Friday 19th, April 2024
canara news

ಮಂಗಳೂರಿನಲ್ಲಿ ಮಾತಾ ಅಮೃತಾನಂದಮಯಿಗೆ ಗೌರವಾರ್ಪಣೆ

Published On : 11 Jan 2016   |  Reported By : Canaranews Network   |  Pic On: photo credit: The Hindu


ಮಂಗಳೂರು: ಗುರುವಿನಲ್ಲಿ ದೇವರ ದಿವ್ಯತೆ ಮತ್ತು ಭವ್ಯತೆಯನ್ನು ಸಾಕ್ಷಾತ್ಕರಿಸಿಕೊಳ್ಳುವುದು ಭಾರತೀಯ ಸನಾತನ ಪರಂಪರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ನಗರದ ಬೋಳೂರಿನ ಅಮೃತ ವಿದ್ಯಾಲಯಂನಲ್ಲಿ ಅವರು ಶನಿವಾರ ಸದ್ಗುರು ಮಾತಾ ಶ್ರೀ ಅಮೃತಾನಂದಮಯಿ ಅವರನ್ನು ಸಮ್ಮಾನಿಸಿ ಮಾತನಾಡಿದರು.

ಸದ್ಗುರು ಅಮೃತಾನಂದಮಯಿ ಅವರಲ್ಲಿ ಭಕ್ತರು ಭಗವಂತನನ್ನು ಕಾಣುತ್ತಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರರಾಗಿರುವ ಅವರು ಅಧ್ಯಾತ್ಮದ ಜತೆ ಸಾಮಾಜಿಕ ಸೇವಾ ಚಟುವಟಿಕೆಗಳಿಂದ ವಿಶಿಷ್ಟವಾದ ಗೌರವಕ್ಕೆ ಪಾತ್ರರಾಗಿ ದ್ದಾರೆ. ಸದಭಿರುಚಿ, ಸತ್‌ಚಿಂತನೆ, ಸದಾಶಯಗಳನ್ನು ಜಾಗೃತಗೊಳಿ ಸುತ್ತಿದ್ದಾರೆ. ಅವರ ದಿವ್ಯಾಲಿಂಗನ ದರ್ಶನವು ತಾಯಿಯ ಮಮತೆಯಂ ತಿದ್ದು ಭಕ್ತರಲ್ಲಿ ಆತ್ಮವಿಶ್ವಾಸವನ್ನು ಸು#ರಿಸುತ್ತಿದೆ ಎಂದು ಡಾ| ಹೆಗ್ಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾತಾ ಅಮೃತಾನಂದಮಯಿ ಅವರ ಸತ್ಸಂಗವು ಭಜನೆ, ಸಂಕೀರ್ತನೆ, ಧ್ಯಾನ ಸಹಿತವಾಗಿದ್ದು ಭಕ್ತರಲ್ಲಿ ಅಧ್ಯಾತ್ಮದ ಭಾವನೆಗಳನ್ನು ಉಂಟು ಮಾಡುತ್ತಿವೆ. ಸದ್ಗುರುವಾಗಿ ಅವರು ಮಾರ್ಗದರ್ಶನವನ್ನು ನೀಡುವ ಶೈಲಿಯೇ ಅನನ್ಯವಾಗಿದೆ. ಭಾರತೀಯ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಕೊಡುಗೆ ಆದರ್ಶಯುತವಾಗಿದೆ. ಸಮಾಜದ ಕಡುಬಡವರಿಗೆ ಶೋಷಿತರಿಗೆ, ಅನಾಥರಿಗೆ ಅವರು ಆಶಾಕಿರಣವಾಗಿದ್ದಾರೆ.

ಮಹಿಳೆಯರ ಸ್ವಾವಲಂಬನೆಗೆ ಸ್ಫೂರ್ತಿಯಾಗಿದ್ದಾರೆ. ಅಮೃತಾನಂದಮಯಿ ಮಠದ ಶಿಕ್ಷಣ ಸಂಸ್ಥೆಗಳು ಅತ್ಯಾಧುನಿಕವಾಗಿದ್ದು ವಿಶೇಷ ಕೊಡುಗೆಗಳೆಂದು ಅವರು ವಿಶ್ಲೇಷಿಸಿದರು.

