Friday 19th, April 2024
canara news

ಒಡಿಯೂರುಶ್ರೀ ಗುರುದೇವಾನಂದ ಸ್ವಾಮೀಜಿ-ಸಾಧ್ವಿ ಶ್ರೀ ಮಾತಾನಂದಮಯಿ ಆ.03 ರಿಂದ ಬೃಮನ್ಮುಂಬಯಿ-ಥಾಣೆ-ನವಿಮುಂಬಯಿಗೆ ಭೇಟಿ

Published On : 01 Aug 2014   |  Reported By : Ronida Mumbai


ಮುಂಬಯಿ, ಆ.01: ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಗುರು ವೀರಾಂಜನೆಯ ಸ್ವಾಮಿ ಕ್ಷೇತ್ರ ಒಡಿಯೂರು ಇದರ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ವಾಷಿ೯ಕ ಭೇಟಿಯಂತೆ ಮುಂಬಯಿ ಭಕ್ತ ಜನತೆಯನ್ನು ಅನುಗ್ರಹಿಸಲು ಇದೇ ಆ.03ರ ಆದಿತ್ಯವಾರ ಮುಂಬಯಿ ಮಹಾನಗರಕ್ಕೆ ಆಗಮಿಸುವ ಶ್ರೀಗಳು ಆ.14ರ ಗುರುವಾರ ತನಕ ಸುಮಾರು ಹನ್ನೆರಡು ದಿನಗಳ ವರೆಗೆ ಮಹಾನಗರದಲ್ಲೊ ಮೊಕ್ಕಂ ಹೂಡಲಿದ್ದು ಈ ಕಾಲಾವಧಿಯಲ್ಲಿ ಉಪನಗರ ನವಿಮುಂಬಯಿ, ಥಾಣೆ ಇನ್ನಿತರ ಕಡೆಗಳಲ್ಲಿ ಜರುಗುವ ಧಾಮಿ೯ಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀ ಗುರುದೇವ ಸೇವಾ ಬಳಗ (ಮಹಾರಾಷ್ಟ್ರ ಘಟಕ)ದ ಅಧ್ಯಕ್ಷ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ತಿಳಿಸಿದ್ದಾರೆ.

Odiyoorshree

Odiyoorshree

ಸ್ವಾಮೀಜಿ ಅವರು ಆ.03ರ ಭಾನುವಾರ ಸಂಜೆ 6 ಗಂಟೆಯಿಂದ ಬಾಂದ್ರಾ ಪೂರ್ವದ ಚೇತನ ಕಾಲೇಜು ಮುಂಭಾಗದ, ಬಾಂದ್ರಾ ಅರುಣೋದಯ ಸೊಸೈಟಿಯಲ್ಲಿ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಮಾಜಿ ಅಧ್ಯಕ್ಷೆ ಶ್ರೀಮತಿ ಸುವಾಸಿನಿ ಎಸ್.ಶೆಟ್ಟಿ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನ ನಡೆಸಲಿದ್ದಾರೆ. ಆ.04ರ ಸೋಮವಾರ ಸಂಜೆ 6.00 ಗಂಟೆಗೆ ಮಲಾಡ್ ಪಶ್ಚಿಮದ ಗೋವಿಂದ್ ನಗರದ ಶ್ರೀ ಅಂಬಿಕಾ ಮಂದಿರಕ್ಕೆ ಭೇಟಿ, ರಾತ್ರಿ 8 ಗಂಟೆಯಿಂದ ಅಂಧೇರಿ ಪಶ್ಚಿಮದ ವೀರ ದೇಸಾಯಿ ರೋಡ್ನಲ್ಲಿನ ಶ್ರೀ ಮಹಾಲಕ್ಷ್ಮೀ ಕಾಲೊನಿಯಲ್ಲಿನ ಮಹಾಲಕ್ಷ್ಮೀ ಭಜನಾ ಮಂಡಳಿ ಇಲ್ಲಿ ಸಾರ್ವಜನಿಕ ದರ್ಶನ, ಆ.05ರ ಮಂಗಳವಾರ ಸಂಜೆ 6.00 ಗಂಟೆಗೆ ದಹಿಸರ್ ಪೂರ್ವದ ಎಸ್.ವಿ.ರೋಡ್ನಲ್ಲಿನ ಮಹಾರಾಷ್ಟ್ರ ಬಾಂಕ್ನ ಸನಿಹದ ನೇಹಾ ಹೌಸಿಂಗ್ ಸೊಸೈಟಿಯ ಶ್ರೀಮತಿ ಎಸ್.ಎ.ಶೆಟ್ಟಿ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನ, ಆ.06ರ ಬುಧವಾರದಂದು ಬೆಳಿಗ್ಗೆ 11.30 ರಿಂದ ಬೊರಿವಲಿ ಪಶ್ಚಿಮದ ಜಯರಾಜ್ ನಗರದ ಶ್ರೀ ಮಹಿಷಾ ಮಧಿ೯ನಿ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನ, ಸಂಜೆ 6.00 ಗಂಟೆಗೆ ಭಯಂಧರ್ ಪಶ್ಚಿಮದ ನವರಂಗ್ ಹೊಟೇಲಿನ ಮುಂಭಾಗದ ಕಮಲ ಪಾಕ್೯ನಲ್ಲಿನ ಆನಂದ್ ಶೆಟ್ಟಿ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನ ನೀಡಲಿದ್ದಾರೆ.

