Thursday 25th, April 2024
canara news

ಯಕ್ಷಗಾನಕ್ಕೆ ಮುಂಬಯಿ ಅತ್ತೆ ಮನೆ ಇದ್ದಂತೆ: ಅಂಬಾತನಯ ಮುದ್ರಾಡಿ

Published On : 31 Aug 2014   |  Reported By : Ronida Mumbai


ಬಿಲ್ಲವರ ಎಸೋಸಿಯೇಶನ್ ಮುಂಬಯಿ ದಶ ವಾಷಿ೯ಕ ಯಕ್ಷಗಾನ ಕಲಾ ಪ್ರಶಸ್ತಿ ಪ್ರದಾನ

ಮುಂಬಯಿ, ಆ.29: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಸ್ಥೆಯು ವರ್ಷಂಪ್ರತಿ ತನ್ನ ಸಂಚಲಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ವತಿಯಿಂದ ಕೊಡಮಾಡುವ ಜಯ ಸಿ. ಸುವರ್ಣ ಅವರ ಮಾತೃಶ್ರೀ ದಿ| ಅಚ್ಚು ಸಿ.ಸುವರ್ಣ ಸವಿನೆನಪಿನ ದಶ ವಾಷಿ೯ಕ ಯಕ್ಷಗಾನ ಕಲಾ ಪ್ರಶಸ್ತಿ-2014 ಪ್ರದಾನ ಸಮಾರಂಭವು ಇಂದಿಲ್ಲಿ ಶುಕ್ರವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀನಾರಾಯಣ ಗುರು ಸಭಾಗೃಹದಲ್ಲಿ ಪ್ರದಾನಿಸಲ್ಪಟ್ಟಿತು.

ಅಸೋಸಿಯೇಶನ್ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ನ ಕಾಯಾ೯ಧ್ಯಕ್ಷ, ಜಯ ಸಿ.ಸುವರ್ಣ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ನಾಡಿನ ಪ್ರಸಿದ್ಧ ಸಾಹಿತಿ, ವಿದ್ವಾಂಸ ಅಂಬಾತನಯ ಮುದ್ರಾಡಿ ಅವರು ಖ್ಯಾತ ಯಕ್ಷಗಾನ ಕಲಾವಿದ ಗಣೇಶ ಚಂದ್ರಮಂಡಲ ಅವರಿಗೆ ಶ್ರೀಮತಿ ಬಾನುಮತಿ ಚಂದ್ರಮಂಡಲ ಅವರನ್ನೊಳಗೊಂಡು ಯಕ್ಷಗಾನ ಕಲಾ ಪ್ರಶಸ್ತಿ-2014ಯನ್ನು ಪ್ರದಾನಿಸಿ ಶುಭಾರೈಸಿದರು. ಗೌರವ ಅತಿಥಿಯಾಗಿ ಸಂಗೀತ ವಿದ್ವಾನ್ ಬ್ರಹ್ಮಾವರದ ಚಂದ್ರಶೇಖರ ಕೆದ್ಲಾಯ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಉಪಸ್ಥಿತರಿದ್ದರು.

ನಾನು ಬಹುದೊಡ್ಡ ಕಲಾಭಿಮಾನಿ. ಹಗಲಿರುಳು ಎನ್ನದೆ ಆಟ-ಬಯಲಾಟ, ಯಕ್ಷಗಾನ, ನಾಟಕಗಳನ್ನು ವೀಕ್ಷಿಸುವ ಹವ್ಯಾಸ ಮೈಗೂಡಿಸಿದ್ದ ನನ್ನಲ್ಲಿ ಕಲೆಯನ್ನು ಬೆಳೆಸುವ ಆಶಯ ಒಂದೆಡೆ ಕಾಡುತ್ತಿತ್ತು. ಮತ್ತೊಂದೆಡೆ ಕಲಾವಿದರಿಗೆ ಪ್ರೋತ್ಸಾಹಿಸಿದಾಗಲೇ ಕಲಾಪ್ರಕಾರಗಳ ಉಳಿವು ಸಾಧ್ಯ ಎನ್ನುವ ಚಿಂತನೆ ಇಂತಹ ಪ್ರೋತ್ಸಾಹಕ್ಕೆ ಕಾರಣೀಭೂತವಾಯಿತು ಜಯ ಸುವರ್ಣರು ಎಂದರು.

