Saturday 20th, April 2024
canara news

ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜರುಗಿಸಲ್ಪಟ್ಟ ಸಂಶೋಧನಾ ಕಾರ್ಯಕ್ರಮ: ಸಂಶೋಧನೆ ದೃಷ್ಟಿ ತಿದ್ದುವ ಕಾರ್ಯ: ಡಾ| ಎಸ್.ಎಂ ಹಿರೇಮಠ

Published On : 30 Jun 2015   |  Reported By : Rons Bantwal


ಮುಂಬಯಿ, ಜೂ.30: ಬಹಳ ಜನ ವಿದ್ವಾಂಸರು ಸಾಹಿತ್ಯಾಸಕ್ತರು ಸಂಶೊಧನೆ ಎಂಬುದು ಅನಾಕರ್ಷಕ ಕ್ಷೇತ್ರವೆಂದು ಭಾವಿಸಿರುವುದು ಸರಿಯಲ್ಲ. ಸಂಶೋಧನೆ ಎಂಬುದು ಯಾವುದೇ ಜ್ಞಾನಶಾಖೆಯನ್ನು ಬೆಳೆಯಿಸುವ ಮಹತ್ವದ ಕ್ರಿಯೆಯಾಗಿದೆ. ಸತ್ಯದ ಪ್ರಾಮಾಣಿಕ ದರ್ಶನ ಮಾಡಿಸುವುದೇ ಸಂಶೋಧನೆಯ ಅತ್ಯಂತಿಕ ಧ್ಯೇಯವಾಗಿದೆ. ಜನತೆಯ ಚಿಂತನ ಕ್ರಮವನ್ನು ಬದಲಿಸಲು ಸಂಶೋಧನೆ ಸಹಕಾರಿಯಾಗಿದೆ. ಕನ್ನಡ ವಿಭಾಗ ಮುಂಬಯಿ ವಿಶ್ವ ವಿಧ್ಯಾಲಯದ ವಿದ್ಯಾಥಿ೯ ಮಿತ್ರರು ಬಹುಭಾಷಿಕ ನೆಲೆಯಲ್ಲಿ ತೌಲನಿಕ ಅಧ್ಯಯನ ಮಾಡಿ ಕೃತಿ ರೂಪದಲ್ಲಿ ಹೊರ ತಂದಿರುವುದು ಅಭಿಮಾನದ ಸಂಗತಿ ಎಂದು ಹಿರಿಯ ಸಂಶೋದಕ, ಗುಲ್ಬಗಾ೯ ವಿಶ್ವ ವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ| ಎಸ್.ಎಂ.ಹಿರೇಮಠ ನುಡಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಮಂಗಳವಾರ ಪೂವಾ೯ಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್ನ ಜೆ.ಪಿ ನಾಯಕ್ ಸಭಾಗೃಹದಲ್ಲಿ ಆಯೋಜಿಸಿದ್ದ `ಸಂಶೋಧನೆಗಳ ಇತಿಮಿತಿಗಳು' ವಿಚಾರಿತ ಕನ್ನಡ ಸಂಶೋಧನೆಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಡಾ| ಹಿರೇಮಠ ಮಾತನಾಡಿದರು.

