Saturday 20th, April 2024
canara news

ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಸಂಭ್ರಮಿಸಿದ 32ನೇ ವಾರ್ಷಿಕೋತ್ಸವ

Published On : 28 Feb 2016   |  Reported By : Rons Bantwal


ವಿರಾರ್ ಲ| ಕೃಷ್ಣಯ್ಯ ಹೆಗ್ಡೆಗೆ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪ್ರದಾನ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಬಂಟ್ವಾಳ (ಪುಂಜಾಲಕಟ್ಟೆ), ಫೆ.28: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಲ್ಲೊಂದಾದ ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಸಂಸ್ಥೆಯು ಇಂದಿಲ್ಲಿ ಆದಿತ್ಯವಾರ ಪುಂಜಾಲಕಟ್ಟೆ ಅಲ್ಲಿನ ಬಂಗ್ಲೆ ಮೈದಾನದಲ್ಲಿ 8ನೇ ಸಾಮೂಹಿಕ ವಿವಾಹ ಸಮಾರಂಭ ಮತ್ತು ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳೊಂದಿಗೆ ತನ್ನ 32ನೇ ವಾರ್ಷಿಕೋತ್ಸವ ಸಂಭ್ರಮಿಸಿತು.

ವಿವಾಹದಲ್ಲಿ ಭಾಗಿಯಾದ ನವ ಜೋಡಿಗಳನ್ನು ಬೆಳಿಗ್ಗೆ ಗಣ್ಯರ ಉಪಸ್ಥಿತಿಯಲ್ಲಿ ಭವ್ಯ ಮೆರವಣಿಗೆಯಲ್ಲಿ ವಿವಾಹ ಮಂಟಪಕ್ಕೆ ಬರಮಾಡಿ ಕೊಳ್ಳಲಾಗಿದ್ದು, ಸಾಮೂಹಿಕ ವಿವಾಹ ಸಮಾರಂಭದ ಮಹಾಪೆÇೀಷಕ, ಮುಂಬಯಿ ವಿೂಭಾಯಂಧರ್ ದಕ್ಷಿಣ ಭಾರತೀಯ ಬಿಜೆಪಿ ಘಟಕದ ಅಧ್ಯಕ್ಷ ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ ಸಾರಥ್ಯದಲ್ಲಿ ಜರುಗಿದ ಸಮಾರಂಭದಲ್ಲಿ ಶಿಕ್ಷಕ ಕೃಷ್ಣಪ್ಪ ಬಂಗೇರ ನೂಜಿದಡಿ ಮತ್ತು ಪ್ರಗತಿಪರ ಕೃಷಿಕ ಶ್ರೀಧರ ಶೆಟ್ಟಿ ದಿಬ್ಬಣ ಮೆರವಣಿಗೆ ಚಾಲನೆಯನ್ನಿತ್ತರು.

ಶ್ರೀ ಗೋವಿಂದಕೃಷ್ಣ ದೇವಾಲಯ ಗುರುವಾಯನಕೆರೆ ಇದರ ಮಾಜಿ ಪ್ರಧಾನ ಅರ್ಚಕ ವೇ| ಮೂ| ಶ್ರೀ ಕೃಷ್ಣ ಭಟ್ ತಮ್ಮ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾಮೂಹಿಕ ವಿವಾಹ ನೆರವೇರಿಸಿ ಅನುಗ್ರಹಿಸಿದರು. ಸಪ್ತಪದಿ ತುಳಿದು ಸಾಂಸರಿಕ ಬಾಳಿಗೆ ಕಾಲಿಟ್ಟ ಸುಮಾರು 27 ಜೋಡಿ ವಧುವಿಗೆ ಚಿನ್ನದ ತಾಳಿ, ವಧು ವರರಿಗೆ ಉಡುಪು ಹಾಗೂ ವಧು ವರರಿಗೆ 10,000 ರೂಪಾಯಿ (ಜಂಟಿ ಖಾತೆಯಲ್ಲಿಸಿ) ಉಡುಗೊರೆಯಾಗಿ ನೀಡಲಾಯಿತು. ಹಸೆಮಣೆಯ ನ್ನೇರಿ ಗೃಹಸ್ಥಾಶ್ರಮದ ದೀಕ್ಷೆ ಪಡೆದ ನವ ವಧುವರರಿಗೆ ಉದ್ಯಮಿಗಳಾದ ವಸಂತ ಹೆಗ್ಡೆ ಪಾದೆಗುತ್ತು ಮತ್ತು ಸ್ವರ್ಣಲತ ವಿ.ಹೆಗ್ಡೆ ತಾಳಿ ಪ್ರದಾನಿಸಿ ಶುಭಾರೈಸಿದರು.

