Thursday 25th, April 2024
canara news

ಕ್ರಿಯಾಶೀಲ ವ್ಯಕ್ತಿತ್ವದಿಂದ ಸಬಲ ಸಮಾಜ: ಜಿಲ್ಲಾಧಿಕಾರಿ

Published On : 12 Jan 2016   |  Reported By : Bernard J Costa


ಉಡುಪಿ ಜನವರಿ 12: ಕ್ರಿಯಾಶೀಲ ಜೀವನ ಶೈಲಿಯಿಂದ ಚಲನಶೀಲ ಜೀವಂತ ಸಮಾಜ ಗೋಚರಿಸುತ್ತದೆ. ಯುವಶಕ್ತಿಗೆ ಕನಸುಗಳನ್ನು ನನಸು ಮಾಡುವ ಶಕ್ತಿ ಇದೆ ಎಂದು ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಹೇಳಿದರು.

ಅವರು ಅವರು ಮಂಗಳವಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ, ಲಯನ್ಸ್ ಕ್ಲಬ್ ಇಂಟರ್‍ನ್ಯಾಶನಲ್, ಜಿಲ್ಲೆ 317-ಸಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕ, ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ, ಉಡುಪಿ, ಸಾರಿಗೆ ಇಲಾಖೆ ಉಡುಪಿ ಜಿಲ್ಲೆ, ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತ್ತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು, ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ ಇವರ ಸಹಕಾರದೊಂದಿಗೆ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವದಿನಾಚರಣೆ ಸಂಬಂಧ ಆಯೋಜಿಸಲಾದ ಉಡುಪಿ ಪುರಭವನದಿಂದ 3 ಕಿ.ಮೀ ಮ್ಯಾರಥಾನ್ ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಯುವಶಕ್ತಿಯ ಸದ್ಬಳಕೆಗೆ ಕರೆ ನೀಡಿದ ಜಿಲ್ಲಾಧಿಕಾರಿಗಳು, ಶಕ್ತಿಯ ಸದ್ಬಳಕೆಯಾಗಬೇಕು. ಕ್ರಿಯಾಶೀಲ ಯುವಶಕ್ತಿಯಿಂದ ಅತ್ಯುತ್ತಮ ಸಮಾಜ ನಿರ್ಮಾಣವಾಗುತ್ತದೆ; ಈ ಶಕ್ತಿಯ ಸಂರಕ್ಷಣೆಗಾಗಿ ಹಾಗೂ ಸುರಕ್ಷೆ ದೃಷ್ಟಿಯಿಂದ ರಾಜ್ಯದಲ್ಲಿ ದ್ವಿಚಕ್ರಗಳ ಹಿಂಬದಿ ಸವಾರಿ ಮಾಡುವವರಿಗೂ ಹೆಲ್ಮೆಟ್ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ಇದನ್ನು ಜಿಲ್ಲೆಯಲ್ಲಿ ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದೂ ಜಿಲ್ಲಾಧಿಕಾರಿಗಳು ಹೇಳಿದರು.

ಯುವಜನತೆ ವಿವೇಕಾನಂದರಿಂದ ಸ್ಪೂರ್ತಿ ಪಡೆಯಬೇಕು- ದೇಶದ ಯುವ ಜನತೆ ವಿವೇಕಾನಂದರ ಆದರ್ಶಗಳಿಂದ ಸ್ಫೂರ್ತಿ ಪಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಅವರು ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಯುವ ಸಪ್ತಾಹ 2016 ರಾಷ್ಟ್ರೀಯ ಯುವ ದಿನಾಚರಣೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವಜನತೆ ಪ್ರತಿಯೊಂದು ಸವಾಲಿಗೆ ಮತ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಬೇಕು, ಎಲ್ಲಾ ಸಮಸ್ಯೆಗಳಿಗೆ ಯುವ ಜನತೆ ಪರಿಹಾರ ಅರಿಯಬೇಕು, ಸಮಸ್ಯೆಗಳ ಪರಿಹಾರಕ್ಕಾಗಿ ಯುವ ಜನತೆ ಮುಂದೆ ಬರಬೇಕು, ತಮ್ಮ ಮನೆಯಿಂದಲೇ ಬದಲಾವಣೆಗೆ ಮುಂದಾಗಬೇಕು, ರಾಷ್ಟ್ರದ ಬೆಳವಣಿಗೆಗೆ ಯುವ ಜನತೆ ಸಹಕರಿಸಬೇಕು , ವಿವೇಕಾನಂದ ಏಳಿ ಎದ್ದೇಳೀ, ಗುರು ಮುಟ್ಟುವ ವರೆಗೂ ನಿಲ್ಲದಿರಿ ಎಂಬ ಧ್ಯೇಯವನ್ನು ಯುವ ಜನತೆ ಪಾಲಿಸುವಂತೆ ಸಿಇಓ ಹೇಳಿದರು.

ನಗರಸಭೆಯ ಅಧ್ಯಕ್ಷ ಪಿ.ಯುವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಸುರೇಂದ್ರಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ತೆಂಕನಿಡಿಯೂರು ಪ್ರ.ದ.ಕಾಲೇಜಿನ ಪ್ರಾಂಶುಪಾಲ ಡಾ. ನಿಕೇತನ, ಡಾ. ಜಿ.ಶಂಕರ್ ಸರಕಾರಿ ಪ್ರ.ದ.ಕಾಲೇಜು ಮತ್ತು ಸ್ನಾತಕೋಥ್ತರ ಅಧ್ಯಯಲ ಕೇಂದ್ರದ ಪ್ರಾಂಶುಪಾಲ ಪ್ರೋ.ಜಗದೀಶ ರಾವ್, ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ನೇರಿ ಕರ್ನೆಲಿಯೋ, ಲಯನ್ಸ್ ಜಿಲ್ಲಾ ಗವರ್ನರ್ ಶ್ರೀಧರ ಡಿ ಶೇಣವ, ಜ್ಯೋತಿ ಶೇಣವ, ಲಯನ್ಸ್ ಸಂಸ್ಥೆಯ ನಿರುಪಮಾ ಪ್ರಸಾದ್ ಉಪಸ್ಥಿತರಿದ್ದರು.

ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಸ್ವಾಗತಿಸಿದರು, ಎನ್.ಎಂ ಹೆಗಡೆ ನಿರೂಪಿಸಿದರು.

ಯುವ ಸಪ್ತಾಹ ಅಂಗವಾಗಿ ನಡೆದ ಮ್ಯಾರಥಾನ್ ಓಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here