Thursday 25th, April 2024
canara news

ಮಂಗಳೂರಿನಲ್ಲಿ ವಿಚಿತ್ರ ಜೀವಿ ಪ್ರತ್ಯಕ್ಷ್ಯ!

Published On : 10 Dec 2015   |  Reported By : Canaranews Network


ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲದ ಬೋಳಿಯಾರು ಗ್ರಾಮದಲ್ಲಿ ಮಾನವಾಕೃತಿಯ ವಿಚಿತ್ರಪ್ರಾಣಿಯೊಂದು ರಾತ್ರಿ ವೇಳೆ ಸಂಚರಿ ಸುತ್ತಿದ್ದು ಭಯದ ವಾತಾವರಣ ಸೃಷ್ಟಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಗಳೂರಿನ ಈ ಪ್ರದೇಶದಲ್ಲಿ ಕಾಣಿಸಿಕೊಂಡಿರುವುದು ಏಲಿಯನ್ನಾ? ಅಥವಾ ಇನ್ಯಾವುದೋ ವಿಚಿತ್ರ ಪ್ರಾಣಿಯಾ? ಎಂಬುದು ಇನ್ನಷ್ಟೆ ತಿಳಿದು ಬರಬೇಕಿದೆ.ದಟ್ಟ ಅರಣ್ಯದಿಂದ ಕೂಡಿರುವ ಬೋಳಿಯಾರು ಗ್ರಾಮದ ಕಾಂಪಾಡಿ ಹಾಗೂ ಬಡಕಿನ ಕಟ್ಟೆಯಲ್ಲಿ ಕೆಲವು ದಿನಗಳಿಂದ ಈ ಜೀವಿ ಭಾರೀ ಆತಂಕ ಸೃಷ್ಟಿಸಿದೆ

. ಕೆಲವೊಮ್ಮೆ ನಾಲ್ಕು ಕಾಲುಗಳಿಂದ, ಕೆಲವು ಸಲ ಎರಡು ಕಾಲುಗಳಿಂದ ಜನರನ್ನು ಬೆನ್ನಟ್ಟಿ ಬರುವ ಈ ವಿಚಿತ್ರ ಜೀವಿಯ ಕುರಿತು ಹತ್ತಾರು ಕಥೆಗಳು ಹುಟ್ಟಿಕೊಂಡಿವೆ.ಕಳೆದ ಒಂದು ವಾರದಿಂದ ರಾತ್ರಿಯಾಗುತ್ತಿದ್ದಂತೆ ಪಕ್ಕದ ಕಾಡಿನಿಂದ ಏಕಾಏಕಿ ಊರಿಗೆ ಬರುವ ಈ ಜೀವಿ ಚಿಕ್ಕ ಮಕ್ಕಳು ಜೋರಾಗಿ ಕಿರುಚುವಂತೆ ಏರು ಧ್ವನಿಯಲ್ಲಿ ಚೀರುತ್ತಾ ಸಂಚರಿಸುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.ಈ ಜೀವಿಯನ್ನು ಪತ್ತೆ ಮಾಡಲು ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here