Thursday 18th, April 2024
canara news

ಮಂಗಳೂರು: ಕಂಬಳಕ್ಕೆ ಸೈ ಎಂದ ಕೇಂದ್ರ ಸರಕಾರ

Published On : 12 Jan 2016   |  Reported By : Canaranews Network


ಮಂಗಳೂರು: ಕಂಬಳ, ಜಲ್ಲಿಕಟ್ಟು ಸೇರಿದಂತೆ ಇತರ ಪ್ರಾಣಿಗಳನ್ನೊಳಗೊಂಡ ಕ್ರೀಡೆಗಳನ್ನು ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಆ ಮೂಲಕ ಕಂಬಳ ಪ್ರಿಯರ ಮೊಗದಲ್ಲಿ ನಗು ಮೂಡಿಸಿದೆ.ಕೇಂದ್ರ ಸರಕಾರದ ಈ ನಿರ್ಧಾರದಿಂದ ಉಭಯ ಜಿಲ್ಲೆಗಳ ಕಂಬಳ ಪ್ರಿಯರು, ಸಂಘಟಕರು ಮತ್ತು ಕಂಬಳದ ಕೋಣಗಳನ್ನು ಸಾಕಿಸಲಹುವ ಕುಟುಂಬಗಳು ಹರ್ಷಗೊಂಡಿವೆ.

2011ರಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಹೊರಡಿಸಿರುವ ಅಧಿಸೂಚನೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರಕಾರ ಈ ಆದೇಶ ಹೊರಡಿಸಿದೆ. ಹಿಂದಿನ ಅಧಿಸೂಚನೆಯಲ್ಲಿ ಕಂಬಳ ಸೇರಿದಂತೆ ಪ್ರಾಣಿಗಳನ್ನು ಒಳಗೊಂಡಿರುವ ಇತರ ಕೆಲವು ಗ್ರಾಮೀಣ ಕ್ರೀಡೆಗಳನ್ನು ಹೊರಗಿಡಲಾಗಿತ್ತು. ಈಗ ಹೊಸ ತಿದ್ದುಪಡಿಯ ಮೂಲಕ ಎತ್ತು, ಕೋಣ ಮುಂತಾದ ಪ್ರಾಣಿಗಳನ್ನು ಬಳಸಲಾಗುವ ಕಂಬಳ, ಜಲ್ಲಿಕಟ್ಟು ಮುಂತಾದ ಸಾಂಪ್ರದಾಯಿಕ ಮತ್ತು ಐತಿಹಾಸಿಕ ಮಹತ್ವವುಳ್ಳ ಕ್ರೀಡೆಗಳನ್ನು ನಡೆಸಬಹುದಾಗಿದೆ. ಈ ನೂತನ ಅಧಿಸೂಚನೆಯಲ್ಲಿ ಕಂಬಳವನ್ನು ಹೆಸರಿಸಿಲ್ಲವಾದರೂ ಅದರ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಕೇಂದ್ರದ ಈ ನಿರ್ಧಾರದಿಂದ ಕಂಬಳದ ಸಂಘಟಕರು ನಿಟ್ಟುಸಿರು ಬಿಡುವಂತಾಗಿದೆ




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here