Friday 19th, April 2024
canara news

ಪೌರಾಣೆಕ ರಸಪ್ರಶ್ನೆ ಕಾರ್ಯಕ್ರಮ 2016

Published On : 16 Jan 2016   |  Reported By : Bernard J Costa


ನಾವು ನಮ್ಮ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದಿಂದಾಗಿ ಅವಸರದ ದಿನಚರಿಯನ್ನು ಹೊಂದಿ, ನಮ್ಮ ಅಮೂಲ್ಯ ಸಂಪತ್ತುಗಳಾದ ರಾಮಾಯಣ, ಮಹಾಭಾರತ ಹಾಗೂ ಇನ್ನಿತರ ಪುರಾಣೋಕ್ತವಾದ ಮಹಾಮಹೀಮರ ಅನುಕರಣೀಯವಾದ ವ್ಯಕ್ತಿತ್ವದಿಂದ ದೂರ ಉಳಿದಿದ್ದೇವೆ. ಇದರಿಂದ ನಮ್ಮಲ್ಲಿ ರಾಕ್ಷಸ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಜೀವನ ಮೌಲ್ಯಗಳು ಸಹ ಕುಸಿಯುತ್ತಿದೆ. ಆದ್ದರಿಂದ ಪುರಾಣಗಳ ಪರಿಚಯವಿಲ್ಲದ ನಮ್ಮ ಶಿಕ್ಷಣ ಪೂರ್ಣಗೊಳ್ಳದು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತರಾದ ಅಶೋಕ್ ಕುಮಾರ್ ಶೆಟ್ಟಿ ಮುಖ್ಯ ಶಿಕ್ಷಕರು ಶ್ರೀನಿಕೇತನ ಪ್ರೌಢಶಾಲೆ ಮಟಪಾಡಿ ಇವರು ಹೇಳಿದರು.

ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು, ಹಂಗಾರಕಟ್ಟೆ ಹಾಗೂ ರೋಟರಿ ಕ್ಲಬ್ ಬ್ರಹ್ಮಾವರ ಇದರ ಸಂಯುಕ್ತ ಆಶ್ರಯದಲ್ಲಿ ರೋಟರಿಭವನದಲ್ಲಿ ಹಮ್ಮಿಕೊಂಡ ಪೌರಾಣಿಕ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು.

ಧರ್ಮ ನಿರಾಪೇಕ್ಷೆಯ ಹೆಸರಿನಲ್ಲಿ ನಮ್ಮ ಶಾಲೆ, ಕಾಲೇಜು ಪಠ್ಯದಲ್ಲಿ ಇವುಗಳ ಓದಿಗೆ ಸ್ಥಾನವಿಲ್ಲ, ಇನ್ನಿತರ ದ್ರಶ್ಯ ಮಾಧ್ಯಮಗಳ ಹಾವಳಿಯಿಂದ ಮನೆಯಲ್ಲಿ ಇದಕ್ಕೆ ಪುರಸ್ಕಾರವಿಲ್ಲ. ಅಲ್ಲದೇ ನಮ್ಮದು ಬಹು ಒತ್ತಡದ ಬದುಕು ದೊಡ್ಡ ದೊಡ್ಡ ಪುಸ್ತಕಗಳನ್ನು ತೆರೆದು ಓದುವಷ್ಟು ತಾಳ್ಮೆಯಿಲ್ಲ. ಆದ್ದರಿಂದ ಇಂತಹ ಅನೌಪಚಾರಿಕ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ ನುರಿತ ಸಂಪನ್ಮೂಲ ತಂಡದಿಂದ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ಸಾಕಷ್ಟು ಕಾರ್ಯಕ್ರಮ ನೀಡುತ್ತಿರುವುದು ಪ್ರಶಂಶನೀಯ ಎಂದು ಹೇಳಿದರು.

ರೋಟರಿ ಕ್ಲಬ್ ಬ್ರಹ್ಮಾವರ ಇದರ ಅಧ್ಯಕ್ಷರಾದ ಅರುಣ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಜೀವನ ಮೌಲ್ಯಗಳ ಅರಿವಿಗೆ ಕಥೆ, ಕಾದಂಬರಿ, ನಾಟಕ, ಯಕ್ಷಗಾನ, ನೃತ್ಯ, ರೂಪಕ ಇವುಗಳ ಪರಿಜ್ಞಾನ ನಮ್ಮ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಾಗಿದೆ. ತನ್ಮೂಲಕ ಸೃಜನಶೀಲ ಮನಸ್ಸುಗಳಿಗೆ ಅಮೂಲ್ಯ ಪ್ರೇರಣೆಯಾಗಲಿದೆ ಎಂದರು. ಅಲ್ಲದೇ ಗಾದೆಗಳು, ಜನಪದ ಆಟಗಳು, ಜನಪದ ಹಾಡುಗಳು, ಹಬ್ಬ ಹರಿದಿನಗಳು ನಮ್ಮ ಅಮೂಲ್ಯ ನಿಧಿಗಳು ಎಂದು ಪರಿಭಾವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಶ್ಯಾಮ್ sಸುಂದರ್ ಭಂಡಾರಿ, ಉದ್ಯಮಿ ಕೋಟ ಹಾಗೂ ರೋ. ದಿನೇಶ ಕುಮಾರ ಬೀಡು ವಲಯ ಸೇನಾನಿ, ಹಾಗೂ ರೋ. ಸುಂದರಾಂ ಶೆಟ್ಟಿ ಇಂಟರ್ಯಾಕ್ಟ್ ಸಭಾಪತಿ, ರೋಟರಿ ಕಾರ್ಯದರ್ಶಿ ರೋ. ನವೀನ್ ಡಯಾಸ್, ಸಂಪನ್ಮೂಲ ವ್ಯಕ್ತಿ ಹಾಗೂ ಕ್ಷಿಜ್ ಮಾಸ್ಟರ್ ಕರುಣಾಕರ ಶೆಟ್ಟಿ, ಗೋಪಾಲ ಮೊಗೇರ ಉಪಸ್ಥಿತರಿದ್ದರು.

ಸುಮಾರು 12 ಪ್ರೌಢಶಾಲೆಯ 82 ವಿದ್ಯಾರ್ಥಿಗಳು ಭಾಗವಹಿಸಿ ಶಾರದಾ ಪ್ರೌಢಶಾಲೆ ಚೇರ್ಕಾಡಿ ಪ್ರಥಮ, ಶ್ರೀನಿಕೇತನ ಪ್ರೌಢಶಾಲೆ ಮಟಪಾಡಿ ದ್ವಿತೀಯ, ಎಸ್.ಎಮ್.ಎಸ್. ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಸಿ ತೃತೀಯ ಸ್ಥಾನ ಪಡೆದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರೂರು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಸಮಧಾನಕರ ಬಹುಮಾನ ಪಡೆದರು. ಕಾಂiÀರ್iಕ್ರಮ ಸಂಘಟಕ ಹಾಗೂ ಅಭಿವ್ವದ್ದಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ ಸ್ವಾಗತಿಸಿ ಪ್ರಸ್ತಾವಿಕ ಮಾತಾಡಿದರು ಈ ಕಾರ್ಯಕ್ರಮವವನ್ನು ರವೀಂದ್ರ ಕೊಠಾರಿ ನಿರೂಪಿಸಿ, ಶ್ರೀಮತಿ ಶಕಿಲಾ ಡಿ-ರಾವ್ ವಂದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here