ಕೋಟ್ಯಂತರ ಮಂದಿಯ ಗೌರವ, ಅಭಿಮಾನ, ಪ್ರೀತಿಯನ್ನು ಹೊಂದಿರುವ ಅಮೃತಾನಂದಮಯಿ ಅವರು ಹೆಮ್ಮೆಯ, ಮಮತೆಯ ಅಮ್ಮನಾಗಿದ್ದಾರೆ. ಅವರಿಂದ ಸಮಾಜಕ್ಕೆ ಮತ್ತಷ್ಟು ಮಾರ್ಗದರ್ಶನ ದೊರೆಯು ವಂತಾಗಲಿ ಎಂದು ಹಾರೈಸಿದ ಹೆಗ್ಗಡೆ ಅವರು ಅಮೃತಾನಂದಮಯಿ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಭಕ್ತ ಮತ್ತು ಭಗವಂತನ ನಡುವಿನ ಅನುಸಂಧಾನವೇ ನೆಮ್ಮದಿಯ ಬದುಕು ಎಂದು ಅವರು ವ್ಯಾಖ್ಯಾನಿಸಿದರು.

ಅಮೃತಾನಂದಮಯಿ ಮಠಧಿದಿಂದ ವಿವಿಧ ಸವಲತ್ತುಗಳನ್ನು ಡಾ| ವೀರೇಂದ್ರ ಹೆಗ್ಗಡೆ ಅವರು ಫಲಾನುಭವಿಗಳಿಗೆ ವಿತರಿಸಿದರು.

ಸಚಿವ ವಿನಯ ಕುಮಾರ್‌ ಸೊರಕೆ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಜೆ.ಆರ್‌. ಲೋಬೊ ಮತ್ತು ಐವನ್‌ ಡಿ'ಸೋಜಾ, ಮಾಜಿ ಶಾಸಕ ಎನ್‌. ಯೋಗೀಶ್‌ ಭಟ್‌, ಲತಾ ಸಾಲ್ಯಾನ್‌, ಮಂಗಳಾಮೃತ ಚೈತನ್ಯ, ಮಾಲಾಡಿ ಅಜಿತ್‌ ಕುಮಾರ್‌ ರೈ, ಡಾ| ಎಂ. ಶಾಂತಾರಾಮ ಶೆಟ್ಟಿ, ಮನೋಹರ ಪ್ರಸಾದ್‌, ಎಚ್‌. ಕುಮಾರ್‌, ಎನ್‌.ಕೆ. ಸಿಂಗ್‌, ಗಣೇಶ್‌ ರಾವ್‌, ಪ್ರದೀಪ್‌ ಕಲ್ಕೂರ, ಪ್ರಕಾಶ್‌ ಶೆಟ್ಟಿ, ಅಶೋಕ್‌ ಕುಮಾರ್‌, ಅಶೋಕನ್‌, ಶ್ರೀನಿವಾಸ ದೇಶಪಾಂಡೆ ಮುಖ್ಯ ಅತಿಥಿಗಳಾಗಿದ್ದರು.

ಡಾ| ಸನತ್‌ ಹೆಗ್ಡೆ, ಡಾ| ಜೀವರಾಜ ಸೊರಕೆ, ಮಾಧವ ಸುವರ್ಣ, ಮಂಜುನಾಥ ರೇವಣRರ್‌, ಸುಗುಣನ್‌, ಡಾ| ದೇವದಾಸ್‌ ಮುಂತಾದವರು ಉಪಸ್ಥಿತರಿದ್ದರು.

ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷೆ ಶ್ರುತಿ ಹೆಗ್ಡೆ ಸ್ವಾಗತಿಸಿದರು. ವಾಮನ ಕಾಮತ್‌ ವಂದಿಸಿದರು. ಡಾ| ಅಶೋಕ್‌ ಶೆಟ್ಟಿ ನಿರೂಪಿಸಿದರು.

ಅಮೃತ ಸಂಗಮ ಸತ್ಸಂಗ
ಮಾತಾ ಅಮೃತಾನಂದಮಯಿ ಅವರು ಅಮೃತ ಸಂಗಮದ ಅಂಗವಾಗಿ ಶನಿವಾರ ಪೂರ್ತಿ ಸತ್ಸಂಗ ನಡೆಸಿದರು. ಭಜನೆ, ಸಂಕೀರ್ತನೆ, ಧ್ಯಾನ, ಉಪನ್ಯಾಸವಿತ್ತರು. ಸಹಸ್ರಾರು ಭಕ್ತರಿಗೆ ಆಲಿಂಗನಾಶೀರ್ವಾದ ನೀಡಿದರು. ರವಿವಾರ ಅಮ್ಮನವರ ಕಾರ್ಯಕ್ರಮಗಳು ಬೆಳಗ್ಗೆ 5.30ಕ್ಕೆ ಧ್ಯಾನದಿಂದ ಆರಂಭವಾಗಿ 9.30ಕ್ಕೆ ಸತ್ಸಂಗ ಜರಗಲಿದೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here