Friday 19th, April 2024
canara news

ಮಣಿಪಾಲ - ಯಕ್ಷಗಾನದ ಮುಖಾಂತರಎಚ್.ಐ.ವಿ/ಏಡ್ಸ್ ಜನಜಾಗೃತಿಕಾರ್ಯಕ್ರಮ

Published On : 09 Jan 2016   |  Reported By : Bernard J Costa


ಐ.ಸಿ.ಟಿ.ಸಿ, ಕೆ.ಎಂ.ಸಿ., ಮಣಿಪಾಲ, ಕುಟುಂಬ ಕಲ್ಯಾಣ ಕೇಂದ್ರ,ಕೆ.ಎಂ.ಸಿ., ಮಣಿಪಾಲ, ರೋಟರಿ ಕ್ಲಬ್‍ ಉಡುಪಿ-ಮಣಿಪಾಲ, ಲಯನ್ಸ್-ಲಯನೆಸ್‍ಕ್ಲಬ್ ಮಣಿಪಾಲ, ರೋಟರಿಕ್ಲಬ್ ಮಣಿಪಾಲ್‍ಟೌನ್ , ಐ.ಎಂ.ಎ. ಉಡುಪಿ ಕರಾವಳಿ, ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕ-ಮಾಲಕರ ಸಂಘ ಮಣಿಪಾಲ, ಮಣಿಪಾಲ ಕೆ.ಎಂ.ಸಿ.ಯ ಸೋಷಿಯಲ್ ವೆಲ್‍ಫೇರ್‍ಕಮಿಟಿ, ಹಾಗೂ ಜಿಲ್ಲಾಏಡ್ಸ್ ನಿಯಂತ್ರಣಘಟಕ, ಉಡುಪಿ ಇವರ ಸಂಯುಕ್ತಆಶ್ರಯದಲ್ಲಿ ಮಣಿಪಾಲ ಟೈಗರ್ ಸರ್ಕಲ್‍ನಲ್ಲಿಎಚ್.ಐ.ವಿ./ಏಡ್ಸ್‍ಜಾಗೃತಿಗಾಗಿಯಕ್ಷಗಾನಕಾರ್ಯಕ್ರಮವನ್ನು ಯಕ್ಷಬಳಗ, ತುಮರಿ, ಸಾಗರ, ಶಿವಮೊಗ್ಗದ ಕಲಾವಿದರು ಯಶಸ್ವಿಯಾಗಿ ಪ್ರದರ್ಶಿಸಿದರು. ಎಚ್.ಐ.ವಿ. ಸೋಂಕು, ಇದನ್ನುತಡೆಗಟ್ಟುವ ಬಗ್ಗೆ, ಸರ್ಕಾರದಎಚ್.ಐ.ವಿ. ನಿಯಂತ್ರಣ ಕಾರ್ಯಕ್ರಮಗಳು, ಕಳಂಕ ತಾರತಮ್ಯ ನಿವಾರಣೆಕುರಿತು ಈ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಪೂರ್ಣಿಮಾ ಬಾಳಿಗ, ಡೀನ್, ಕೆ.ಎಂ.ಸಿ., ಮಣಿಪಾಲ, ಇವರುಜನಸಾಮಾನ್ಯರಲ್ಲಿಎಚ್.ಐ.ವಿ./ಏಡ್ಸ್‍ಕುರಿತಾದಜಾಗೃತಿಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಈ ಬಗ್ಗೆ ಗ್ರಾಮೀಣ ಮಟ್ಟದಿಂದಲೇಇಂತಹ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾಏಡ್ಸ್ ನಿಯಂತ್ರಣಘಟಕದ ಮೇಲ್ವೀಚಾರಕರಾದ ಶ್ರೀ ಮಹಾಬಲೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಭಾರತದಲ್ಲಿ ಹೊಸ ಎಚ್.ಐ.ವಿ. ಸೋಂಕಿತರ ಸಂಖೈ ಶೇಕಡಾ 50 ರಷ್ಟುಕಡಿಮೆಯಾಗಿರುವ ಬಗ್ಗೆ ಹೇಳಿದರು. ಎಚ್.ಐ.ವಿ. ಸೋಂಕನ್ನು ಸೊನ್ನೆಗೆತನ್ನಿ, ಕಳಂಕ ತಾರತಮ್ಯವನ್ನು ಸೊನ್ನೆಗೆತನ್ನಿ, ಏಡ್ಸ್ ಸಾವನ್ನು ಸೊನ್ನೆಗೆತನ್ನಿಎಂದುಕರೆ ನೀಡಿದರು.

