Tuesday 23rd, April 2024
canara news

ಚಲಾವಣೆಯಲ್ಲಿ ಇಲ್ಲದ ಬ್ರೆಝಿಲ್ ಕರೆನ್ಸಿಯನ್ನು ಸಾರ್ವಜನಿಕರಿಗೆ ವಂಚಿಸಿ ಮಾರಾಟ

Published On : 26 May 2015   |  Reported By : Canaranews Network


ಉಡುಪಿ, ಮೇ25: ಚಲಾವಣೆಯಲ್ಲಿ ಇಲ್ಲದ ಬ್ರೆಝಿಲ್ ಕರೆನ್ಸಿಯನ್ನು ಸಾರ್ವಜನಿಕರಿಗೆ ವಂಚಿಸಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಉಡುಪಿ ಡಿಸಿಐಬಿ ಪೊಲೀಸರು ಮೇ25ರಂದು ಬಂಧಿಸಿದ್ದಾರೆ.

ಬಂಧಿತನನ್ನು ಮಂಗಳೂರು ಪುತ್ತಿಗೆ ಗ್ರಾಮದ ಇಮ್ರಾನ್(24) ಎಂದು ಗುರುತಿಸಲಾಗಿದೆ. 1989ನೇ ಇಸವಿಯಲ್ಲಿ ಚಲಾವಣೆ ನಿಲ್ಲಿಸಿರುವ ಬ್ರೆಜಿಲ್ ದೇಶದ ಕರೆನ್ಸಿ ಕ್ರುಸಾಡೊ 500 ಮುಖಬೆಲೆಯ 574 ನೋಟುಗಳು ಹಾಗೂ 100 ಮುಖ ಬೆಲೆಯ 92 ನೋಟುಗಳು ಒಟ್ಟು 2,96,200 ಕ್ರುಸಾಡೊ (ಭಾರತ ದೇಶದ ಮೌಲ್ಯ ಅಂದಾಜು 59,24,000ರೂ.)ಗಳನ್ನು ಪ್ರಸ್ತುತ ಚಲಾವಣೆಯಲ್ಲಿರುವುದಾಗಿ ಎಂದು ಹೇಳಿ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಇಮ್ರಾನ್ನನ್ನು ಡಿಸಿಐಬಿ ಪೊಲೀಸರು ದಾಳಿ ನಡೆಸಿ ಬಂಧಿಸಿ ದ್ದಾರೆ.

ಈತನಿಂದ ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಉಡುಪಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಅಣ್ಣಾಮಲೈ ನಿದೇ೯ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ ಕುಮಾರ್ ಹಾಗೂ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಎಂ.ಚಂದ್ರಶೇಖರ್ ಮಾರ್ಗದರ್ಶನ ದಲ್ಲಿ ಉಡುಪಿ ಡಿಸಿಐಬಿ ನಿರೀಕ್ಷಕ ಟಿ.ಆರ್.ಜೈಶಂಕರ್ ನೇತೃತ್ವದಲ್ಲಿ ಸಿಬ್ಬಂದಿ ಗಳಾದ ರವಿಚಂದ್ರ, ಸಂತೋಷ ಪುತ್ತೂರು, ಚಂದ್ರ ಶೆಟ್ಟಿ, ಸಂತೋಷ ಕುಂದರ್, ಸುರೇಶ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ಪ್ರವೀಣ್, ಚಂದ್ರಶೇಖರ್ ಪಾಲ್ಗೊಂಡಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here