Friday 29th, March 2024
canara news

ಶಿಕ್ಷಣ ಸಂಸ್ಥೆಗಳಿಂದ ಸಮಾಜದ ರಕ್ಷಣೆ: ಸಚಿವ ಸೊರಕೆ

Published On : 31 Aug 2014   |  Reported By : our correspondent


ಉಡುಪಿ, ಆ.31: ಉದ್ಯಾವರ ಕೊರಂಗ್ರಪಾಡಿ ರಸ್ತೆಯ ಎಂಇಟಿ ಪಬ್ಲಿಕ್ ಸ್ಕೂಲ್ನ ನೂತನ ಕಟ್ಟಡದ ಶಿಲಾನ್ಯಾಸ ಹಾಗೂ ನೂತನ ಶಾಲಾ ಸಭಾಂಗಣ ದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ರವಿವಾರ ನೆರವೇರಿಸಿದರು.

ಭಾರತದಲ್ಲಿರುವ ಎಲ್ಲ ಸಮುದಾಯದವರು ಶಿಕ್ಷಣದೊಂದಿಗೆ ಪ್ರಗತಿ ಸಾಧಿ ಸಿದರೆ ಮಾತ್ರ ದೇಶದ ಅಭಿವದ್ಧಿ ಹೊಂದಲು ಸಾಧ್ಯ. ಹಿಂದೆ ಶಿಕ್ಷಣದಲ್ಲಿ ಬಹಳಷ್ಟು ಹಿಂದುಳಿದ ಮುಸ್ಲಿಮ್ ಸಮುದಾಯ ಇಂದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಶಿಕ್ಷಣ ಸಂಸ್ಥೆಗಳು ಇಡೀ ಸಮಾಜಕ್ಕೆ ರಕ್ಷಣೆ ನೀಡುವ ಕೆಲಸ ಮಾಡುತ್ತದೆ ಎಂದು ಸಚಿವರು ಹೇಳಿದರು.

ಅಧ್ಯಕ್ಷತೆಯನ್ನು ಮಿಲ್ಲತ್ ಏಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಅಲ್ಹಾಜ್ ಅಬ್ದುಲ್ ಜಲೀಲ್ ಸಾಹೇಬ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ರಘುಪತಿ ಭಟ್, ಉದ್ಯಾವರ ಗ್ರಾಪಂ ಅಧ್ಯಕ್ಷ ವಿಜಯ ಕುಮಾರ್ ಉದ್ಯಾವರ, ಉಡುಪಿ ಕ್ಷೇತ್ರ ಶಿಕ್ಷಣ ಇಲಾಖೆಯ ಸುರೇಶ್ ಭಟ್, ದುಬೈಯ ಉದ್ಯಮಿ ಎಂ.ಇ.ಮುಳೂರು ಭಾಗವಹಿಸಿದ್ದರು.

ಟ್ರಸ್ಟಿಗಳಾದ ಹಾಜಿ ಅಬ್ದುಲ್ಲ ಪರ್ಕಳ, ಖಲೀಮುಲ್ಲಾ ತೋನ್ಸೆ ಉಪಸ್ಥಿತರಿ ದ್ದರು. ಶಾಲೆಯ ಆಡಳಿತಾಧಿಕಾರಿ ಖಲೀಲ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತ ನಾಡಿ, ಸ್ವಾಗತಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here