Thursday 25th, April 2024
canara news

ಮೂಲ್ಕಿಯಲ್ಲಿ ಬಿಲ್ಲವರ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

Published On : 27 Feb 2016   |  Reported By : Rons Bantwal


ಸಮಗ್ರ ಬಿಲ್ಲವರು ಒಂದೇ ರಕ್ತಸಂಬಂಧಿಗಳು : ರಮೇಶ್ ಕುಮಾರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮೂಲ್ಕಿ, ಫೆ.27: ವಿಶ್ವದಾದ್ಯಂತ ಸೇವಾನಿರತ ಬಿಲ್ಲವ ಸಮೂದಾಯದ ವಿವಿಧ ಸಂಘ-ಸಂಸ್ಥೆಗಳ ಸಾಂಘಿಕತ್ವದ ಬಿಲ್ಲವ ಕ್ರೀಡಾ ಸಮಿತಿ ಆಯೋಜಿಸಿರುವ ಎರಡು ದಿನಗಳ ಬಿಲ್ಲವರ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟವು ಇಂದಿಲ್ಲಿ ಮೂಲ್ಕಿಯ ವಿಜಯಾ ಕಾಲೇಜು ಕ್ರೀಡಾಂಗಣದಲ್ಲಿ ಆರಂಭಿಸಲ್ಪಟ್ಟಿತು.

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಅಧ್ಯಕ್ಷ ಮತ್ತು ಬಿಲ್ಲವ ಕ್ರೀಡಾ ಸಮಿತಿ ಗೌರವಾಧ್ಯಕ್ಷ ಜಯ ಸಿ.ಸುವರ್ಣ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ ದೀಪಾ ಕಂಫರ್ಟ್ಸ್‍ನ ಆಡಳಿತ ನಿರ್ದೇಶಕ ರಮೇಶ್ ಕುಮಾರ್ ದೀಪ ಪ್ರಜ್ವಲಿಸಿ ಹಾಗೂ ಭಾರತ್ ಬ್ಯಾಂಕ್‍ನ ನಿರ್ದೇಶಕ, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್ ಕ್ರೀಡಾ ಧ್ವಜಾರೋಹಣ ನಡೆಸಿ ಹಾಗೂ ಉದ್ಯಮಿ ಚಂದ್ರಶೇಖರ್ ಎಸ್.ಪೂಜಾರಿ ವಡಲಾ ಬಲೂನ್‍ಗುಚ್ಫಗಳನ್ನು ಬಾಣೆತ್ತರಕ್ಕೆ ಹಾರಿಸಿ ಪಂದ್ಯಾಟಕ್ಕೆ ವಿಧ್ಯುಕ್ತವಾಗಿ ಚಾಲನೆಯನ್ನೀಡಿದರು.

ಮುಖ್ಯ ಅತಿಥಿüಯಾಗಿ ಜಿ.ಬಿ ಕನ್‍ಸ್ಟ್ರಕ್ಷನ್‍ನ ಗಣೆಬೀಶ್ ಎ.ಬಂಗೇರ, ಪ್ರಧಾನ ಅಭ್ಯಾಗತರುಗಳಾಗಿ ವಿಜಯಾ ಕಾಲೇಜು ಮುಖ್ಯಸ್ಥೆ ಶಮಿನಾ ಆಳ್ವ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಅಧ್ಯಕ್ಷ ಸಾಯಿ ರಾಮ್, ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಇದರ ಅಧ್ಯಕ್ಷ ಅಶೋಕ್ ಎಂ.ಸುವರ್ಣ, ಗುಜರಾತ್ ಬಿಲ್ಲವ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ಸಿ. ಪೂಜಾರಿ, ಅಖಿಲ ಭಾರತ ಬಿಲ್ಲವರ ಯೂನಿಯಾನ್ ಅಧ್ಯಕ್ಷ ನವೀನ್‍ಚಂದ್ರ ಡಿ.ಸುವರ್ಣ, ಬಿಲ್ಲವ ಜಾಗೃತಿ ಬಳಗ ಮುಂಬಯಿ ಅಧ್ಯಕ್ಷ ಎನ್.ಟಿ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್ ಉಪಸ್ಥಿತರಿದ್ದರು.

ವಿಶ್ವದ ಎಲ್ಲಾ ಬಿಲ್ಲವರು ಒಂದೇ ರಕ್ತಸಂಬಂಧಿಗಳು ಆದುದರಿಂದ ಬಿಲ್ಲವರೆಲ್ಲರೂ ಒಳ್ಳೆಯ ಬಂಧುಗಳಾಗಿದ್ದಾರೆ. ಪ್ರಸಕ್ತ ಬಿಲ್ಲಬರು ದುಡ್ಡು, ಧೈರ್ಯಶಾಲಿಗಳಾಗಿದ್ದಾರೆ. ಅಂತೆಯೇ ನಲ್ಲಿನ ಬಹುತೇಕ ಹೆಣ್ಣುಮಕ್ಕಳು ಸುಶಿಕ್ಷಿತರಾಗಿದ್ದಾರೆ ಆದುದರಿಂದಲೇ ಬಿಲ್ಲವರು ಎಲ್ಲವುದರಲ್ಲೂ ಶ್ರೀಮಂತರಾಗಿದ್ದಾರೆ. ಆದರೆ ಜನರಿಂದ ಜನರೊಳಗಿನ ವ್ಯತ್ಯಾಸ ಸಲ್ಲದು. ನಮ್ಮಲ್ಲಿನ ಋಣಾತ್ಮಕ ತಿಳುವಳಿಕೆಯಿಂದ ಸಂಬಂಧಗಳು ಕ್ಷಿಣಿಸಿರಬಹುದು. ಕೋಟಿಚೆನ್ನಯರ ರಕ್ತಗತ ಬಲಾಢ್ಯತೆಯನ್ನು ಪ್ರದರ್ಶಿಸುವ ಕಾಲ ಇದಲ್ಲ. ನಮ್ಮ ಯುವಜನತೆ ಪೆಟ್ಟು ಸಿಟ್ಟು ಬಿಟ್ಟು ಗಲಾಟೆ, ಗುದ್ದಾಟ, ಅರಾಟೆಗಳ ಭರಾಟೆಗೆ ಹೋಗದೆ ಸಮಾಜಹಿತಕ್ಕಾಗಿ ಶ್ರಮಿಸುವ ಅಗತ್ಯ ನಮಗಿದೆ ಎಂದು ರಮೇಶ್ ಕುಮಾರ್ ಕರೆಯಿತ್ತರು.

