Thursday 25th, April 2024
canara news

ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯ 58ನೇ ವಾಷಿ೯ಕ ಮಹಾಸಭೆ; ರಾಷ್ಟ್ರದ ವಾಸ್ತವಿಕ ಚಿಂತನೆ ಪ್ರತಿಯೋರ್ವರ ಕರ್ತವ್ಯವಾಗಲಿ:ಎಲ್.ವಿ ಅಮೀನ್

Published On : 31 Aug 2015   |  Reported By : Rons Bantwal


ಮುಂಬಯಿ, ಆ.31: ಕನ್ನಡ ಸಂಘ ಸಾಂತಾಕ್ರೂಜ್ (ರಿ). ಇದರ 58ನೇ ವಾಷಿ೯ಕ ಮಹಾಸಭೆಯು ಇಂದಿಲ್ಲಿ ಆದಿತ್ಯವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಎಲ್.ವಿ ಅಮೀನ್ ಅಧ್ಯಕ್ಷತೆಯಲ್ಲಿ ಜರುಗಿತು.

ಪದಾಧಿಕಾರಿಗಳನ್ನೊಳಗೊಂಡು ಎಲ್.ವಿ ಅಮೀನ್ ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆಯನ್ನೀಡಿ ಅಧ್ಯಕ್ಷೀಯ ಭಾಷಣಗೈದು ಆಧುನಿಕ ಯುಗದ ವಾಸ್ತವಿಕ ಚಿಂತನೆ ಪ್ರತಿಯೋರ್ವ ಭಾರತಿಯರು ಅರಿಯ ಬೇಕಾಗಿದೆ. ಸಮಾನತೆ ಹಾಗೂ ಐಕ್ಯತೆಯ ಬಾಳಿಗೆ ಸಂಸ್ಥೆಗಳ ಶ್ರಮ ಅವಶ್ಯವಾಗಿದ್ದು, ಪ್ರಚಲಿತ ಕಾಲಘಟ್ಟದಲ್ಲಿ ಸಂಘ ಸಂಸ್ಥೆಗಳ ಔಚಿತ್ಯವೇನು ಮತ್ತು ವಿದ್ಯಾಥಿ೯ಗಳ ಪ್ರೋತ್ಸಾಹದ ತೌಲನಿಕ ಪ್ರಶ್ನೆಗೆ ಕಾಲ್ಪನಿಕ ಉತ್ತರ ಸಮಂಜಸವಲ್ಲ. ಆದುದರಿಂದ ಸಂಘಗಳು ಸಮಾಜದ ಬಡತನದ ಆಳವನ್ನು ಅಳೆಯುವ ಮಾಪಕಗಳಾಗಿ ಸಮಾನತೆಯ ಬಾಳನ್ನು ಬೆಳಗಿಸುವ ಸೇತುವೆಗಳಬೇಕು ಎಂದು ಅಭಿಪ್ರಾಯಪಟ್ಟರು.

ಉದ್ಯಮಿಗಳಾದ ಜಗದೀಶ್ ಪಿ.ಅಮನ್, ಸಿಎ| ಪ್ರಕಾಶ್ ಶೆಟ್ಟಿ, ನ್ಯಾಯವಾದಿ ಎಸ್.ಬಿ ಅಮೀನ್, ರಘುರಾಮ ಶೆಟ್ಟಿ ಮತ್ತಿತರ ಮಹಾನೀಯರು ಉಪಸ್ಥಿತರಿದ್ದು, ಸಂಘದ ದತ್ತು ಸ್ವೀಕೃತ ವಿದ್ಯಾ ಥಿ೯ಗಳಿಗೆ ಸುಮಾರು ಒಂದು ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಆ ಥಿ೯ಕ ನೆರವು ವಿತರಿಸಿ ಶುಭಾರೈಸಿದರು.

ಸಂಘದ ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಕೋಶಾಧಿಕಾರಿ ಸಿಎ| ರಮೇಶ್ ಎ.ಶೆಟ್ಟಿ, ಜೊತೆ ಕೋಶಾಧಿಕಾರಿ ಆರ್.ಪಿ ಹೆಗ್ಡೆ, ಸಲಹಾ ಸಮಿತಿ ಸದಸ್ಯರಾದ ಬಿ. ಡಿ ಸುವರ್ಣ, ಬಾಹ್ಯ ಲೆಕ್ಕಪರಿಶೋಧಕ ಹೆಚ್.ಡಿ ಪೂಜಾರಿ, ಶಿಕ್ಷಣ ಸಮಿತಿ ಕಾಯಾ೯ಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾಯಾ೯ಧ್ಯಕ್ಷೆ ಶಾರದಾ ಎಸ್.ಪೂಜಾರಿ, ಸದಸ್ಯರುಗಳಾದ ಶಿವರಾಮ ಕೋಟ್ಯಾನ್, ಸುಮಾ ಎಂ.ಪೂಜಾರಿ, ಜಿ.ಆರ್ ಬಂಗೇರ, ಪ್ರಸನ್ನ ಶೆಟ್ಟಿ, ಜಯ ಎ.ಕೋಟ್ಯಾನ್, ಲಿಂಗಪ್ಪ ಅಮೀನ್, ಶಾಲಿನಿ ಜಿ.ಶೆಟ್ಟಿ, ಉಷಾ ವಿ.ಶೆಟ್ಟಿ, ಚಂದಯ್ಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಸಮಿತಿ ಕಾರ್ಯದಶಿ೯ ಲಕ್ಷ್ಮೀ ಎನ್.ಕೋಟ್ಯಾನ್ ಪ್ರಾರ್ಥನೆಗೈದರು. ಸಂಘದ ಗೌ| ಪ್ರ| ಕಾರ್ಯದಶಶಿ೯ ಶ್ರೀಮತಿ ಸುಜತಾ ಶೆಟ್ಟಿ ಸ್ವಾಗತಿಸಿ, ಗತವಾಷಿ೯ಕ ಮಹಾಸಭೆಯ ವರದಿ ವಾಚಿಸಿ ಸಭಾ ಕಲಾಪ ನಿರ್ವಹಿಸಿದರು. ಅಧ್ಯಕ್ಷ ಎಲ್.ವಿ ಅಮೀನ್ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಶಿಕ್ಷಣ ಸಮಿತಿ ಕಾರ್ಯದಶಿ೯ ಸುಧಾಕರ ಉಚ್ಚಿಲ್ ಫಲಾನುಭವಿ ಮಕ್ಕಳ ಯಾದಿ ವಾಚಿಸಿದರು. ಎನ್.ಎಂ ಸನೀಲ್, ಕೆ.ಸುಧಾಕರ್, ಸಭಿಕರ ಪರವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಜೊತೆ ಕಾರ್ಯದ ಶಿ೯ ಚಂದ್ರಹಾಸ ಜೆ.ಸುವರ್ಣ ಧನ್ಯವದಿಸಿದರು.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here