Saturday 20th, April 2024
canara news

ರಾಯನ್ ಸಂಸ್ಥೆ `ಸ್ಟೂಡೆಂಟ್ ಪಾರ್ಲಿಮೆಂಟ್' ರಚಿಸಬೇಕು:ರಾಜ್ಯಪಾಲ ವಿದ್ಯಾಸಾಗರ್

Published On : 08 Jan 2016   |  Reported By : Rons Bantwal


ವರ್ಣಮಯ ರಾಯನ್'ಸ್ 14ನೇ ಮಕ್ಕಳ ಅಂತರಾಷ್ಟ್ರೀಯ ಉತ್ಸವಕ್ಕೆ ಚಾಲನೆ
ರಾಯನ್ ಸಂಸ್ಥೆ `ಸ್ಟೂಡೆಂಟ್ ಪಾರ್ಲಿಮೆಂಟ್' ರಚಿಸಬೇಕು:ರಾಜ್ಯಪಾಲ ವಿದ್ಯಾಸಾಗರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.08: ದೇಶದ ಗುಣಮಟ್ಟದ ಶಿಕ್ಷಣಕ್ಕೆ ರಾಯನ್'ಸ್ ಸಂಸ್ಥೆಯ ಪಾಲುಗಾರಿಗೆ ಮೆಚ್ಚುಗೆಯದ್ದಾ ಗಿದೆ. ರಾಷ್ಟ್ರದಾದ್ಯಂತ ನೂರಾರು ಇಂಟರ್‍ನೇಶನಲ್ ಶಾಲೆಗಳನ್ನು ತೆರೆದು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಸೇವೆ ಗಣನೀಯ ಮತ್ತು ಗಮನೀಯವಾದದ್ದು. ಇದರ ಜೊತೆಜೊತೆಗೆ ಮಕ್ಕಳಲ್ಲಿನ ಪ್ರತಿಭೆಗಳ ಗುರುತಿಸುವಿಕೆ, ಆಧುನಿಕತೆಯ ಜ್ಞಾನೋದಯ, ಕ್ರೀಡಾಸಕ್ತಿ, ವೈಜ್ಞಾನಿಕ ಪೆÇ್ರೀತ್ಸಾಹ, ಪರಿಸರ ಪ್ರೇಮ ಬೆಳೆಸಿ ಮಕ್ಕಳಲ್ಲಿ ಸಂಸ್ಕಾರಯುತ, ಶಿಸ್ತುಬದ್ಧಯೊಂದಿಗೆ ಭಾವೈಕ್ಯತೆ ಹಾಗೂ ಸಾಮರಸ್ಯದ ಬದುಕು ರೂಪಿಸಲು ಉತ್ತೇಜಿಸುವಿಕೆ ಅನನ್ಯವಾಗಿದೆ ಎಂದು ಮಹಾರಾಷ್ಟ್ರದ ರಾಜ್ಯಪಾಲ ಚೆನ್ನಮಣೆನಿ ವಿದ್ಯಾಸಾಗರ್ ರಾವ್ ತಿಳಿಸಿದರು.

ರಾಯನ್'ಸ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಯು ಮುಂಬಯಿ ಸಯಾನ್ ಕಿಂಗ್‍ಸರ್ಕಲ್ ಅಲ್ಲಿನ ಶ್ರೀ ಷಣ್ಮುಖಾನಂದ ಚಂದ್ರಶೇಖರ ಸರಸ್ವತಿ ಸಭಾಗೃಹದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ 14ನೇ ಮಕ್ಕಳ ಅಂತರಾ ಷ್ಟ್ರೀಯ ಪ್ರದರ್ಶನ ಕಲೆ ರಾಯನ್'ಸ್ ಬ್ಯಾನರ್ ಬಿಡಿಸಿ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತು ರಾಜ್ಯಪಾಲ ವಿದ್ಯಾಸಾಗರ್ ಮಾತನಾಡಿದರು.