ಹಿರಿಯ ಯಕ್ಷಗಾನ ಸಂಘಟಕ ಹೆಚ್.ಬಿ.ಎಲ್ ರಾವ್ ಪ್ರಶಸ್ತಿ ಬಗ್ಗೆ ಮಾಹಿತಿಯನ್ನೀಡಿ ಸನ್ಮಾನಗಳೇ ಬೇಡ ಎನ್ನುವ ಈ ಕಾಲದಲ್ಲಿ ಈ ಗೌರವ ಸ್ವೀಕರಿಸಿದಾಗಲೇ ಬದುಕು ಸಾರ್ಥಕ ಎನ್ನುವ ಕಲಾಕಾರರ ಆಶಯಕ್ಕೆ ಈ ಪುರಸ್ಕಾರ ಪೂರಕವಾಗಿದೆ. ಸುಮಾರು 70 ವರ್ಷಗಳ ಸೇವಾವಧಿಯ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾಕಾರರು, ಸಂಘಟಕರು ನಿದ್ರೆಕಳೆದು ಕಲಾವಿದರನ್ನು ಪ್ರೋತ್ಸಾಹಿಸಿರುವುದು ಹರಸಾಹಸದ ವಿಚಾರ. ಮಂಡಳಿಯ ಪ್ರಸಕ್ತ ಕಾಯಾ೯ಧ್ಯಕ್ಷ ಸಿ.ಟಿ ಸಾಲ್ಯಾನ್ ಅವರ ಹಗಲಿರುಳ ಸೇವೆ ಅನನ್ಯವಾದರು. ಈ ಪುರಸ್ಕಾರ ಯಕ್ಷಗಾನದ ಚರಿತ್ರೆಯಲ್ಲೇ ದಾಖಲೆ ಸೃಷ್ಠಿಸಿದೆ. ಯಕ್ಷಗಾನ ಕ್ಷೇತ್ರದಲ್ಲಿ ರೂಪಾಯಿ 25,000 ನಗದು ನೀಡಿ ಗೌರವಿಸುವ ಏಕೈಕ ಮೊತ್ತಮೊದಲ ಪ್ರಶಸ್ತಿಯಾಗಿ ಯಕ್ಷಗಾನ ಸಾಹಿತ್ಯಕ್ಕೆ ಮೌಲ್ಯ ತಂದ ಪ್ರಶಸ್ತಿಯಾಗಿದೆ ಎನ್ನುವುದೇ ಅಭಿಮಾನ. ಬಹುಶಃ ಜಾತ್ಯಾತೀತವನ್ನು ಬಿಲ್ಲವರಿಂದ ಕಲಿಯ ಬೇಕಾಗಿದೆ. ಭವಿಷ್ಯತ್ತಿನಲ್ಲೂ ಕಲಾತ್ಮಕ ಮತ್ತು ಸಾಹಿತ್ಯಾತ್ಮಕವಾಗಿ ಈ ಮಂಡಳಿ ಬೆಳೆದು ಕಲಾವಿದರ ಬದುಕಿಗೆ ತವರುಮನೆಯಂತಾಗಲಿ ಎಂದರು.

