Wednesday 24th, April 2024
canara news

ಮಂಗಳೂರು ಪೊಲೀಸ್‌ ಅಧಿಕಾರಿ ಅಮಾನತು ;ಉನ್ನತ ಮಟ್ಟದ ತನಿಖೆಗೆ ದ.ಕ. ಬಿಜೆಪಿ ಆಗ್ರಹ

Published On : 10 Dec 2015   |  Reported By : Canaranews Network


ಮಂಗಳೂರು: ದಕ್ಷ ಪೊಲೀಸ್ ಅಧಿಕಾರಿ ಇನ್‌ಸ್ಪೆಕ್ಟರ್‌ ಪ್ರಮೋದ್‌ ಕುಮಾರ್‌ ಎಂಬ ಪೊಲೀಸ್‌ ಅಧಿಕಾರಿಯನ್ನೇ ಅಮಾನತು ಮಾಡುವಷ್ಟರ ಮಟ್ಟಿಗೆ ದ.ಕ. ಜಿಲ್ಲೆಯ ರಾಜಕೀಯ ಹಸ್ತಕ್ಷೇಪವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಮಿತಿ ಸರಕಾರವನ್ನು ಆಗ್ರಹಿಸಿದೆ.ದ.ಕ. ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆಯನ್ನು ರಾಜಕೀಯದ ಕೆಲವರು ನಿಯಂತ್ರಣ ಮಾಡುತ್ತಿದ್ದಾರೆ ಎಂಬುದನ್ನು ಜಿಲ್ಲಾ ಬಿಜೆಪಿ ಈ ಹಿಂದೆಯೇ ಹೇಳಿತ್ತು. ಇದೀಗ ಅದು ಮತ್ತೊಮ್ಮೆ ಸಾಭೀತಾಗಿದೆ.

ಮರಗಳ್ಳತನ, ಮರಳು ಮಾಫಿಯಾ, ಕೊಲೆಯಂತಹ ಅಹಿತಕರ ಘಟನೆಗಳು ನಡೆದಾಗಲೂ ಇಲಾಖೆಯನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಕಾಂಗ್ರೆಸ್‌ ನಾಯಕರು ಬಿಡುತ್ತಿಲ್ಲ ಎಂಬುದು ಕೂಡ ಸಾಬೀತಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ಕಾನೂನು ಬಾಹಿರ ಕೃತ್ಯ ನಡೆಸಿದಾತನನ್ನು ಬಂಧಿಧಿಸಿದ ದಕ್ಷ ಅಧಿಧಿಕಾರಿ ಎಂದೇ ಗುರುತಿಸಿಕೊಂಡ ಇನ್‌ಸ್ಪೆಕ್ಟರ್‌ ಪ್ರಮೋದ್‌ ಕುಮಾರ್‌ ಅವರನ್ನು ಅಮಾನತು ಮಾಡುವಷ್ಟರ ಮಟ್ಟಿಗೆ ಆಡಳಿತ ತಲುಪಿರುವುದು ನಿಜಕ್ಕೂ ದುರದೃಷ್ಟಕರ ಎಂದು ಬಿಜೆಪಿ ಹೇಳಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here