ಜಾಗತಿಕ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಯುವ ಸಾಂಸ್ಕøತಿಕ ರಾಯಭಾರಿಗಳ ಮೂಲಕ ಸಂಸ್ಕøತಿ ಮತ್ತು ಮೌಲ್ಯಗಳನ್ನು ಬೆರೆಸುವ ಉದ್ದೇಶ ಸ್ತುತ್ಯರ್ಹ. ಈ ಮೂಲಕ ನಮ್ಮಲ್ಲಿನ ಮಕ್ಕಳಿಗೆ ವಿಶ್ವಮಾನ್ಯತೆಗೆ ಅವಕಾಶ ದೊರೆಯುವುದು. ರಾಷ್ಟ್ರದ ಪ್ರಧಾನಿಯವರ ಕನಸಿನ ಸ್ವಚ್ಛ ಭಾರತದ ಯೋಜನೆಯಲ್ಲೂ ಕೈಜೋಡಿಸಿ ರುವ ಈ ಸಂಸ್ಥೆ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟು ಫುಡ್‍ಬಕೇಟ್ ಯೋಜನೆ ಕೈಗೊಂಡು ಬಡಮಕ್ಕಳ ಹಸಿವು ನೀಗಿಸುತ್ತಿರುವುದು ಶ್ಲಾಘನೀಯ. ಮಕ್ಕಳಿಗೆ ಬರೇ ಪುಸ್ತಕದ ತಿಳುವಳಿಕೆ ನೀಡದೆ ಅವರಲ್ಲಿನ ನೈಜ್ಯತೆಯನ್ನು ಗುರುತಿಸಿ ಜಾಗತೀಕವಾಗಿ ಬೆಳೆಸುವ ಈ ಸಂಸ್ಥೆ ಭವಿಷ್ಯತ್ತಿನಲ್ಲಿ ರಾಯನ್'ಸ್ ಸಂಸ್ಥೆ ಸ್ಟೂಡೆಂಟ್ ಪಾರ್ಲಿಮೆಂಟ್ ರಚಿಸಬೇಕು. ಆವಾಗ ಭವಿಷ್ಯತ್ತನ್ನು ರೂಪಿಸುವ ಯುವ ಜನಾಂಗಕ್ಕೆ ಆಧುನಿಕ ಬದುಕಿನ ಯೋಚನೆಗಳ ವಿಕಾಸಕ್ಕೆ ನೆರವಾಗಬಹುದು. ರಾಷ್ಟ್ರದಲ್ಲಿನ ರಾಜಕೀಯ ಕ್ಷೇತ್ರವು ಸ್ವಚ್ಛ ಮತ್ತು ಶಿಸ್ತುಬದ್ಧವಾಗಿ ಮುನ್ನಡೆದರೆ ಶ್ರೇಷ್ಠ ಭಾರತದ ನಿರ್ಮಾಣ ಇನ್ನಷ್ಟು ಸುಲಭ ಸಾಧ್ಯವಾಗಲಿದೆ ಎಂದು ಚೆನ್ನಮಣೆನಿ ವಿದ್ಯಾಸಾಗರ್ ಆಶಯ ವ್ಯಕ್ತ ಪಡಿಸಿದರು.

ವಿಶೇಷ ಅತಿಥಿüಯಾಗಿ ಬಾಲಿವುಡ್ ತಾರೆಯರಾದ ಜೂಹಿ ಚಾವ್ಲಾ, ದಿವ್ಯದತ್ತಾ, ಬಾಲಿವುಡ್‍ನ ಕೋರಿಯೋಗ್ರಫರ್ ಸರೋಜ್ ಖಾನ್, ಶೈನಾ ಎನ್.ಸಿ., ಉದ್ಯಮಿಗಳಾದ ಭರತ್ ದಾಭೋಲ್ಕರ್, ಜಯ ಲೂಲಾ, ಗುಲ್ ಕ್ಲಿಪಾಣಿ, ಕಿರಣ್ ಶಾಂತರಾಮ್, ಸುಭಿ ಸಾಮ್ವೆಲ್, ಪಾಸ್ಟರ್ ಶೇಖರ್ ಕಲ್ಯಾಣ್ಫುರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ರಾಯನ್'ಸ್ ಸಾಧನೆಯನ್ನು ಶ್ಲಾಘಿಸಿ ಶುಭಕೋರಿದರು.