ಒಂಭತ್ತು ಮಾಗಣೆಯ ಮೂಲ್ಕಿಯಲ್ಲಿ ಎಲ್ಲವೂ ಒಳ್ಳೆಯದ್ದೇ ನಡೆಯುತ್ತದೆ. ಇದನ್ನು ಮನುಕುಲಕ್ಕೆ ದೇವರು ತೋರಿಸಿ ಕೊಟ್ಟಿದ್ದಾರೆ. ದುರ್ಗಾದೇವಿಯು ಮೂಲ್ಕಿಯಲ್ಲಿ ಕೋಟಿಚೆನ್ನಯರಿಗೆ, ಬಪ್ಪನಾಡುನಲ್ಲಿ ಬಪ್ಪಬ್ಯಾರಿಗೆ ಒಳಿದ ಇತಿಹಾಸವುಳ್ಳ ಇಲ್ಲಿ ನಾವು ಸಾಮರಸ್ಯತ್ವವನ್ನು ತಿಳಿದು ಬಾಳಬಹುದು. ಇಂತಹ ಜಾಗದಲ್ಲಿ ಸಮಗ್ರ ಬಿಲ್ಲವರ ಏಕತೆಯ ಪಂದ್ಯಾಟ ಎಲ್ಲಾ ಬಿಲ್ಲವರ ಅಭಿಮಾನವಾಗಿದೆ. ಬಿಲ್ಲವರಿಗೆ ನಾಯಕತ್ವ ನೀಡಿದ ನಾಡು ಇದಾಗಿದೆ. ಸಮಗ್ರ ಬಿಲ್ಲವರು ತಮ್ಮ ಏಕತೆಯನ್ನು ಮೆರೆದು ಭವಿಷ್ಯತ್ತಿನ ಪೀಳಿಗೆಗೆ ಮಾದರಿಯಾಗಬೇಕು. ಸಾಮಾಜಿಕ, ಆಥಿರ್üಕ ಮತ್ತು ಶೈಕ್ಷಣಿಕವಾಗಿ ಮುನ್ನಡೆದು ಸಮಾಜ ಸೇವಾ ನಿರತವಾಗಿ ಇಡೀ ಸಮಾಜವೇ ಸಲಾಂ ಹಾಕುವಂತೆ ನಮ್ಮ ನಡೆಯಾಗಲಿ ಎಂದು ಜಯಸುವರ್ಣರು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಲ್ಲವಾಸ್ ದುಬಾಯಿ ಅಧ್ಯಕ್ಷ ಸತೀಶ್ ಪೂಜಾರಿ, ಗುರು ಸೇವಾ ಸಮಿತಿ ಬಹರೆನ್ ಬಿಲ್ಲವಸ್‍ನ ಅಧ್ಯಕ್ಷ ರಾಜ್ ಕುಮಾರ್, ಒಮನ್ ಬಿಲ್ಲವಸ್ ಮಸ್ಕತ್ ಅಧ್ಯಕ್ಷ ಎಸ್.ಕೆ.ಪೂಜಾರಿ, ಬಿಲ್ಲವ ಸಂಘ ಕುವೈೀಟ್ ಅಧ್ಯಕ್ಷ ಚಿತ್ರೇಕ್ ಬಂಗೇರ, ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಬೋಂಟ್ರ, ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಸಂತೋಷ್ ಕುಮಾರ್, ಶ್ರೀ ನಾರಾಯಣ ಗುರು ಯುವ ವೇದಿಕೆ ಮಂಗಳೂರು ಅಧ್ಯಕ್ಷ ಲೋಹಿತ್ ಕುಮಾರ್, ಬಿಲ್ಲವರ ಪರಿಷತ್ ಉಡುಪಿ ಅಧ್ಯಕ್ಷ ಶೇಖರ ಕರ್ಕೇರ, ಅಖಿಲ ಭಾರತ ಬಿಲ್ಲವ ಏಕೀಕರಣ ಸಮಿತಿ ಮಂಗಳೂರು ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ನೂತನ ಸುವರ್ಣ ಪುಣೆ ಪ್ರಮುಖರಾಗಿ ಉಪಸ್ಥಿತರಿದ್ದರು.