ಬಳಿಕ ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ತನ್ನ 32ನೇ ವಾರ್ಷಿಕೋತ್ಸವ ಸಂಭ್ರಮಿಸಿದ್ದು, ಹೆಗ್ಗಡೆ ಸೇವಾ ಸಂಘ ಬೆಂಗಳೂರು ಇದರ ಅಧ್ಯಕ್ಷ ದೆವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆಯಲ್ಲಿ ನೇರವೇರಿದ ವಾರ್ಷಿಕೋತ್ಸವ ಸಮಾರಂಭಕ್ಕೆ ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳೆಪಾಡಿಗುತ್ತು ಅವರನ್ನೊಳಗೊಂಡು ಮಂಗಳೂರು ಲೋಕ ಸಭಾ ಸದಸ್ಯ ನಳೀನ್ ಕುಮಾರ್ ಕಟೀಲು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆಯನ್ನಿತ್ತರು.

ಸುಂದರ್‍ರಾಜ್ ಹೆಗ್ಡೆ ಮುಂಬಯಿ, ರತ್ನಾಕರ್ ಜಿ.ಪೂಜಾರಿ ಮತ್ತು ಮೋಹನ್‍ದಾಸ್ ಎ.ಪೂಜಾರಿ ಭಿವಂಡಿ, ಹರೀಶ್ ಪೂಜಾರಿ ಹ್‍ರ್ಷಲಿ ಸಿದ್ಧಕಟ್ಟೆ, ಜೋಸೆಫ್ ಎಂ.ಎನ್., ಅಶೋಕ್ ಶೆಟ್ಟಿ ಸರಪಾಡಿ, ರಾಜ್‍ಕುಮಾರ್ ಶೆಟ್ಟಿ, ಶ್ರೀನಿವಾಸ ಪೂಜಾರಿ ವಾಮಂಜೂರು, ಪುರುಷೋತ್ತಮ ಶೆಟ್ಟಿ ಮಂಗಳೂರು, ಸುಂದರ ನಾಯ್ಕ ಪಿಲಾತವೆಟ್ಟು, ಲಕ್ಷಿ ್ಮೀ ಬಂಗೇರಾ, ಫೆರ್ನಾಂಡಿಸ್ ಲೊರೆತ್ತೋ, ಚಂದ್ರಶೇಖರ ಶೆಟ್ಟಿ ಪಿಲಾತಬೆಟ್ಟು, ಶಂಕರ್ ಶೆಟ್ಟಿ ಬೆದ್ರುಮಾರು, ಹೇಮಚಂದ್ರ ಸಿದ್ಧಕಟ್ಟೆ, ಸುಲೋಚನಾ ಜಿ.ಕೆ ಭಟ್, ಓಸ್ವಲ್ಡ್ ಅವರನ್ನೊಳಗೊಂಡು ಸಂಸದ ನಳೀನ್ ಕುಮಾರ್ ಕಟೀಲು ಅವರು ಸಂಸ್ಥೆಯು ವಾರ್ಷಿಕವಾಗಿ ಕೊಡ ಮಾಡುವ ವಾರ್ಷಿಕ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿಯನ್ನು ಲ| ಕೃಷ್ಣಯ್ಯ ಎ.ಹೆಗ್ಡೆ ಮುಂಬಯಿ (ಉದ್ಯಮ), ಸೀತಾರಾಮ ಕುಲಾಲ್ ಕಟೀಲು (ಯಕ್ಷಗಾನ), ದಯಾನಂದ ಜಿ. ಕತ್ತಲ್‍ಸಾರ್ (ಜಾನಪದ), ರೋಹಿನಾಥ್ ಪಾದೆ (ಶಿಕ್ಷಣ), ಚಿತ್ರಕುಮಾರ್ ಉಡುಪಿ (ಯುವ ಸಂಘಟನೆ), ಸ್ವಸ್ಥಿಕ್ ಸಂಭ್ರಮ ಪುರಸ್ಕಾರವನ್ನು ವರದರಾಜ ಪೈ, ಮಾವಿನಕಟ್ಟೆ (ಉದ್ಯಮ), ಮಂಜಪ್ಪ ಮಡಂತ್ಯಾರು (ಸಮಾಜಸೇವೆ), ಗೋಪಾಲ ಅಂಚನ್ ಮತ್ತು ಮೋಹನ್ ಶ್ರೀಯಾನ್ (ಪತ್ರಿಕೋದ್ಯಮ), ಕು| ಪಂಚಾಮಿ ಮಾರೂರು ಮತ್ತು ಕು| ಅದ್ವಿತಾ ಶೆಟ್ಟಿ ಮಂಗಳೂರು (ಬಾಲ ಪ್ರತಿಭೆ) ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಕರೆಂಕಿ ಸಂಸ್ಥೆಗೆ ಅತ್ಯುತ್ತಮ ಯುವ ಸಂಘಟನೆ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು.

ಸ್ವಸ್ತಿಕ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಪಿ.ಅಬ್ದುಲ್ಲಾ, ಕೋಶಾಧಿಕಾರಿ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದು, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಸ್ವಾಗತಿಸಿ ಪ್ರಸ್ತವಿಕ ನುಡಿಗಳನ್ನಾಡಿದರು. ಪಿ.ಎಂ ಪ್ರಭಾಕರ್ ಪ್ರಾರ್ಥನೆಯನ್ನಾಡಿದರು. ಹೆಚ್.ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯರಾಜ್ ಅತ್ತಾಜೆ ಅಭಾರ ಮನ್ನಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here