Thursday 28th, March 2024
canara news

ಕನ್ನಡ ಸಂಘ ಸಾಂತಾಕ್ರೂಜ್ : ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮ

Published On : 25 Jan 2016   |  Reported By : Rons Bantwal


ಮಹಿಳೆಯರಲ್ಲಿ ಸ್ವಾಭಿಮಾನ ಹೆಚ್ಚಬೇಕಾಗಿದೆ: ರತ್ನ ಪಿ.ಶೆಟ್ಟಿ

ಮುಂಬಯಿ, ಜ.25: ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ವಾರ್ಷಿಕವಾಗಿ ನೆರವೇರಿಸುವ ಅರಸಿನ ಕುಂಕುಮ ಕಾರ್ಯಕ್ರಮ ಕಳೆದ ಶುಕ್ರವಾರ ಸಂಜೆ ಸಾಂತಕ್ರೂಜ್ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಎಲ್.ವಿ ಅವಿೂನ್ ಅಧ್ಯಕ್ಷತೆಯಲ್ಲಿ ನೆರವೇರಿಸಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ರತ್ನಾ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ಈ ಶುಭಾವಸರದಲ್ಲಿ ಅತಿಥಿüಗಳಾಗಿ ಸುಧಾ ಎಲ್.ಅವಿೂನ್, ನೀತಾ ಚಾಪೇಕರ್, ಕಲ್ಪನಾ ಕೃಷ್ಣ ಶೆಟ್ಟಿ, ಶಶಿ ನಿತ್ಯಾನಂದ ಕೋಟ್ಯಾನ್, ಸುಜಾತ ರಮೇಶ್ ಕೋಟ್ಯಾನ್, ಜಯಂತಿ ವಿ.ಉಳ್ಳಾಲ್, ಯಶೋದಾ ಬಿ.ಪೂಂಜ ಉಪಸ್ಥಿತರಿದ್ದರು.

ಮಹಿಳಾ ಪ್ರಧಾನ ಸಮಾಜಕ್ಕೆ ಸ್ತ್ರೀಯರೂ ಸನ್ನದ್ಧರಾಗುತ್ತಿರುವುದಕ್ಕೆ ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಿದರ್ಶನವಾಗಿದೆ. ಮಹಿಳೆಯರಲ್ಲಿ ಸಮಾಜವನ್ನು ಮುನ್ನಡೆಸುವ ಶಕ್ತಿ ತುಂಬುವ ಕೆಲಸ ಆದಲ್ಲಿ ಸಶಕ್ತ ರಾಷ್ಟ್ರ ನಿರ್ಮಾಣವೂ ಸಾಧ್ಯ. ಮಹಿಳೆಯರ ಆಯುರಾರೋಗ್ಯ ಶ್ರೇಯೋಭಿವೃದ್ಧಿಗೆ ಈ ಸಂಭ್ರಮ ಪೂರಕವಾಗಲಿ ಎಂದು ಎಲ್.ವಿ ಅವಿೂನ್ ಶುಭ ಹಾರೈಸಿದರು.

ರತ್ನಾ ಶೆÉಟ್ಟಿ ಮಾತನಾಡಿ ಅರಸಿನ ಕುಂಕುಮ ಅಂತಹ ಮಹಿಳೆಯರು ಆಚರಿಸುವ ಈ ಕಾರ್ಯಕ್ರಮ ದಲ್ಲಿ ಭಾಗವಹಿಸುವುದರಿಂದ ಮಹಿಳೆಯರಲ್ಲಿ ಸ್ವಾಭಿಮಾನ ಬೆಳೆಯುತ್ತದೆ. ಸಂಸಾರಯುತ ಜೀವನಕ್ಕೂ ಆಕೆಯೇ ಶಕ್ತಿ ಆಗುತ್ತಾಳೆ. ಕನ್ಯೆ ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ನೀತಾ ಚಾಪೇಕರ್ ಮಾತನಾಡಿ ಇಷ್ಟೆಲ್ಲಾ ಮಹಿಳೆಯರು ಭಾಗವಹಿಸಿದ ಇಂದಿನ ಕಾರ್ಯಕ್ರಮಕ್ಕೆ ನನ್ನನ್ನು ಆಮಂತ್ರಿಸುವ ಮೂಲಕ ಕರ್ನಾಟಕ ಮಹಾರಾಷ್ಟ್ರದ ಬಾಂದವ್ಯದ ಸೇತುವೆಯನ್ನು ನಿರ್ಮಿಸಿರುವಿರಿ. ಇನ್ನು ಮುಂದೆಯೂ ನಿಮ್ಮ ಸಂಸ್ಥೆಯಲ್ಲಿ ಉತ್ತಮವಾದ ಸಾಮಾಜಿಕ ಕೆಲಸಗಳು ನಡೆಯುತ್ತಿರಲಿ ಎಂದು ನುಡಿದರು.

ಕಲ್ಪನಾ ಶೆಟ್ಟಿ ಮಾತನಾಡಿ ಅರಶಿನ ಮತ್ತು ಕುಂಕುಮ ಪವಿತ್ರವಾದುದರ ಈ ಕಾರ್ಯಕ್ರಮ ನಡೆಯುವುದಾದರೆ ಮಹಿಳೆಯರ ಪಾತ್ರ ಪ್ರಮುಖವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಸ್ತ್ರೀಯರು ಭಾಗವಹಿಸಿ ಪುಣ್ಯತೆ ಪಡೆದುಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಸಂಘದ ಗೌ| ಕೋಶಾಧಿಕಾರಿ ಸಿಎ| ರಮೇಶ್ ಎ.ಶೆಟ್ಟಿ, ವಿದ್ಯಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ರವೀಂದ್ರ ಅಮೀನ್, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಜಿ.ಆರ್ ಬಂಗೇರಾ, ಲಿಂಗಪ್ಪ ಅವಿೂನ್, ಮಹಿಳಾ ವಿಭಾಗದ ಶಕೀಲಾ ಪಿ.ಶೆಟ್ಟಿ, ವನಿತಾ ವೈ.ನೊಂದಾ, ಶಾಲಿನಿ ಜಿ.ಶೆಟ್ಟಿ, ಸುಮಾ ಎಂ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯೆಯರನೇಕರು ಹಾಜರಿದ್ದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಶಾರದಾ ಎಸ್.ಪೂಜಾರಿ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಕಾರ್ಯದರ್ಶಿ ಲಕ್ಷ್ಮೀ ಕೋಟ್ಯಾನ್ ಅತಿಥಿüಗಳನ್ನು ಪರಿಚಯಿಸಿ ಧನ್ಯವಾದ ಸಮರ್ಪಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here