Thursday 25th, April 2024
canara news

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯಿದೆ 2005 ಕುರಿತು ಮಾಹಿತಿ ಶಿಬಿರ – 2016.

Published On : 27 Feb 2016   |  Reported By : Bernard J Costa


ಕುಂದಾಪುರ: ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ ಅತ್ಯಂತ ಬಹುದೊಡ್ಡ ಸಾÀಮಾಜಿಕ ಪಿಡುಗಾಗಿದೆ, ಇದು ಮಕ್ಕಳ ಮತ್ತು ಮಹಿಳೆಯರ ಹಾಗೂ ಇಡೀ ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ ನಮ್ಮ ಬಹು ಕುಟುಂಬ ಪದ್ದತಿಯಿಂದ ಸಾಮಾಜಿಕವಾಗಿ ನಾವು ಪ್ರಬುದ್ದರಾಗಿದ್ದೆವು, ಆದರೆ ಜಾಗತೀಕರಣದಿಂದಾಗಿ ನಮ್ಮ ಕುಟುಂಬ ಪದ್ದತಿ ತೀವ್ರ ಹಿನ್ನೆಡೆಯಾಗಿದ್ದು, ಕುಟುಂಬದಲ್ಲಿ ಸಾಮರಸ್ಯ, ಭಾವುಕತೆಗೆ ಯಾವುದೇ ಸ್ಥಾನವಿಲ್ಲದಂತಾಗಿದೆ ಎಂದು ಶ್ರೀ ಅಶೋಕ್ ಶೆಟ್ಟಿ ಧರ್ಮದರ್ಶಿಗಳು ಶ್ರೀ ಶನೀಶ್ವರ ದೇವಸ್ಥಾನ ಚೋನಮನೆ ಅಜ್ರಿ, ಕುಂದಾಪುರ ತಾಲೂಕು ಇವರು ಹೇಳಿದರು.

ಅವÀರು ಇತ್ತೀಚೆಗೆ ಅಭಿವೃದ್ಧಿಸಂಸ್ಥೆ(ರಿ.) ಬಾಳ್ಕುದ್ರು ಹಂಗಾರಕಟ್ಟೆ ಇದರ 6ನೇ ವಾರ್ಷಿಕೋತ್ಸವದ ಅಂಗವಾಗಿ ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ “ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯಿದೆ 2005” ಕುರಿತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆ ನೀಡುವ ಕಲಾ ಕುಸುಮ ಪ್ರಶಸ್ತಿಯನ್ನು ಶ್ರೀ ಸದಾಶಿವ ಅಮೀನ್, ಕೊಕ್ಕರ್ಣೆ, ಶ್ರೀಮತಿ ಲಲಿತ ತುಂಗಾ ಸಾಸ್ತಾನ, ಶ್ರೀ ಶ್ರೀಧರ ಹೆಬ್ಬಾರ್ ಕರ್ಜೆ, ಮಹಮ್ಮದ್ ಗೌಸ್ ಕಾವ್ರಾಡಿ, ಶ್ರೀ ಕೆ.ಜಿ. ಗಣೇಶ್ ಕಿದಿಯೂರು ಹಾಗೂ ಶ್ರೀಮತಿ ಜ್ಯೋತಿ ಪ್ರಭು ಕೊಕ್ಕರ್ಣೆ ಇವರಿಗೆ ಪ್ರಧಾನ ಮಾಡಿದರು.
ಸಭಾಧ್ಯಕ್ಷತೆಯನ್ನು ಶ್ರೀ ಕೆ.ಆರ್. ನಾೈಕ್ ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಹಾಗೂ ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ಕುಂದಾಪುರ ಇವರು ವಹಿಸಿ, ಮಹಿಳೆಯರು ತಮ್ಮ ಗಂಡ ಕೊಡುವ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಸಹಿಸಿಕೊಂಡೇ ಬದುಕುತ್ತಿದ್ದಾರೆ. ಹೊಡೆಯದಂತೆ, ಹಿಂಸೆ ಕೊಡದಂತೆ ತಮ್ಮ ಗಂಡನನ್ನು ಬದಲಾಯಿಸಲು ಸಾಧ್ಯವಿಲ್ಲದಿರಬಹುದು. ಆದರೆ ಈ ಎಲ್ಲಾ ಹಿಂಸೆಯಿಂದ ತಪ್ಪಿಸುವ ತಂತ್ರಗಾರಿಕೆ ತಿಳಿದಿರಬೇಕು. ತಮ್ಮ ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸಬೇಕು. ತಮ್ಮ ಮೇಲೆ ನಡೆಯುವ ದೌರ್ಜನ್ಯಕ್ಕೆ ತಾವು ಕಾರಣರಲ್ಲ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಅಲ್ಲದೆ ತಮ್ಮ ನೋವನ್ನು ಆತ್ಮೀಯರಲ್ಲಿ ಹೇಳಿಕೊಳ್ಳಬೇಕೆಂದರು.

ಮುಖ್ಯ ಅತಿಥಿಯಾಗಿ ಶ್ರೀ ಕಬ್ಬಾಳ್‍ರಾಜ್ ಎಚ್.ಡಿ. ಪೋಲೀಸ್ ಉಪನಿರೀಕ್ಷಕರು, ಕೋಟ, ಶ್ರೀಕಾಂತ ಶೆÀಣೈ, ಮಾಲಕರು ಶ್ರೀದೇವಿ ಇಲೆಕ್ಟ್ರಿಕಲ್, ಕೋಟ, ಶ್ರೀ ಸುರೇಶ್ ಹುಬ್ಳೀಕರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ಘಟಕದ ಮೇಲ್ವಿಚಾರಕರು, ಶ್ರೀ ಗಣೇಶ್ ಆಚಾರ್ಯ ಸ್ವರ್ಣೋಧ್ಯಮಿ, ಕೋಟ, ಸಂಪನ್ಮೂಲವ್ಯಕ್ತಿ ಶ್ರೀಮತಿ ಅಮ್ರತಕಲಾಚಂದ್ರಶೇಖರ್, ಅಭಿವೃದ್ಧಿಸಂಸ್ಥೆ(ರಿ.) ಕಾರ್ಯದರ್ಶಿ ಶ್ರೀ ರಮೇಶ್ ವಕ್ವಾಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಾರ್ಕೂರು ಪಡುಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿದ್ಯಾರ್ಥಿಗಳು, ಶ್ರೀಶಕ್ತಿ ಗುಂಪಿನ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಪೋಷಕರು ಈ ಮಾಹಿತಿಯಿಂದ ಪ್ರಯೋಜನ ಪಡೆದರು. ಈ ಕಾರ್ಯಕ್ರಮವನ್ನು ರವೀಂದ್ರ ಕೊಠಾರಿ ನಿರೂಪಿಸಿ, ರಮೇಶ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ವರದಿವಾಚನಗೈದು ಸ್ವಾಗತಿಸಿದರು, ಶಕೀಲಾ ಡಿ. ರಾವ್ ವಂದಿಸಿದರು, ಶ್ರೀಮತಿ ಅಮ್ರತಕಲಾ ಚಂದ್ರಶೇಖರ್ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯಿದೆ 2005 ಕುರಿತು ಮಾಹಿತಿ ನೀಡಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here