ರಾಷ್ಟ್ರಗೀತೆಯ ಬಳಿಕ ವಿದೇಶಿ ಮಕ್ಕಳ ತಂಡದ ವಂದೇ ಮಾತರಂ ನೃತ್ಯದೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ರಾಯನ್'ಸ್ ಸಮೂಹದ ಸಂಸ್ಥಾಪಕ ಡಾ| ಆಗಸ್ಟಿನ್ ಎಫ್.ಪಿಂಟೋ ಪ್ರಸ್ತಾವಿಕ ನುಡಿಗಳನ್ನಾಡಿ ರಾಜ್ಯಪಾಲ ವಿದ್ಯಾಸಾಗರ್ ಅವರಿಗೆ ಪುಷ್ಫಗುಪ್ಚ, ಸ್ಮರಣಿಕೆಂiÀÀನ್ನೀಡಿ ಸನ್ಮಾನಿಸಿದರು. ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಬೈಬಲ್ ಪ್ರಾರ್ಥನೆ ನಡೆಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಯನ್ ಪಿಂಟೋ ಬೈಬಲ್ ಪಠನಗೈದು ಸ್ವಾಗತಿಸಿದರು. ಸಂಸ್ಥೆಯ ಸ್ನೇಹಲ್ ಪಿಂಟೋ, ಸೋನಲ್ ಪಿಂಟೋ ಅತಿಥಿüಮಾನ್ಯರಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಶಿಕ್ಷಕಿ ಮಾರ್ಗರೇಟ್ ಕುವೆಲೋ ಮತ್ತು ಶಿಬಾನಿ ಶರ್ಮಾ ಸಭಾ ಕಾರ್ಯಕ್ರಮ ನಿರೂಪಿಸಿದರು. ಸಿಒಒ ನೇತಿ ಶ್ರೀನಿವಾಸನ್ ಧನ್ಯವದಿಸಿದರು. ಪ್ರಧಾನ ಸಂಘಟಕ ಉತ್ಕರ್ಷ್ ಮಾರ್ವಾ ಉತ್ಸವ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

ಬಳಿಕ ಬಾಂಗ್ಲಾದೇಶ, ಡೆನ್ಮಾರ್ಕ್, ಭಾರತ, ಲಿಥುವಾನಿಯ, ಜರ್ಮನಿ, ಇರಾನ್, ಲ್ಯಾಟ್ವೀಯಾ, ನೈಝೇರಿಯಾ, ನೇಪಾಳ, ಪಾಕಿಸ್ತಾನ, ರೊಮೇನಿಯಾ, ರಷ್ಯಾ, ಸಿಂಗಾಪುರ, ಸೌತ್ ಕೊರೇಯಾ, ಶ್ರೀಲಂಕಾ, ಟರ್ಕಿ, ಜಾಂಬಿಯಾ ಮತ್ತು ಜಿಂಬಾವ್ವೆ ಮತ್ತಿತರ ವಿವಿಧ ರಾಷ್ಟ್ರಗಳ ಮಕ್ಕಳು ಪ್ರಸ್ತುತ ಪಡಿಸಿದ ರಾಷ್ಟ್ರಗೀತೆ, ತನ್ಮಯೀ ಭಾವದ ಉತ್ಕಟಾವಸ್ಥೆ ಯಲ್ಲಿ ಅಂತರಂಗದಿಂದ ಚಿಮ್ಮಿದ ಶೃತಿಬದ್ಧ ಸಂಗೀತಮಯ ವಾತಾವರಣ ಏಕತೆಯ ಬೆಸುಗೆಗೆ ನಾಂದಿಯಾಡಿದವು. ರಸಪೂರ್ಣ ಹಾವಭಾವ ನೃತ್ಯಗಳು, ಮಕ್ಕಳ ಮುಖಗಳಲ್ಲಿ ತೋರಿದ ಭಾವಾಭಿವ್ಯಕ್ತಿತ್ವ, ಪ್ರಬುದ್ಧ ಅಭಿನಯ ರಮ್ಯಾದ್ಭುತ ಆಗಿದ್ದವು. ಅಭಿನಯಗಳು ಆಧುನಿಕರಣಕ್ಕೆ ಸೀಮಿತವಾಗದೆ ಹಳೆಯ ಲೋಕದ ಸಂಸ್ಕೃತಿ ಸಾರುವ ನೃತ್ಯಗಳೂ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here