ಅಂತರ್ ದೃಷ್ಟಿಯ ಕ್ರೀಯಾ ವಿಶೇಷವೇ ಸಂಶೋಧನೆ. ಇದರ ವ್ಯಾಪ್ತಿಯನ್ನು ತಿಳಿದಷ್ಟು ಕಡಿವೆ. ಸಂಶೋಧನೆಯು ಸಮಾಜಕ್ಕೆ ಹಿತವಾದ ಶೋಧನೆಯನ್ನು ನೀಡಬೇಕು. ಸಮಾಜದ ಹದೆಗೆಟ್ಟುವಿಕೆಗೆ ಸಂಶೋಧನೆಯಲ್ಲ, ಹೊಸದೃಷ್ಟಿ, ನೂತನ ಸೃಷ್ಟಿಯೇ ಸಂಶೋಧನೆ. ಇದು ಅಹಂಭಾವನೆ ಕ್ರಿಯೆಯಲ್ಲ. ಆಳ ಮತ್ತು ವ್ಯಾಪಕದ ದೃಷ್ಟಿಯಿಂದ ಸಂಶೋಧನೆ ಸಾಧ್ಯ ಎನ್ನುತ್ತಾ ಮುಂಬಯಿ ಕನ್ನಡ ವಿಭಾಗದಲ್ಲಿ ಕನ್ನಡದ ಪವಾಡಗಳೇ ನಡೆಯುತ್ತಿದೆ. ಇದರ ರೂವಾರಿ ಡಾ| ಜಿ.ಎನ್.ಉಪಾಧ್ಯರು ಎಂದು ಮುಂಬಯಿ ಕನ್ನಡ ವಿಭಾಗದ ಸಾಧನೆಯನ್ನು ಹಿರೇಮಠ ಕೊಂಡಾಡಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್.ಉಪಾಧ್ಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಡಾ| ಹಿರೇಮಠ ಅವರು ನಾಡಿನ ಹಿರಿಯ ಸಂಶೋಧಕರು. ಅವರದು ಬಹುಮುಖ ಪ್ರತಿಭೆ. ಕವಿಯಾಗಿ, ನಾಟಕಕಾರರಾಗಿ ಸೃಜನ ಕ್ಷೇತ್ರದಲ್ಲಿ ಮಿಂಚಿದವರು. ರಂಗಭೂಮಿ ಬೆಳ್ಳಿ ತೆರೆಯಲ್ಲಿ ಕೆಲಸ ಮಾಡಿದವರು. ಹೀಗಿದ್ದೂ ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಅವರು ಅಪಾರವಾದ ಕೃಷಿಗೈದವರು. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಸಂಶೋಧನ ಮಂಡಳಿಯ ವಿಷಯ ತಜ್ಞರಾಗಿ ಹಿರೇಮಠ ಅವರ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ವಿಭಾಗದ ಉನ್ನತಿಯಲ್ಲಿ ಅವರ ಪರಿಶ್ರಮವೂ ಇದೆ. ಇಂತಹ ಒಬ್ಬ ಸಕ್ರಿಯ ಸಂಶೋಧಕ, ಲೇಖಕ ಸಂಶೋಧನ ಮಂಡಳಿಯಲ್ಲಿರುವುದು ಹೆಮ್ಮೆಯ ವಿಚಾರ. ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ ಎಂದರು. ಕನ್ನಡದ ಬಲವರ್ಧನೆಗೆ ನಮ್ಮ ವಿಭಾಗ ಶ್ರಮಿಸುತ್ತಿದೆ. ಮುಖಾಮುಖಿಯಿಂದ ವಿದ್ವತ್ತನ್ನು ಹಂಚಿ ಕೊಳ್ಳುತ್ತಿದ್ದೇವೆ ಎಂದರು. ಬಳಿಕ ಮುಂಬಯಿ ವಿವಿ ಪರವಾಗಿ ಡಾ| ಹಿರೇಮಠ ಅವರನ್ನು ಗೌರವ ಪುರಸ್ಕಾರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು ಹಾಗೂ ಮುಂಬಯಿ ವಿಶ್ವ ವಿದ್ಯಾಲಯಕ್ಕೆ ನೂತನವಾಗಿ ನೇಮಕಗೊಂಡ ಉಪಕುಲಪತಿ ಡಾ| ಸಂಜಯ್ ದೇಶ್ಮುಖ್ ಅವರನ್ನು ಅಭಿನಂದಿಸಿದರು.

ಮಮತಾ ರಾವ್, ಸುಜ್ಞಾನಿ ಬಿರಾದರ್, ಅನುಸೂಯ ಗಲಗಲಿ, ವೀಣಾಶಾಸ್ತ್ರಿ, ಶೈಲಜಾ ಹೆಗಡೆ, ಶಿವರಾಜ್ ಎಂ.ಜಿ, ರಮಾ ಉಡುಪ, ದುರ್ಗಪ್ಪ ಕೋಟಿಯವರ್, ರೇವಣ್ಣಸಿದ್ಧ ಬಗಲಿ, ಅಮರ ನಾರಾಯಣಕರ್ ಮತ್ತಿತರರು ಪಾಲ್ಗೊಂಡಿದ್ದು, ವಿದುಷಿ ಶ್ಯಾಮಲಾ ಪ್ರಕಾಶ್ ಅವರ ಗೀತೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಕನ್ನಡ ವಿಭಾಗದ ಸಹಾಯಕಿ ಡಾ| ಪೂಣಿ೯ಮಾ ಎಸ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮದ ಸಂಚಾಲನೆಗೈದರು.ನಿರಂಜನ್ ಸಿ.ಎಸ್ ವಂದನಾರ್ಪಣೆಗೈದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here