Wednesday 24th, April 2024
canara news

ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ – 2016ಕ್ಕೆ ತೆರೆ

Published On : 09 Mar 2016   |  Reported By : Rons Bantwal


ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ “ನಾಟ್ಕ ಸಂಮಾನ”ರಾಷ್ಟ್ರೀಯ ಪ್ರಶಸ್ತಿ ಪ್ರಧಾನ

ಮುದ್ರಾಡಿ ನಾಟ್ಕದೂರು (ಹೆಬ್ರಿ) : ನಾಟಕಗಳು ಮನಸ್ಸನ್ನು ಅರಳಿಸಬೇಕು,ಕೆಲವೊಮ್ಮೆ ವೃತ್ತಿ ರಂಗಭೂಮಿಯವರು ಕೀಳು ಮಟ್ಟದ ಪದ ಪ್ರಯೋಗಗಳನ್ನು ಮಾಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ,ರಂಗದಲ್ಲಿ ಇಂತಹ ಪದಪ್ರಯೋಗ ಸರಿಯಲ್ಲ,ಹವ್ಯಾಸಿ ರಂಗಭೂಮಿಗೆ ಖಂಡಿತಾ ಸಾವಿಲ್ಲ,ಸ್ವಲ್ಪ ಕಾಲ ವೈಭವ ಕಳೆದುಕೊಳ್ಳ ಬಹುದು,ಆದರೂ ಮತ್ತೇ ಚೈತನ್ಯ ತುಂಬಿ ಯಶಸ್ವಿಯಾಗುತ್ತದೆ ಎಂದು ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಅವರು ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆ ವತಿಯಿಂದ ನಾಟ್ಕದೂರಿನ ಬಯಲು ರಂಗಮಂದಿರದಲ್ಲಿ 7 ದಿನಗಳ ಕಾಲ ನಡೆದ 6ನೇ ವರ್ಷದ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ – 2016 ಸಮಾರೋಪ ಸಮಾರಂಭದಲ್ಲಿ ಸೋಮವಾರ 2016ನೇ ಸಾಲಿನ ಮುದ್ರಾಡಿ “ನಾಟ್ಕ ಸಂಮಾನ”ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ರಂಗಭೂಮಿಯನ್ನು ಉಳಿಸಿ ಬೆಳೆಸುವುದು ಬಹುದೊಡ್ಡ ಕೆಲಸ,ಹಾಗಾಗಿ ಸೃಜನಶೀಲ ವ್ಯಕ್ತಿತ್ವದವರು ಹಣ ಮಾಡುಲು ಹೋಗುವುದಿಲ್ಲ ನಿರಂತರ ರಂಗದ ಕಾಯಕದಲ್ಲೇ ಇರುತ್ತಾರೆ,ಇದಕ್ಕೆ ರಂಗಭೂಮಿಗೆ ಅಪರೂಪದ ಸೇವೆ ಸಲ್ಲಿಸುತ್ತಿರುವ ಮುದ್ರಾಡಿ ರಂಗ ಕುಟುಂಬವೇ ಸಾಕ್ಷಿ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಡಿ ಬಡಿ ಹೊಡಿ ಸಂಸ್ಕøತಿ ಬೇಡ : ನಾಡಿನಲ್ಲಿ ಹೊಡಿ ಬಡಿ ಕಡಿ ಸಂಸ್ಕøತಿ ಹೆಚ್ಚಾಗುತ್ತಿದ್ದು ಇದು ನಾಡಿಗೆ ಒಳ್ಳೇಯದಲ್ಲ ಇದಕ್ಕೆ ಕಡಿವಾಣ ಹಾಕುವುದು ಎಲ್ಲರ ಕರ್ತವ್ಯ ಎಂದು ಮಾರ್ಮಿಕವಾಗಿ ನುಡಿದ ಸ್ವಾಮೀಜಿ ಸ್ವಾಮೀಜಿಗಳಿಗೆ ಪ್ರಶಸ್ತಿ ಅಗತ್ಯವಿಲ್ಲ,ಸ್ವಾಮೀತ್ವವೇ ಬಹುದೊಡ್ಡ ಗೌರವ,ಪ್ರಶಸ್ತಿಯನ್ನು ಕೊಂಡುಕೊಳ್ಳುವ ಈ ಕಾಲದಲ್ಲಿ ಪ್ರಶಸ್ತಿಯನ್ನು ಗುರುತಿಸಿ ಕೊಟ್ಟಾಗ ಪ್ರಶಸ್ತಿಯ ಮೌಲ್ಯವು ಹೆಚ್ಚುತ್ತದೆ, ಪ್ರಶಸ್ತಿ ಪಡೆದವನ ಘನತೆಯು ಹೆಚ್ಚುತ್ತದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಹಿತಿ ಡಾ.ನಾ.ಮೊಗಸಾಲೆ ಅಭಿನಂದನ ಭಾಷಣ ಮಾಡಿ ಬಸವ ಧರ್ಮದಲ್ಲಿ ಸಾಂಸ್ಕøತಿಕ ವೈಭವವನ್ನು ವೈಭವಿಕರಿಸುವ ದೊಡ್ಡ ಕೆಲಸವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದರು.

