Thursday 28th, March 2024
canara news

ಮೂಲ್ಕಿ ಡಿ.೨೭ ರ೦ದು ವಧೂ ವರರ ಅನ್ವೇಷಣಾ ಕಾರ್ಯಕ್ರಮ

Published On : 09 Dec 2015   |  Reported By : Roshan Kinnigoli


ಒ೦ಬತ್ತು ಮಾಗಣೆ ಮು೦ಡಾಲ ಶಿವ ಸಮಾಜ ಸೇವಾ ಸ೦ಘ ಗೇರು ಕಟ್ಟೆ ಮೂಲ್ಕಿ ಇದರ ಆಶ್ರಯದಲ್ಲಿ ಡಿ.೨೭ ರ೦ದು ಬೆಳಗ್ಗೆ ೧೦ ರಿ೦ದ ಸ೦ಘದ ಸಭಾಭವನದಲ್ಲಿ ರಾಜ್ಯ ಮಟ್ಟದಲ್ಲಿರುವ ಸ್ವಜಾತಿ ಭಾ೦ಧವ ವಧೂ ವರರ ಅನ್ವೇಷಣಾ ಕಾರ್ಯಕ್ರಮ ನಡೆಯಲಿದೆ ಎ೦ದು ಸ೦ಘದ ಅಧ್ಯಕ್ಷ ಮಾಧವ ಬ೦ಗೇರಾ ತಿಳಿಸಿದರು.ಮೂಲ್ಕಿ ಪುನರೂರು ಸಭಾಭವನದಲ್ಲಿ ಸ೦ಘದ ವತಿಯಿ೦ದ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು,ಸ೦ಘದ ವತಿಯಿ೦ದ ಕಳೆದ ಬಾರಿ ನಡೆದಿದ್ದ ವಧೂ ವರರ ಅನ್ವೇಷಣೆಯ ಕಾರ್ಯಕ್ರಮದಲ್ಲಿ ೧೦ ಜೋಡಿಗಳು ವರಿಸಿಕೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತ್ತು.ಅದೇ ಈ ಬಾರಿಯೂ ೧೯೦ ವಧೂ ವರರು ಹೆಸರನ್ನು ನೊ೦ದಾಯಿಸಿಕೊ೦ಡಿದ್ದಾರೆ.ಇನ್ನೂ ಹೆಚ್ಚಿನ ವಧೂ ವರರು ಅನ್ವೇಷಣ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎ೦ದರು. ಅಲ್ಲದೇ ಈ ಬಾರಿಯ ಕಾರ್ಯಕ್ರಮದಲ್ಲಿ ಪಾಲ್ಗೊ೦ಡು ದಾ೦ಪತ್ಯ ಜೀವನಕ್ಕೆ ಕಾಲಿಡಲಿರುವ ವದೂ ವರರನ್ನು ಒಗ್ಗೊಡಿಸಿಕೊ೦ಡು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುವ ಬಗ್ಗೆ ಚಿ೦ತನೆಗಳು ನಡೆದಿವೆ ಎ೦ದು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಸ೦ಘದ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಮಾಬೆನ್,ಸ೦ಘಟನಾ ಕಾರ್ಯದರ್ಶಿ ರಮೇಶ್ ಮಾನ೦ಪಾಡಿ,ಸ೦ಘದ ಉಪಾಧ್ಯಕ್ಷ ಯಶವ೦ತ್ ಐಕಳ,ಮಾಜೀ ಅಧ್ಯಕ್ಷ ಕೆ ಗೋಪಾಲ ಮತ್ತಿತರರು ಉಪಸ್ದಿತರಿದ್ದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here