ಯಕ್ಷಗಾನಕ್ಕೆ ಮುಂಬಯಿ ಅತ್ತೆ ಮನೆ ಇದ್ದಂತೆ ಇಲ್ಲಿ ಯಕ್ಷಗಾನಕ್ಕೆ ಕೊಡುತ್ತಿರುವ ಉತ್ತೇಜನ ಸ್ಮರಣೀಯವಾದದ್ದು. ಯಕ್ಷಗಾನ ಬಯಲು ವಿಶ್ವವಿದ್ಯಾಲಯ. ಯಕ್ಷಗಾನದ ಮೂಲಕ ಅಚ್ಚಗನ್ನಡ ಉಳಿದಿದೆ. ದಕ್ಷಿಣ ಕನ್ನಡದಲ್ಲಿ ಕನ್ನಡ ಉಳಿಯುವುದಕ್ಕೆ ಯಕ್ಷಗಾನವೂ ಕಾರಣವಾಗಿದೆ. ಬಿಲ್ಲವರ ಎಸೋಸಿಯೇಶನ್ ಜಾತಿಯನ್ನು ಮೀರಿದ ಸಂಸ್ಥೆ. ಗುರು ಕರುಣೆಯಿಂದ ಈ ಸಂಸ್ಥೆ ಎತ್ತರಕ್ಕೆ ಏರಿದೆ. ಬಿಲ್ಲವರ ಎಸೋಸಿಯೇಶನ್ನ ಗೌ. ಅಧ್ಯಕ್ಷ ಜಯ ಸಿ. ಸುವರ್ಣರು ತಮ್ಮ ತಾಯಿಯ ಹೆಸರಿನಲ್ಲಿ ಕೊಡುತ್ತಿರುವ ಈ ಪ್ರಶಸ್ತಿ ಯಕ್ಷಗಾನದ ಅಭಿವೃದ್ಧಿಗೆ ಪೂರಕವಾಗಿದೆ. ಇನ್ನಷ್ಟು ಇಂತಹ ಜಯ ಸುವರ್ಣರು ಹುಟ್ಟಿಬರಲಿ. ಪ್ರಶಸ್ತಿಗಳು ಹೆಚ್ಚುತ್ತಿರಲಿ ಎಂಬುದಾಗಿ ಖ್ಯಾತ ಸಾಹಿತಿ, ಅರ್ಥಧಾರಿ, ಗಾಮಕಿ ಅಂಬಾತನಯ ಮುದ್ರಾಡಿಯವರು ತಿಳಿಸಿದರು.


ತಾಯಿ ಮಕ್ಕಳ ಬಾಂಧವ್ಯ ನಶಿಸಿ ಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ಯಕ್ಷಗಾನ ಕಲಾ ಪ್ರಶಸ್ತಿಯ ಮೂಲಕ ಜಯ ಸಿ. ಸುವರ್ಣರು ತಮ್ಮ ತಾಯಿಯನ್ನು ಸ್ಮರಿಸುತ್ತಿರುವುದು ಅಭಿಮಾನದ ಸಂಗತಿ. ಅವರ ಮಾತೃ ಭಕ್ತಿ ಮೆಚ್ಚುವಂತಿದೆ. ಪ್ರಶಸ್ತಿಗೆ ಹೆಮ್ಮೆ ಪಡುತ್ತೇನೆ. ಯಕ್ಷ ಸಾಗರದಲ್ಲಿ ನಾನು ಸಣ್ಣ ವ್ಯಕ್ತಿ. ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಪ್ರಶಸ್ತಿಗೆ ಉತ್ತರಿಸಿ ಗಣೇಶ ಚಂದ್ರಮಂಡಲ ನುಡಿದರು.

ಚಂದ್ರಶೇಖರ ಪಾಲೆತ್ತಾಡಿ ಮಾತನಾಡಿ ಯಕ್ಷಗಾನ ಉಳಿಸುವ ನೆಲೆಯಲ್ಲಿ ಇಂಥಹ ಪ್ರಶಸ್ತಿ ಸ್ವಾಗತಾರ್ಹ ಹೆಜ್ಜೆ. ಯಕ್ಷಗಾನದ ತವರೂರಾದ ದಕ್ಷಿಣ ಕನ್ನಡದಲ್ಲೂ ಇಂತಹ ಪ್ರಶಸ್ತಿಗಳು ಹುಟ್ಟಿ ಬರಬೇಕು. ಆಗ ಇದು ಕಲಾವಿದರಿಗೆ ಆಧಾರವಾಗಬಲ್ಲದು ಎಂದು ತಿಳಿಸಿದರು.

