ರೀಕ್ಷೇತ್ರದಲ್ಲಿ ದರ್ಶನಕ್ಕಿರಿಸಲಾಗುವುದು ಎಂದು ಪರಿವಾರದ ನಾರಾಯಣ ನಿರಂಜನ್ ಮತ್ತು ಮಹೇಶ್ ನಿರಂಜನ್ ತಿಳಿಸಿದ್ದಾರೆ.

ಶ್ರೀ ನಿರಂಜನ ಸ್ವಾಮಿಜಿ
ಲೋಕ ಹಿತದ ಕರ್ಮಯೋಗಿ, ಮಹಾ ಅತಿಮಾನವತಾ ಶಕ್ತಿ, ದೈವ ಭಕ್ತಿಯ ಪವಿತ್ರ ಪಥದಲ್ಲಿ ಸಾಗಿ ಬಂದಿರುವ ಜ್ಞಾನಯೋಗಿಂ ಆಗಿ ಪೂಜ್ಯರೆಣಿದ್ದ ಶ್ರೀ ನಿರಂಜನ ಸ್ವಾವಿೂಜಿ ಅವರು ತಮ್ಮ ಜನ್ಮದ ಸಾರ್ಥಕ 75 ಸಂವತ್ಸರಗಳನ್ನು ಪೂರೈಸಿ 2006ರಲ್ಲಿ ಅಮೃತ ಮಹೋತ್ಸವವನ್ನು ಆಚರಿಸಿದ್ದು, ಸಾವಿರಾರು ಸದ್ಭಕ್ತರು ಶ್ರೀಗಳನ್ನು ಭಕ್ತಿಪೂರ್ವಕವಾಗಿ ಅಭಿನಂದಿದ್ದರು.

ಸುಂಕದಕಟ್ಟೆಯಲ್ಲಿ ಧಾಮಿ೯ಕ ಮತ್ತು ಶೈಕ್ಷಣಿಕ ರಂಗಗಳ ಸಮನ್ವಯವನ್ನು ಸಾಧಿಸಿದ ಸಂಗಮ ಕ್ಷೇತ್ರವಾಗಿರಿಸಿದ ತಾವು ವಿದ್ಯಾಧಿದೇವತೆಯಾದ ಶ್ರೀ ಮಹಾ ಸರಸ್ವತಿಯ ಅನುಗ್ರಹದೊಂದಿಗೆ ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ ವಿದ್ಯಾಲಯಗಳನ್ನು ಹುಟ್ಟುಹಾಕಿ ಸಾಧನೆಯ ಮುದ್ರೆಯನ್ನೊತ್ತಿ ಕೊಂಡ ಮಹಾನ್ ಶಿಕ್ಷಣಪ್ರೇಮಿ ಎಣಿಸಿದ್ದ ಶ್ರೀಗಳು `ದೇವರ ಭಯವೇ ಜ್ನಾನದ ಆರಂಭ' ಎನ್ನುವ ಲೋಕೋಕ್ತಿಯನ್ನು ಅನುಷ್ಠಾನಗೊಳಿಸಿದ್ದರು. ಶೈಕ್ಷಣಿಕ ರಂಗದ ಕ್ರಾಂತಿಕಾರಕ ರೂವಾರಿಯೆನಿಸಿ ತಮ್ಮ ಸಂಚಾಲಕತ್ವದ ಶ್ರೀ ನಿರಂಜನ ಸ್ವಾಮಿ ಅಂಗನವಾಡಿಯಿಂದ ಡಿಗ್ರಿ ಕಾಲೇಜು ಮತ್ತು ಪಾಲಿಟೆಕ್ನಿಕ್ ಮೂಲಕ ರಾಷ್ಟ್ರದಾದ್ಯಂತದ ಸಾವಿರಾರು ವಿದ್ಯಾಥರ್ಿಗಳನ್ನು ಪದವೀದಾರರನ್ನಾಗಿಸಿದರು. ಅಕ್ಷರಾಭ್ಯಾಸ ಬಲ್ಲವರಲ್ಲದ ತಾವು ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಸೇವಾ ಸಂಸ್ಥೆಗಳನ್ನು ರೂಪಿಸಿ ಶೈಕ್ಷಣಿಕ ಕ್ರಾಂತಿಯ ರೂವಾರಿವೆಣಿ ಸಮಾಜದ ಋಣವನ್ನು ತೀರಿಸಿ ಧನ್ಯರೆಣಿಸಿ ಇಂದು ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ ತಮ್ಮ ಶಕ್ತಿ ದೇವತೆಯಾದ ಶ್ರೀ ಅಂಬಿಕಾ ಅನ್ನ ಪೂಣೆ೯ಶ್ವರಿ ಅವರನ್ನು ಆರಾಧಿಸಿ ಧರ್ಮಯೋಗಿಯಾಗಿ ಜನಾನುರಾದರು. ಸುಂಕದಕಟ್ಟೆಯ ಬಡ ವಿದ್ಯಾಥಿ೯ಗಳಿಗೆ ಮಧ್ಯಾಹ್ನ ಧಮಾ೯ರ್ಥ ಊಟವನ್ನಿತ್ತು ಮಕ್ಕಳ ವಿದ್ಯಾರ್ಜನೆಗೆ ಪ್ರೇರಕರಾಗಿದ್ದ ಮೊತ್ತಮೊದಲ ಶಿಕ್ಷಣಪ್ರೇಮಿ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜ್ಞಾನಯೋಗಿ ನಿರಂಜನ ಸ್ವಾಮೀಜಿ ಅವರು ಭಕ್ತ ಜನರಲ್ಲಿ ಯಾವುದೇ ಜಾತಿ ಮತ ಭೇದ ಕಾಣದೆ ಜನ ಸುಖಿನೋ ಭವಂತು ಎಂದು ಭಕ್ತರನ್ನು ಹರಿಸುತ್ತಿದ್ದರು. ಶ್ರೀ ನಾರಯಣ ಗುರುಗಳ ತತ್ವಗಳನ್ನು ಅನುಸರಿಸಿ ಬಾಳುತ್ತಿದ್ದ ಮಹಾನ್ ವ್ಯಕ್ತಿತ್ವ ಅವರದ್ದು. ಅವಿಭಜಿತ ದ.ಕ. ಜಿಲ್ಲೆಯ ಜನರು ಮುಂಬಯಿಯನ್ನು ನೆನಪಿಸಿ ಕೊಂಡಾಗೆಲ್ಲಾ ಪ್ರತಿಯೊಬ್ಬ ಭಕ್ತಾಭಿಮಾನಿಗಳೂ ಅವರನ್ನು `ಸಾತ್ ರಸ್ತೆದ ಸ್ವಾಮೀಲು' ಎಂದು ಅಕ್ಕರೆಯಿಂದ ಕರೆಯುತ್ತಿದ್ದರು. ರಾಷ್ಟ್ರೀಯ ರಾಜಕಾರಣಿಗಳು, ಬಾಲಿವುಡ್ ತಾರೆಯರು, ದೇಶ ವಿದೇಶಗಳಲ್ಲಿರುವ ಉದ್ಯಮಿಗಳು ಶ್ರೀ ನಿರಂಜನ ಸ್ವಾಮೀಜಿ ಅವರ ಅನುಯಾಯುಗಳಾಗಿದ್ದು, ಪಕ್ಷ, ಪಂಥ, ಜಾತಿ ಮತ ಧರ್ಮದ ಮಾತು ಅವರಲ್ಲಿ ಇವರಲಿಲ್ಲ. ಬಡವ ಬಲ್ಲಿದನ ನಡುವಿನ ಅಂತರವನ್ನು ಅವರು ಎಂದೂ ಸಹಿಸಿದವರಲ್ಲ. ಅತಿಮಾನವತಾ ಭಕ್ತಿಯ ಪವಿತ್ರ ಪಥದಲ್ಲಿ ಸಾಗಿ ಬಂದಿರುವ ಶ್ರೀಗಳು ಲೋಕ ಹಿತದ ಕರ್ಮಯೋಗಿ. ಸುಂಕದಕಟ್ಟೆಯಲ್ಲಿ ಧಾಮಿ೯ಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮನ್ವಯತೆಯನ್ನು ಸಾಧಿಸಿ ವಿದ್ಯಾಧಿದೇವತೆ ಆದ ಶ್ರೀ ಮಹಾ ಸರಸ್ವತಿಯ ಅನುಗ್ರಹದೊಂದಿಗೆ ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ ವಿದ್ಯಾಲಯವನ್ನು ಹುಟ್ಟು ಹಾಕಿ ಸಾಧನೆಯನ್ನು ಮಹೋನ್ನತಿ ಸಾಧಿಸಿದ ಶಿಕ್ಷಣ ಪ್ರೇಮಿ. ದೇವರ ಭಯವೇ ಜ್ಞಾನದ ಆರಂಭ ಎಂಬ ಲೋಕೋಕ್ತಿಯನ್ನು ಅನುಷ್ಠಾನಗೊಳಿಸಿ ಶೈಕ್ಷಣಿಕ ರಂಗದ ಕ್ರಾಂತಿಕಾರಕ ರೂವರಿ ಎನಿಸಿದ್ದರು.

ನಿರಕ್ಷರಿಯಾದ ಶ್ರೀ ನಿರಂಜನ ಸ್ವಾಮೀಜಿ ಅವರು ತಮ್ಮ ಸಂಚಾಲಕತ್ವದಲ್ಲಿ ಗ್ರಾಮೀಣ ಪ್ರದೇಶವಾದ ಸುಂಕದಕಟ್ಟೆಯಲ್ಲಿ ಶೈಕ್ಷಣಿಕ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿ ಕ್ರಾಂತಿಯನ್ನುಂಟು ಮಾಡಿದು, ಅನುದಾನಿತ ಮಾಧ್ಯಮ ಶಾಲೆಯ ರಜನ ವರ್ಧಂತ್ಯುತ್ಸವ ಆಚರಿಸಿ ಸಮಾಜದ ಋಣ ಸಂದಾಯ ಮಾಡಿದ್ದಾರೆ. ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ ಪೌರ ಸಮ್ಮಾನ ಸ್ನೀಕರಿಸಿ ಪಾವನರಾದ ಇವರು ಶಕ್ತಿ ದೇವತೆಯಾದ ಶ್ರೀ ಅಂಬಿಕಾ ಪೂಣೆ೯ಶ್ವರಿ ಪರಮ ಭಕ್ತರು.

ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಮಾತನ್ನು ನಿರಂಜನ ಸ್ವಾಮೀಜಿ ಅವರು ಅಕ್ಷರಶಃ ಪಾಲಿಸುತ್ತಿದ್ದಾರೆ. ಸಾತ್ ರಸ್ತೆಯ ಶ್ರೀ ಅನ್ನಪೂಣೆ೯ಶ್ವರೀ ಭಕ್ತ ಜನರು ತಂದೊಪ್ಪಿಸಿದ ಕಾಣಿಕೆಯ ಬಹುಪಾಲನ್ನು ಸುಂಕದಕಟ್ಟೆಯ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಿ ಬಡವ-ಬಲ್ಲಿದವರನ್ನು ಹಾಗೂ ವಿಧವೆಯರನ್ನು ಪ್ರೋತ್ಸಾಹಿಸಿದವರಾಗಿದ್ದಾರೆ. ಸುಂಕದಕಟ್ಟೆಯಲ್ಲಿ ಶ್ರೀ ಅನ್ನಪೂಣರ್ೆಶ್ವರಿ ದೇವಾಲಯವನ್ನು ನಿಮಿ೯ಸಿ ಧರ್ಮ ಪಾಲನೆಗೈದರೆ, ಶ್ರೀ ನಿರಂಜನ ಸ್ವಾಮಿ ಎಜ್ಯುಕೇಶನ್ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ನರ್ಸರಿ, ಪ್ರೈಮರಿ ಮತ್ತು ಹೈಸ್ಕೂಲುಗಳನ್ನಲ್ಲದೆ ಕಾಮಸ್೯ ಮತ್ತು ಸಯನ್ಸ್ ಕಾಲೇಜನ್ನು ಅಂತೆಯೇ ಪಾಲಿಟೆಕ್ನಿಕ್ ಕಾಲೇಜುಗಳನ್ನು ನಡೆಸಿಕೊಂಡು ಶೈಕ್ಷಣಿಕ ಸೇವೆಗೆ ಅಪಾರ ಕೊಡುಗೆಯನ್ನೀಡಿದ್ದಾರೆ. ಸುಸಜ್ಜಿತ ಇಂಜಿನಿಯರಿಂಗ್ ಕಾಲೇಜೊಂದನ್ನು ಸ್ಥಾಪಿಸುವ ಮಹಾತ್ವಾಕಾಂಕ್ಷೆ ಇವರಲ್ಲಿತ್ತು. ಗೃಹಶ್ರಮದಲ್ಲಿದ್ದುಕೊಂಡು ಅದ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಂಡು ಸ್ವಾಮಿ ಎಂದು ಹೇಳಿಕೊಂಡ ಶ್ರೀಗಳು ದೇವಿಯ ಪ್ರೇರಣೆಯಿಂದ ತಾನು ಸುಂಕದಕಟ್ಟೆಯಲ್ಲಿ ದೇವಸ್ಥಾನ ನಿಮಿ೯ಸಿದೆ ಎಂದೆನ್ನುವ ಹಿರಿಮೆ ಇವರದ್ದಾಗಿತ್ತು. ನಿರಂಜನ ಸ್ವಾಮಿಗಳ ಭಕ್ತರಲ್ಲಿ ಅಶೋಕ್ ಕುಮಾರ್, ಪ್ರಾಣ್ ಮುಂತಾದ ಸಿನಿಮಾ ತಾರೆಯರೂ ಇದ್ದಾರೆ. ವಾ ಷಿ೯ಕವಾಗಿ ನವದಿನಗಲಲ್ಲಿ ಕಟ್ಟಾ ಉಪವಾಸ ಕೈಗೊಂಡು ಅದ್ದೂರಿಯಿಂದ ನವರಾತ್ರಿ ಉತ್ಸವವನ್ನು ಸುಂಕದಕಟ್ಟೆ ಮತ್ತು ಸಾತ್ ರಸ್ತೆಯ ಶ್ರೀ ಅಂಬಿಕಾ ಪೂಣೆ೯ಶ್ವರಿ ಮಂದಿರದಲ್ಲಿಯೂ ವಿಜೃಂಭಿಸಿ ಭಕ್ತರನ್ನು ಅನುಗ್ರಹಿಸುತ್ತಿದ್ದರು.

ಸಂತಾಪ ಸೂಚನೆ:
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವಾಧ್ಯಕ್ಷರೂ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್ನ ಕಾಯಾ೯ಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಅಸೋಸಿಯೇಶನ್ನ ಉಪಾಧ್ಯಕ್ಷರುಗಳಾದ ಚಂದ್ರಶೇಖರ್ ಎಸ್.ಪೂಜಾರಿ, ಸಿ.ಟಿ ಸಾಲ್ಯಾನ್, ಜ್ಯೋತಿ ಕೆ. ಸುವರ್ಣ ಮತ್ತು ಭಾಸ್ಕರ್ ಎಂ.ಸಾಲ್ಯಾನ್, ಗೌ| ಪ್ರ| ಕಾರ್ಯದಶಶಿ೯ ಡಾ| ಯು.ಧನಂಜಯ ಕುಮಾರ್, ಗೌ| ಪ್ರ| ಕೋಶಾಧಿಕಾರಿ ಭಾಸ್ಕರ ವಿ.ಬಂಗೇರಾ, ಮಹಿಳಾ ವಿಭಾಗದ ಕಾಯಾ೯ಧ್ಯಕ್ಷೆ ಶ್ರೀಮತಿ ಶಕುಂತಳಾ ಕೆ.