ಚಿತ್ರಾ ಸುವರ್ಣ ಮತ್ತು ಸುಗಂಧಿ ಸತೀಶ್ ತುಳುನಾಡ ಸರ್ವ ದೈವದೇವರುಗಳನ್ನು ಸ್ತುತಿಸಿದರು. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ, ಬಿಲ್ಲವ ಕ್ರೀಡಾ ಸಮಿತಿ ಅಧ್ಯಕ್ಷ ರಾಜಶೇಖರ್ ಆರ್.ಕೋಟ್ಯಾನ್ ಮುದರಂಗಡಿ ಸ್ವಾಗತಿಸಿದರು. ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಎಂ.ಚಂದ್ರಶೇಖರ ಸುವರ್ಣ ಪ್ರಸ್ತಾವಿಕ ನುಡಿಗಳನ್ನಾಡಿದರು. ಸಂಚಾಲಕ ಬಿಪಿನ್ ಪ್ರಸಾದ್ ಮೂಲ್ಕಿ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು, ಕೋಶಾಧಿಕಾರಿ ಹರೀಶ್ಚಂದ್ರ ಅವಿೂನ್ ಕಟಪಾಡಿ, ಸಂಘಟಕರಾದ ಸುರೇಂದ್ರ ಎ.ಪೂಜಾರಿ, ಹರೀಶ್ ಜಿ.ಅವಿೂನ್, ಶ್ರೀನಿವಾಸ ಆರ್.ಕರ್ಕೇರ, ಭಾಸ್ಕರ್ ಎಂ.ಸಾಲ್ಯಾನ್, ಉರ್ಮಿಳಾ ರಮೇಶ್‍ಕುಮಾರ್, ದಿನೇಶ್ ಅವಿೂನ್, ಚಿದಂಬರ್ ಹೆರಾಜೆ, ನಿಲೇಶ್ ಪೂಜಾರಿ ಪಲಿಮಾರು ಅತಿಥಿüಗಳಿಗೆ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು. ಕ್ರೀಡಾ ಸಮಿತಿ ಸಹ ಸಂಚಾಲಕ ನರೇಂದ್ರ ಕೆರೆಕಾಡು ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಧನ್ಯವದಿಸಿದರು.

ಮೈದಾನದಲ್ಲಿ ನಿರ್ಮಿತ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಹಾಗೂ ಹರೀಶ್ ಶಾಂತಿ ಹೆಜಮಾಡಿ ಪೂಜೆ ನೆರವೇರಿಸಿದರು. ಕೋಟಿಚೆನ್ನಯ ಮತ್ತು ಕಾಂತಬಾರೆಬುದಬಾರೆ ಅವರನ್ನು ಸ್ತುತಿಸಿ ಪಂದ್ಯಾಟ ಆದಿ ಗೊಳಿಸಲಾಯಿತು. ಅಖಿಲ ಭಾರತ ಬಿಲ್ಲವರ ಯೂನಿಯಾನ್ ಮತ್ತು ಬಿಲ್ಲವ ಜಾಗೃತಿ ಬಳಗ ಮುಂಬಯಿ ತಂಡಗಳು ಮೊದಲ ಪಂದ್ಯಾಟದಲ್ಲಿ ಸೆಣದಾಡಿದವು. ಗೌರವಾಧ್ಯಕ್ಷ ಜಯ ಸುವರ್ಣರು ಅತಿಥಿüಗಳು ಮತ್ತು ಅಂಪೇರ್‍ಗಳಾದ ರೊನಾಲ್ಡ್ ಪಿಂಟೋ, ಇಬ್ರಾಹಿಂ ಉಡುಪಿ, ಸುಲೇಮಾನ್ ಕಟಪಾಡಿ ಮತ್ತು ರಾಜೇಶ್ ಮೂಲ್ಕಿ ಅವರಿಗೆ ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ವಿಜಯಕುಮಾರ್ ಕುಬೆವೂರು ಕ್ರೀಡಾಕೂಟದ ಮಾಹಿತಿಯನ್ನಿತ್ತರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮೂವತ್ತು ಸೇವಾ ದಳಪತಿಗಳ ಶಿಸ್ತುಪಾಲನಾ ಸೇವೆ ಪ್ರಶಂಸನೆಗೆ ಕಾರಣವಾಯಿತು. ಸಂಜೆ ರಾಜಶೇಖರ್ ಆರ್.ಕೋಟ್ಯಾನ್ ನಿರ್ಮಾಪಕ, ನಿರ್ದೇಶಕತ್ವ ನಟನೆಯ 2014ನೇ ಸಾಲಿನ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿ `ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ' ಪ್ರಶಸ್ತಿ ವಿಜೇತ `ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ' ತುಳು ಚಲನಚಿತ್ರ ಪ್ರದರ್ಶಿಸಲ್ಪಟ್ಟಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here