ಐ.ಎಂ.ಎ. ಉಡುಪಿ ಕರಾವಳಿಯ ಲಯನ್‍ಡಾ.ರಾಜೇಶ್ ಭಕ್ತಇವರುಎಚ್.ಐ.ವಿ. ಸೋಂಕಿನ ಬಗ್ಗೆ ತಿಳುವಳಿಕೆ ಮೂಡಿಸಲುಇಂತಹಜಾಗೃತಿ ಕಾರ್ಯಕ್ರಮಗಳನ್ನು ಆಚರಿಸಬೇಕುಎಂದರು ಹಾಗೂ ಎಚ್.ಐ.ವಿ. ಬಗ್ಗೆ ಎಲ್ಲರೂ ಮುಕ್ತವಾಗಿ ಮಾತನಾಡುವಂತೆಕರೆ ನೀಡಿದರು. ಮತ್ತು ಲಯನ್ಸ್‍ಕ್ಲಬ್‍ನಅಧ್ಯಕ್ಷರಾದ ಬಿ.ಜಿ. ಮೋಹನ್‍ದಾಸ್‍ಜನಜಾಗೃತಿಯಕಾರ್ಯಕ್ರಮಕ್ಕೆ ಲಯನ್ಸ್‍ಕ್ಲಬ್‍ನ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

ಯಕ್ಷಗಾನಕಾರ್ಯಕ್ರಮದ ನಂತರ, ಮದ್ಯಪಾನದ ದುಷ್ಪರಿಣಾಮಗಳ ಕುರಿತು ಎ.ವಿ.ಬಾಳಿಗ ಸಂಸ್ಥೆಯ ಸಿಬ್ಬಂದಿ ವರ್ಗದವರು ಬೀದಿ ನಾಟಕವನ್ನು ಪ್ರದರ್ಶಿಸಿದರು.

ಉಡುಪಿಯ ಪ್ರಸಿದ್ಧ ಮನೋವೈದ್ಯರಾದಡಾ.ಪಿ.ವಿ.ಭಂಡಾರಿಯವರುಮದ್ಯಪಾನಚಟವಲ್ಲ, ಇದೊಂದು ಮಾನಸಿಕ ಖಾಯಿಲೆ, ಇದಕ್ಕೆಚಿಕಿತ್ಸೆಯಅಗತ್ಯವಿದೆ. ಮದ್ಯಪಾನದಿಂದದೂರವಿರಿಎಂದುಕರೆ ನೀಡಿದರು.

ಮಣಿಪಾಲ ವಿಶ್ವವಿದ್ಯಾಲಯದಎಸ್ಟೇಟ್‍ಆಫೀಸರ್ ಹಾಗೂ ರೋಟೇರಿಯನ್ ಶ್ರೀ ಜೈವಿಠಲ್‍ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀ ರೆಹಮಾನ್, ಅಧ್ಯಕ್ಷರು, ರೋಟರಿಕ್ಲಬ್‍ಉಡುಪಿ-ಮಣಿಪಾಲ ಇವರು ಸರ್ವರನ್ನು ಸ್ವಾಗತಿಸಿದರು.

ರೋಟೇರಿಯನ್‍ಡಾ.ಶೇಷಪ್ಪರೈ, ಅಧ್ಯಕ್ಷರು, ರೋಟರಿಕ್ಲಬ್, ಮಣಿಪಾಲ್‍ಟೌನ್‍ಇವರು ಸರ್ವರಿಗೂ ವಂದಿಸಿದರು.

ಕಾರ್ಯಕ್ರಮದಲ್ಲಿ ಲಯನ್‍ಡಾ.ಗಣೇಶ್ ಪೈ, ಕೆ.ಎಂ.ಸಿ ಕುಟುಂಬ ಕಲ್ಯಾಣಕೇಂದ್ರದಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಈಶ್ವರ್, ಐ.ಸಿ.ಟಿ.ಸಿ. ಕೇಂದ್ರದ ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here