ಕೋಟ್ಯಾನ್ ಹಾಗೂ ಸೇವಾದಳದ ಮುಖ್ಯಸ್ಥ ಗಣೇಶ್ ಕೆ.ಪೂಜಾರಿ, ಅಸೋಸಿಯೇಶನ್ನ ಮುಖವಾಣಿ ಅಕ್ಷಯ ಮಾಸಿಕದ ಗೌರವ ಸಂಪಾದಕ ಎಂ.ಬಿ ಕುಕ್ಯಾನ್, ಭಾರತ್ ಬ್ಯಾಂಕ್ನ ನಿಕಟಪೂರ್ವ ಕಾಯಾ೯ಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲ್ಯಾನ್, ವ್ಯವಸ್ಥಾಪಕ ನಿದೇ೯ಶಕ ಸಿ.ಆರ್.ಮೂಲ್ಕಿ, ಬಜಪೆ ದೊಡ್ಡಿಕಟ್ಟಾ ಶ್ರೀ ಸ್ವಯಂ ಭೂಲಿಂಗೇಶ್ವರ ಕ್ಷೇತ್ರದ ಅಧ್ಯಕ್ಷರೂ ಆಡಳಿತ ಮೊಕ್ತೇಸರ ಎಲ್.ವಿ ಅವಿೂನ್, ಪೊಲೀಸ್ ಅಧಿಕಾರಿ ಗೋಪಾಲಕೃಷ್ಣ ಕುಂದರ್ ಬಜ್ಪೆ, ಭಂಡಾರಿ ಮಹಾ ಮಂಡಲದ ಮಾಜಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಬಿಲ್ಲವ ಜಾಗೃತಿ ಬಳಗ ಇದರ ಅಧ್ಯಕ್ಷ ಎನ್.ಟಿ ಪೂಜಾರಿ, ಮಾಜಿ ಅಧ್ಯಕ್ಷ ರುಗಳಾದ ಸೂರು ಕಕೇ೯ರ, ಸುರೇಶ್ ಎಸ್. ಪೂಜಾರಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಶಾರದ ಸೂರು ಕಕೇ೯ರ, `ಗುರುತು' ಮಾಸಿಕದ ಗೌರವ ಸಂಪಾದಕ ಬಾಬು ಶಿವ ಪೂಜಾರಿ, ಕೆ.ಭೋಜರಾಜ್, ಹರೀಶ್ ಎಸ್.ಪೂಜಾರಿ, ಜೆ.ಎಂ.ಕೋಟ್ಯಾನ್, ಡಿ.ಯು.ಸಾಲ್ಯಾನ್, ಪುರುಷೋತ್ತಮ್ ಎಸ್.ಕೋಟ್ಯಾನ್, ಚಿತ್ರಾಪು ಕೆ.ಎಂ.ಕೋಟ್ಯಾನ್ ಉದ್ಯಮಿ ರಮೇಶ್ ಅಹುಜಾ, ಕೆ.ಟಿ ಉಂದರ್, ನರ್ಸಪ್ಪ ಸಾಲ್ಯಾನ್ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ ಭಟ್, ಶ್ರೀ ಶಾಂತ ದುಗಾ೯ ದೇವಿ ಮಂದಿರ ಗೋರೆಗಾಂ ಇದರ ಆಡಳಿತ ಮೊಕ್ತೇಸರ ಶ್ಯಾಮ ಎನ್.ಸಾಲಿಯಾನ್, ಉದಯ ಸಾಲಿಯಾನ್, ಸೂರಜ್ ಎಸ್.ಸಾಲಿಯಾನ್, ಕಲ್ಲಂಜೆ ರಾಧಾಕೃಷ್ಣ ಭಟ್ ಮತ್ತಿತರ ಗಣ್ಯರು ಹಾಗೂ ಅಪಾರ ಭಕ್ತ ವೃಂದವು ಸಂತಾಪ ಸೂಚಿಸಿದ್ದಾರೆ.

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here