ಬಿಲ್ಲವರ ಎಸೋಸಿಯೇಶನಿನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಮಾತನಾಡುತ್ತಾ ಈ ರೀತಿಯ ಪ್ರಾಯೋಜಕತ್ವದ ಕಾರ್ಯಕ್ರಮಗಳು ಇನ್ನೂ ಜರಗಬೇಕು ಎಂದು ತಿಳಿಸಿದ ಅವರು ದಿ| ಈಶ್ವರ ಹೆಜಮಾಡಿಯವರ ತ್ಯಾಗ, ಸಮಾಜ ಸೇವೆಯನ್ನು ನೆನಪಿಸಿಕೊಂಡರು. ಅದೇ ರೀತಿ ಇಂದಿನ ಯಕ್ಷಗಾನವನ್ನು ಪ್ರಾಯೋಜಿಸಿದ ದಿ| ಹೆಜಮಾಡಿ ಕುಟುಂಬವನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ಅಸೋಸಿಯೇಶನ್ನ ಉಪಾಧ್ಯಕ್ಷರುಗಳಾದ ಚಂದ್ರಶೇಖರ್ ಎಸ್.ಪೂಜಾರಿ, ಜ್ಯೋತಿ ಕೆ. ಸುವರ್ಣ ಮತ್ತು ಭಾಸ್ಕರ್ ಎಂ.ಸಾಲ್ಯಾನ್, ಗೌ| ಪ್ರ| ಕೋಶಾಧಿಕಾರಿ ಭಾಸ್ಕರ ವಿ.ಬಂಗೇರಾ, ಮಹಿಳಾ ವಿಭಾಗದ ಕಾಯಾ೯ಧ್ಯಕ್ಷೆ ಶ್ರೀಮತಿ ಶಕುಂತಳಾ ಕೆ. ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷ ಎಲ್.ವಿ ಅಮೀನ್, ಶ್ರೀಮತಿ ಲೀಲಾವತಿ ಜಯ ಸುವರ್ಣ ಉಪಸ್ಥಿತರಿದ್ದು, ಯಕ್ಷಗಾನ ಕಲಾವಿದ ವಾಸುದೇವ ಮಾನಾ೯ಡ್ ಅಭಿನಂದನಾ ಭಾಷಣಗೈದರು.

ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಧ್ಯಕ್ಷ ಸಿ.ಟಿ ಸಾಲ್ಯಾನ್ ಸ್ವಾಗತಿಸಿದರು. ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಸಂಪಾದಕ ಹರೀಶ್ ಕೆ. ಹೆಜ್ಮಾಡಿ ಪುರಸ್ಕೃತರನ್ನು ಪರಿಚಯಿಸಿದರು. ಅಸೋಸಿಯೇಶನ್ನ ಗೌ| ಪ್ರ| ಕಾರ್ಯದಶಶಿ೯ ಡಾ| ಯು. ಧನಂಜಯ ಕುಮಾರ್ ಪ್ರಾಸ್ತವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿವಾ೯ಹಿಸಿದರು. ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಧ್ಯಕ್ಷ ಸಿ.ಟಿ ಸಾಲ್ಯಾನ್ ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿಯ ಗೌ| ಕಾರ್ಯದಶಿ೯ ಧರ್ಮಪಾಲ ಜಿ.ಅಂಚನ್ ಧನ್ಯವದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ವಿದ್ವಾನ್ ಬ್ರಹ್ಮಾವರದ ಚಂದ್ರಶೇಖರ ಕೆದ್ಲಾಯ ವಾಚಿಸಿದ್ದ ಜೈಮಿನಿ ಭಾರತ ಆಧಾರಿತ `ಪ್ರಮೀಳ ಸಂಧಾನ' ವಿಷಯದ ಗಮಕ ವಾಚನಕ್ಕೆ ಹರಿದಾಸ ಅಂಬಾತನಯ ಮುದ್ರಾಡಿ ವ್ಯಾಖ್ಯಾನಗೈದರು. ಕೊನೆಯಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯು `ಕುಶ-ಲವ' ಯಕ್ಷಗಾನ ಪ್ರದಶಿ೯ಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here