Thursday 25th, April 2024
canara news

ಜ.15 ಶುಕ್ರವಾರ ಜೈತುಳುನಾಡು-11 ಟಾಕೀಸ್‍ಗಳಲ್ಲಿ ಬಿಡುಗಡೆ

Published On : 14 Jan 2016   |  Reported By : Rons Bantwal


ಮಂಗಳೂರು: ಫರ್‍ನ್ಸ್ ಮೂವಿ ಇಂಟರ್ ನ್ಯಾಶನಲ್ ಅರ್ಪಿಸುವ `ಜೈತುಳುನಾಡು' ತುಳು ಚಲನ ಚಿತ್ರ ಜನವರಿ 15 ರಂದು ಕರಾವಳಿ ಜಿಲ್ಲೆಯಾದ್ಯಂತ ಏಕ ಕಾಲದಲ್ಲಿ 11 ಟಾಕೀಸ್‍ಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ಫ್ರಾಂಕ್ ಫೆರ್ನಾಂಡಿಸ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುಚಿತ್ರ, ಬಿಗ್ ಸಿನೆಮಾಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಬಿ.ಸಿ.ರೋಡ್‍ನಲ್ಲಿ ನಕ್ಷತ್ರ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಕಾರ್ಕಳದಲ್ಲಿ ರಾಧಿಕಾ, ಸುರತ್ಕಲ್‍ನಲ್ಲಿ ನಟರಾಜ ಹಾಗೂ ಮಣಿಪಾಲದಲ್ಲಿ ಐನಾಕ್ಸ್ ಚಿತ್ರಮಂದಿರದಲ್ಲಿ ಜೈತುಳುನಾಡು ತೆರೆಕಾರಣಲಿದೆ.

ಪ್ರವೀಣ್ ನಿರ್ದೇಶನದಲ್ಲಿ ತಯಾರಾದ ಈ ಸಿನಿಮಾದಲ್ಲಿ ಒಟ್ಟು 7 ಹಾಡುಗಳಿವೆ. ಸಿನಿಮಾದಲ್ಲಿ ಅವಿನಾಶ್ ಶೆಟ್ಟಿ ನಾಯಕ ನಟನಾಗಿಯೂ ಸೋನಾಲ್ ಮೊಂತೆರೊ ನಾಯಕಿಯಾಗಿ ಅಭಿನಯಿಸಿದ್ದಾರೆÉ. ಇನ್ನುಳಿದಂತೆ ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ.ಪಡೀಲ್, ಅರವಿಂದ್ ಬೋಳಾರ್, ಮನಮೋಹನ್ ರೈ, ಸಂತೋಷ್ ಶೆಟ್ಟಿ, ಫ್ರಾಂಕ್ ಫೆರ್ನಾಂಡಿಸ್, ಪ್ರವೀಣ್, ಭವ್ಯ, ಸರೋಜಿನಿ ಶೆಟ್ಟಿ, ನಯನ, ಶ್ರೇಯಾ ಅಂಚನ್ ಅಭಿನಯಿಸಿದ್ದಾರೆ.

ದೇವಿ ಪುತ್ತೂರು ಕಥೆ, ಎಸ್.ಎಸ್.ಡೇವಿಡ್ ಮತ್ತು ಪ್ರವೀಣ್ ಸಂಭಾಷಣೆ ಗೌರಿವೆಂಕಟೇಶ್ ಛಾಯಾಗ್ರಹಣ, ಶಿವರಾಜು ಮೇಹು ಸಂಕಲನ, ಕೌರವ ವೆಂಕಟೇಶ್ ಸಾಹಸ, ರಾಜೇಶ್ ರಾಮನಾಥ್ ಹಿನ್ನಲೆ ಸಂಗೀತದಲ್ಲಿ ಸಹಕರಿಸಿದ್ದಾರೆ. ಎನ್.ಜಿ.ಶಿವಣ್ಣ ರಾಜ ಸುಲೋಚನ ನಂದಿಹಳ್ಳಿ ಸಹ ನಿರ್ಮಾಪಕರಾಗಿದ್ದಾರೆ.

ಪೆÇಲೀಸ್ ಅಧಿಕಾರಿಯಾಗಬೇಕೆಂದು ಕನಸು ಹೊತ್ತಿದ್ದ ವ್ಯಕ್ತಿಯೊಬ್ಬ ತನಗೆ ಅದು ಸಾಧ್ಯವಾಗದೇ ಇದ್ದಾಗ ತನ್ನ ಮಗನಲ್ಲಿ ಆ ಕನಸು ತುಂಬಿ ಮಗನನ್ನು ದಕ್ಷ ಪೆÇಲೀಸ್ ಅಧಿಕಾರಿಯನ್ನಾಗಿ ಮಾಡುವುದರ ಸುತ್ತ ಚಿತ್ರದ ಕತೆ ಸಾಗುತ್ತದೆ. ಸಿನಿಮಾದಲ್ಲಿ ಹಾಡು, ಫೈಟ್, ಹಾಸ್ಯ ಹಾಗೂ ಸಮಾಜಕ್ಕೂ ಒಳ್ಳೆಯ ಸಂದೇಶವೂ ಇದೆ ಎಂದು ನಿರ್ದೇಶಕ ಪ್ರವೀಣ್ ತಿಳಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here