ಖ್ಯಾತ ಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು,ಪ್ರಶಸ್ತಿ ಪುರಸ್ಕøತ ಚಿತ್ರನಟ ಸಂಚಾರಿ ವಿಜಯ್ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಸಾಹಿತಿ ರಂಗ ನಿರ್ದೇಶಕ ಡಾ.ನಾ.ದಾಮೋದರ ಶೆಟ್ಟಿ, ವಿಶೇಷ ರಂಗಸೇವೆ ಸಲ್ಲಿಸಿದ ಕರುಣಾಕರ ಶಿವಪುರ,ನವೀನ್ ಕೋಟ್ಯಾನ್,ಶ್ರೀಧರ್,ರಾಘವೇಂದ್ರ,ಶಶಿರಾಜ್,ಡಾ.ನರಸಿಂಹ ಮೂರ್ತಿ,ದಿವಾಕರ್ ಕಟೀಲ್ ಮತ್ತಿತರರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಜನಪದ ತಂಡಗಳ ಮೆರವಣಿಗೆ ಮತ್ತು ಪ್ರದರ್ಶನ ಹಾಗೂ ಪ್ರಶಸ್ತಿ ಪುರಸ್ಕøತ ಕನ್ನಡ ಚಲನಚಿತ್ರ ‘ನಾನು ಅವನಲ್ಲ ಅವಳು’ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಯಿತು.
ಪ್ರೇಕ್ಷಕರ ಸಾಲಿನಿಂದ ಹಿರಿಯ ಪತ್ರಕರ್ತ ಸಾಹಿತಿ ಶೇಖರ ಅಜೆಕಾರು ಚಿತ್ರ ಮತ್ತು ಚಿತ್ರತಂಡವನ್ನು ಅಭಿನಂದಿಸಿ ಮಾತನಾಡಿದರು.

ನಮತುಳುವೆರ್ ಕಲಾ ಸಂಘಟನೆಯ ನಾಟ್ಕ ಮುದ್ರಾಡಿ ಸಂಸ್ಥಾಪಕ ಧರ್ಮಯೋಗಿ ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಅತೀ ಶೀಘ್ರವಾಗಿ ಸಕಲ ವ್ಯವಸ್ಥೆಯ ಸುಸಜ್ಜಿತ ಬಯಲು ರಂಗಮಂದಿರ ಎಲ್ಲರ ಆಶಯದಂತೆ ಭವ್ಯವಾಗಿ ಮೂಡಿಬರಲಿ ಎಂದು ಶುಭಾಹಾರೈಸಿದರು.

ಕನ್ನಡ ಸಂಸ್ಕøತಿ ಇಲಾಖೆಯ ಉಡುಪಿ ಜಿಲ್ಲಾ ನಿರ್ದೇಶಕ ಡಾ.ಬಿ.ದೇವದಾಸ ಪೈ, . ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸಂಘಟಕ ಸುಕುಮಾರ್ ಮೋಹನ್,ರಂಗನಟ ನಿರ್ದೇಶಕ ಜಗದೀಶ ಜಾಲ,ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು,ಉಮೇಶ್ ಕಲ್ಮಾಡಿ,ಸುಗಂಧಿ ಉಮೇಶ್ ಕಲ್ಮಾಡಿ,ಸುರೇಂದ್ರ ಮೋಹನ್,ಸುಧೀಂದ್ರ ಮೋಹನ್,ವಾಣಿ ಸುಕುಮಾರ್ ಮೋಹನ್,ಕಮಲಾ ಮೋಹನ್,ಪೂರ್ಣಿಮಾ ಸುಧೀಂದ್ರ ಮೋಹನ್,ಪವಿತ್ರಾ ಸುರೇಂದ್ರ ಮೋಹನ್,ಕರುಣಾಕರ ಶಿವಪುರ ಮತ್ತಿತರರು ಉಪಸ್ಥಿತರಿದ್ದರು.ರಂಗ ನಿರ್ದೇಶಕ ಜಗದೀಶ ಜಾಲ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಕುಮಾರ್ ಮೋಹನ್ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here