Friday 19th, April 2024
canara news

ಯು. ಆರ್. ಅನಂತಮೂತಿ೯ ನಿಧನ : ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ, ಮೃತರ ಗೌರವಾರ್ಥ ನಾಳೆ ಶಾಲಾ-ಕಾಲೇಜುಗಳು ಹಾಗೂ ಸಕಾ೯ರಿ ಕಚೇರಿಗಳಿಗೆ ರಜೆ ಘೋಷಣೆ,ಸಕಾ೯ರಿ ಗೌರವಗಳೊಡನೆ ಅಂತ್ಯ ಸಂಸ್ಕಾರ

Published On : 22 Aug 2014   |  Reported By : our correspondent


ಬೆಂಗಳೂರು, ಆಗಸ್ಟ್ 22 : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ ಯು ಆರ್ ಅನಂತಮೂತಿ೯ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆಯನ್ನು ಪ್ರಕಟಿಸಿರುವ ರಾಜ್ಯ ಸಕಾ೯ರ, ಮೃತರ ಗೌರವಾರ್ಥ ಆಗಸ್ಟ್ 23 ರಂದು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳು ಹಾಗೂ ಸಕಾ೯ರಿ ಕಚೇರಿಗಳಿಗೆ ರಜೆ ಘೋಷಿಸಿದೆ.

ಅಲ್ಲದೆ, ಮೃತರ ಕುಟುಂಬ ವರ್ಗದವರ ಜೊತೆಯಲ್ಲಿ ಸಮಾಲೋಚಿಸಿ ಸಕಲ ಸಕಾ೯ರಿ ಮಯಾ೯ದೆಗಳೊಡನೆ ಡಾ ಅನಂತಮೂತಿ೯ ಅವರ ಅಂತ್ಯಕ್ರಿಯೆ ನಡೆಸಲು ಸಕಾ೯ರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಶೋಕಾಚರಣೆಯ ಸಂದರ್ಭದಲ್ಲಿ ರಾಷ್ಟ್ರ ಧ್ವಜವನ್ನು ನಿಯತವಾಗಿ ಹಾರಿಸುವ ಎಲ್ಲಾ ಸಕಾ೯ರಿ ಕಟ್ಟಡಗಳಲ್ಲಿ ರಾಷ್ಟ್ರ ಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಲಾಗುವುದು. ಈ ಅವಧಿಯಲ್ಲಿ ಸಕಾ೯ರಿ ಸಮಾರಂಭಗಳು ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ.

ಕೃಷ್ಣ ಜಯಂತಿ ಸಮಾರಂಭ ಮುಂದೂಡಿಕೆ

ಡಾ ಯು ಆರ್ ಅನಂತಮೂತತಿ೯ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಆಗಸ್ಟ್ 23 ರಂದು ಬೆಂಗಳೂರಿನ ವಿಧಾನಸೌಧದ ಔತಣ ಸಭಾಂಗಣದಲ್ಲಿ ರಾಜ್ಯ ಸಕಾ೯ರದ ವತಿಯಿಂದ ಆಯೋಜಿಸದ್ದ ಶ್ರೀ ಕೃಷ್ಣ ಜಯಂತಿ ಸಮಾರಂಭವನ್ನು ಮುಂದೂಡಲಾಗಿದೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here