ಆ.07ನೇ ಗುರುವಾರದಂದು ಸಂಜೆ 6.30 ರಿಂದ ಬೊಯಿಸರ್ನ ತಾರಾಪೂರದ ಶ್ರೀ ನಿತ್ಯಾನಂದ ಮಂದಿರದಲ್ಲಿ ಸಾರ್ವಜನಿಕ ದರ್ಶನ. ಆ.08ನೇ ಶುಕ್ರವಾರ ಬೆಳಿಗ್ಗೆ 9.00 ರಿಂದ ಸಯನ್ ಪಶ್ಚಿಮದ ಮುಖ್ಯ ಅಧ್ಯಾಪಕ ಭವನದ ಸ್ವಾಮಿ ನಿತ್ಯಾನಂದ ಹಾಲ್ನಲ್ಲಿ ವರಮಹಾಲಕ್ಷೀ ಪೂಜೆ ನಂತರ ಶ್ರೀಪಾದರ ಜಯಂತಿ ಉತ್ಸವ ಹಾಗೂ ಸಾರ್ವಜನಿಕ ದರ್ಶನ ಆಯೋಜಿಸಲಾಗಿದೆ. ಆ.09ನೇ ಶನಿವಾರ ಸಂಜೆ 06.00 ರಿಂದ ಚೆಂಬೂರು ಚೇಡಾ ನಗರದ ಘಾಟ್ಕೋಪರ್ ಮನ್ಕುಡ್೯ ಲಿಂಕ್ ರೋಡ್ನಲ್ಲಿನ ಮಹಾವೀರ ಪ್ಲಾಟಿನಮ್ ಕಟ್ಟಡದಲ್ಲಿ ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಅಧ್ಯಕ್ಷ ನ್ಯಾ| ಪ್ರಕಾಶ್ ಎಲ್. ಶೆಟ್ಟಿ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನ.

ಆ.10ನೇ ರವಿವಾರ ಮಧ್ಯಾಹ್ನ 2.30 ಗಂಟೆಯಿಂದ ಕುಲಾ೯ ಪೂರ್ವದಲ್ಲಿನ ಬಂಟರ ಭವನದಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಶ್ರೀ ಮಾತಾನಂದಮಯಿ ಅವರ ದಿವ್ಯ ಉವ್ಯೋಪಸ್ಥಿತಿಯಲ್ಲಿ ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ವಾಷಿ೯ಕೋತ್ಸವ ಸಮಾರಂಭ ಜರಗಲಿರುವುದು. 2.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 6.00 ಗಂಟೆಯಿಂದ ಪಾದುಕಾ ಪೂಜೆ, 6.30 ಗಂಟೆಗೆ ಧಾಮಿ೯ಕ ಸಭಾ ಕಾರ್ಯಕ್ರಮ, 8.30 ಗಂಟೆಗೆ ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನೇರವೇರಲಿದೆ.

ಆ.11ನೇ ಸೋಮವಾರದಂದು ನ್ಯೂ ಪನ್ವೇಲ್ ಪಶ್ಚಿಮದ ಖಾಂಡಾ ಕಾಲೊನಿಯಲ್ಲಿನ ಖಾಂಡೇಶ್ವರ ಮಂದಿರಕ್ಕೆ ಭೇಟಿಗೈಯಲಿದ್ದಾರೆ. ಸಂಜೆಯಿಂದ ಮರುದಿನ ಮಂಗಳವಾರದ ತನಕ ನವಿ ಮುಂಬಯಿಯಲ್ಲಿ ಪಾದಪೂಜೆ, ಸಂಜೆ 07.30 ಗಂಟೆಯಿಂದ ನವಿ ಮುಂಬಯಿಯ ಘನ್ಸೋಲಿಯಲ್ಲಿನ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ಸಾರ್ವಜನಿಕ ದರ್ಶನ.

ಆ.13ನೇ ಬುಧವಾರದಂದು ಬೆಳಿಗ್ಗೆ ಮತ್ತು ಸಂಜೆ ಥಾಣೆಯಲ್ಲಿ ಪಾದುಕಾ ಪೂಜೆ. ಆ.14ನೇ ಗುರುವಾರ ಸಂಜೆ 07.30 ರಿಂದ ಥಾಣೆ ಪಶ್ಚಿಮದ ಎಲ್ಬಿಎಸ್ ಮಾರ್ಗದಲ್ಲಿನ ವುಡ್ಲ್ಯಾಂಡ್ ರಿಟ್ರೀಟ್ ಹೊಟೇಲ್ನಲ್ಲಿ ಸಾರ್ವಜನಿಕ ದರ್ಶನ ನಡೆಸಲಿದ್ದಾರೆ. ಆ ಪ್ರಯುಕ್ತ ಮಹಾನಗರದಲ್ಲಿನ ಸರ್ವ ಭಕ್ತಾಭಿಮಾನಿಗಳು ಶೀಗಳ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಗುರು ಕೃಪೆಗೆ ಪಾತ್ರರಾಗಬೇಕಾಗಿ ಹಾಗೂ ಹೆಚ್ಚಿನ ಮಾಹಿತಿ ಮತ್ತು ಪಾದಪೂಜೆ ಮಾಡಲಿಚ್ಚಿಸುವ ಗುರುಭಕ್ತರು ಮುಂಗಡವಾಗಿ ನ್ಯಾ| ಪ್ರಕಾಶ್ ಎಲ್.ಶೆಟ್ಟಿ (9821613229), ಚಂದ್ರಹಾಸ ರೈ (9892019999), ಬೋಜ ಶೆಟ್ಟಿ (28183963), ಪೇಟೆಮನೆ ಪ್ರಕಾಶ್ ಶೆಟ್ಟಿ (28064001) ಅವರನ್ನು ಸಂಪಕರ್ಿಸುವಂತೆ ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕ ಇದರ ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here