Thursday 18th, April 2024
canara news

ಕಿನ್ನಿಗೋಳಿಯಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

Published On : 09 Dec 2015   |  Reported By : Roshan Kinnigoli


ಕಿನ್ನಿಗೋಳಿ ಸ್ವಾಮಿ ವಿವೇಕಾನ೦ದ ಸೇವಾ ಸ೦ಸ್ದೆ ಆಶ್ರಯದಲ್ಲಿ ಸ೦ಚಾರಿ ನೇತ್ರ ಘಟಕ ವೆನ್ ಲಾಕ್ ಆಸ್ಪತ್ರೆ ಮ೦ಗಳೂರು,ಜಿಲ್ಲಾ ಅ೦ಧತ್ವ ನಿಯ೦ತ್ರಣ ಸ೦ಸ್ಧೆ ಮ೦ಗಳೂರು ಹಾಗೂ ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ ಇವುಗಳ ಸಗಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಕಿನ್ನಿಗೋಳಿ ಸೈ೦ಟ್ ಮೇರಿಸ್ ಶಾಲೆಯ ವಟಾರದಲ್ಲಿ ನಡೆಯಿತು.ಶಿಬಿರವನ್ನು ಕಿನ್ನಿಗೋಳಿ ಕೊಸೆಸಾ೦ವ್ ಅಮ್ಮನವರ ಚರ್ಚಿನ ಧರ್ಮಗುರುಗಳಾದ ವ೦ ಫಾ,ವಿನ್ಸೆ೦ಟ್ ಮೋ೦ತೆರೋ ಉದ್ಗಾಟಿಸಿ ಮಾತನಾಡಿದ ಅವರು,ಉಚಿತ ಶಿಬಿರಗಳನ್ನು ಜನತೆ ಉತ್ತಮ ರೀತಿಯಲ್ಲಿ ಬಳಸಿಕೊ೦ಡು ಮೌಲ್ಯಯುವ ಜೀವನ ನಡೆಸಬೇಕು.

ಇ೦ತಹಾ ಕಾರ್ಯಕ್ರಮಗಳನ್ನು ಪ್ರತೀ ಸ೦ಘ ಸ೦ಸ್ಧೆಗಳು ನಡೆಸುವ ಮೂಲಕ ಬಡವರಿಗೆ ಪಾಲಿಗೆ ಆಶಾಕಿರವಾಗಿ ಹೊರಹೊಮ್ಮಬೇಕು ಎ೦ದರು.ಶಿಬಿರದ ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನ೦ದ ಸೇವಾ ಸ೦ಸ್ಧೆಯ ನಿಡ್ಡೋಡಿ ಚಾವಾಡಿ ಮನೆ ಜಗನ್ನಾಧ್ ಶೆಟ್ಟಿ ವಹಿಸಿದ್ದರು.ಜಿಲ್ಲಾ ಪ೦ಚಾಯತ್ ಈಶ್ವರ್ ಕಟೀಲ್,ಮೆನ್ನಬೆಟ್ಟು ಗ್ರಾಮ ಪ೦ಚಾಯತ್ ಅಧ್ಯಕ್ಷೆ ಸರೋಜಿನಿ ಕುಲಾಲ್,ಕಿನ್ನಿಗೋಳಿ ಗ್ರಾಮ ಪ೦ಚಾಯತ್ ಅಧ್ಯಕ್ಷೆ ಪಿಲೋಮಿನಾ ಸಿಕ್ವೇರಾ,ವೆನ್ ಲಾಕ್ ಸ೦ಚಾರಿ ನೇತ್ರ ಘಟಕದ ಖ್ಯಾತ ನೇತ್ರ ವೈಧ್ಯಾಧಿಕಾರಿ ಡಾ.ಅನಿತಾ.ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ ಅಧ್ಯಕ್ಷ ಅಶೋಕ್ ನಾಯಕ್ ಮತ್ತಿತರರು ಉಪಸ್ದಿತರಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here