Thursday 25th, April 2024
canara news

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಪೋಕ್ಸೊ ಕಾಯಿದೆ 2012 ಕುರಿತು ಮಾಹಿತಿ ಶಿಬಿರ

Published On : 07 Jan 2016   |  Reported By : Bernard J Costa


ಅತೀ ಮುಗ್ದ ಮನಸ್ಸಿನ ಮಕ್ಕಳನ್ನು ಕಾಮದ ವಸ್ತುಗಳನ್ನಾಗಿ ಬಳಸುವ ವಿಕೃತ ಮನಸ್ಸಿನ ಜನರು ನಮ್ಮಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು ಭಾರೀ ಆತಂಕ ಉಂಟಾಗುತ್ತಿದೆ. ಎಂದು ಶ್ರೀ ಚಿತ್ತರಂಜನ್‍ದಾಸ್ ಶೆಟ್ಟಿ ಅಧ್ಯಕ್ಷರು ಆವರ್ಸೆ ಗ್ರಾಮ ಪಂಚಾಯತ್ ಅವರು ಹೇಳಿದರು.

ಅವರು ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಗೋಳಿಯಂಗಡಿ ಹಾಗೂ ಶಾಲಾಭಿವೃದ್ಧಿ ಸುತ್ತು ಮೇಲುಸ್ತುವಾರಿ ಸಮಿತಿ, ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢ ಶಾಲಾ ಸಭಾಂಗsÀಣ ಗೋಳಿಯಂಗಡಿಯಲ್ಲಿ ಇತ್ತೀಚೆಗೆ ನಡೆದ ಮಕ್ಕಳ ಮೇಲಿನ ದೌರ್ಜನ್ಯ ತಡೆ POCSO Act 2012 ಕುರಿತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮಗುವಿನ ಬಾಲ್ಯವನ್ನು ಹರಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಭೇಕು, ವಿದ್ಯಾರ್ಥಿಗಳು ತಮ್ಮ ತಮ್ಮ ಗುರಿಯನ್ನು ಸಾಧಿಸಲು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಹೊಣೆಗಾರಿಕೆ ಶಿಕ್ಷಕರ, ಪೋಷಕರ, ಸಮುದಾಯದವರ ಮತ್ತು ಸಂಘ ಸಂಸ್ಥೆÉ್ತಯವರ ಪಾತ್ರ ಅತೀ ಮುಖ್ಯ ಎಂದರು.

ಶ್ರೀ ರವಿಚಂದ್ರ ಕಾರಂತ, ಹಿರಿಯ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಗೋಳಿಯಂಗಡಿ ಸಭಾಧ್ಯಕ್ಷತೆ ವಹಿಸಿ, ಜನತೆ ಕಾನೂನಿಗೆ ಗೌರವ ನೀಡಿದಾಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ಅಲ್ಲದೇ ಲೈಂಗಿಕ ಶೋಷಣೆಯಿಂದ ಮಕ್ಕಳನ್ನು ಹೇಗೆ ರಕ್ಷಿಸಬೇಕು ಎನ್ನುವುದು ಒಂದು ಅತ್ಯಂತ ಹೆಚ್ಚು ಅತಂಕ ಒಡ್ಡಿರುವ ವಿಚಾರ, ಇದು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ, ಗಂಡು ಮಕ್ಕಳಿಗೂ ಅಷ್ಟೇ ಪ್ರಸ್ತುತ ಈ ನಿಟ್ಟಿನಲ್ಲಿ ಅಭಿವೃದ್ಧಿ ಸಂಸ್ಥೆ ಈ ಗ್ರಾಮೀಣ ಭಾಗದಲ್ಲಿ ಅಥ9ಪೂಣ9 ಮಾಹಿತಿ ಶಿಬಿರ ಎಪ9ಡಿಸಿದೆ ಎಂದರು.

ಸಭೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಯರಾಮ ಶೆಟ್ಟಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಮಹಿಳಾ ಪ್ರತಿನಿಧಿ ಸುಜಾತ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ನಾಗರಾಜ, ಪ್ರಮೋದ ಹೆಗ್ಡೆ ಮಾಜಿ ಅಧ್ಯಕ್ಷರು ಆವರ್ಸೆ ಗ್ರಾಮ ಪಂಚಾಯತ್, ದೇಜಪ್ಪ ಶಂಕರನಾರಾಯಣ ಪೋಲಿಸ್ ಠಾಣೆಯ ಉಪನೀರಿಕ್ಷಕರು ಹಾಗೂ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ ಸಂಪನ್ಮೂಲ ವ್ಯಕ್ತಿ ಪ್ರೇಮಾನಂದ ಕಲ್ಬಾಡಿ ಉಪಸ್ಥಿತರಿದ್ದರು.

ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ದಿನೇಶ್ ಬನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಶಕಿಲಾ ಡಿ. ರಾವ್ ವಂದಿಸಿದರು. ಸುಮಾರು 230 ಶಾಲಾ ವಿದ್ಯಾರ್ಥಿಗಳು ಮಾಹಿತಿ ಶಿಬಿರದಿಂದ ಪ್ರಯೋಜನ ಪಡೆದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here