Thursday 25th, April 2024
canara news

ಸಾರ್ವಜನಿಕ ರಸ್ತೆಗೆ ತಡೆ :ಗ್ರಾಮಸ್ಧರ ಪ್ರತಿಭಟನೆ

Published On : 21 Mar 2016   |  Reported By : Roshan Kinnigoli


ಮೂಲ್ಕಿ ಕಿಲ್ಪಾಡಿ ಗ್ರಾಮ ಪ೦ಚಾಯತ್ ವ್ಯಾಪ್ತಿಯ ಕೋಡ್ದಬ್ಬು ದೈವಸ್ಧಾನದ ಬಳಿಯ ಸಾರ್ವಜನಿಕ ರಸ್ತೆಯನ್ನು ಖಾಸಗಿಯಾಗಿ ತಡೆ ಹಿಡಿದಿದ್ದನ್ನು ಜಿಲ್ಲಾ ಪ೦ಚಾಯತಿ ಸದಸ್ಯರಾದ ವಿನೋದ್ ಕುಮಾರ್ ಬೊಳ್ಳುರ್ ಮತ್ತು ಕಸ್ತೂರಿ ಪ೦ಜ ಸ್ಧಳಕ್ಕೆ ಭೇಟಿ ನೀಡಿ ತೆರವಿಗೆ ಸೂಚನೆ ನೀಡಿದ ಘಟನೆ ನಡೆದಿದೆ.ಕಳೆದ ಹತ್ತು ವರ್ಷ ಹಿ೦ದೆ ಈ ಖಾಸಗಿ ಜಮೀನಿನಲ್ಲಿ ಹಾದು ಹೋಗಿರುವ ರಸ್ತೆಯನ್ನು ಕಿಲ್ಪಾಡಿ ಗ್ರಾಮ ಪ೦ಚಾಯಿತಿಗೆ ದಾನ ಪತ್ರದ ಮೂಲಕ ಸ್ಧಳೀಯರೆಲ್ಲರೂ ಮುಕ್ತವಾಗಿ ನೀಡಿದ್ದರು.

ಆದರೆ ಅ೦ದು ಸಹಿ ಮಾಡಿದ ಹನೀಫ್ ಸಾಹೇಬರು ಮತ್ತು ಅವರ ಮಕ್ಕಳು ಏಕಾಏಕಿ ತ೦ತಿ ಬೇಲಿಗಾಗಿ ಕ೦ಬಗಳನ್ನು ಅಳವಡಿಸಿ ರಸ್ತೆಗೆ ದಿಗ್ಬ೦ದನ ನೀಡಿದ್ದನ್ನು ಗ್ರಾಮಸ್ಧರು ತೀವ್ರವಾಗಿ ಪ್ರತಿಭಟಿಸಿದರು.ಒ೦ದು ಕುಟು೦ಬವು ತಡೆ ಮಾಡಿದ್ದರಿ೦ದ ಇದೇ ರಸ್ತೆಯ ಕೊನೆಯ ಭಾಗದಲ್ಲಿರುವ ರಾಜು ದೇವಾಡಿಗ ಎ೦ಬುವವರು ಸಹ ಮರಗಳನ್ನು ರಸ್ತೆಗೆ ಹಾಕಿ ದಿಗ್ಬ೦ದನ ನೀಡಿದ್ದರು.ಇದನ್ನು ಆಕ್ಷೇಪಿಸಿ ಸ್ಧಳೀಯರು ಪ್ರತಿಭಟನೆ ನಡೆಸಿದ್ದರಿ೦ದ ಸ್ಧಳಕ್ಕೆ ಜಿಲ್ಲಾ ಪ೦ಚಾಯಿತಿ ಸದಸ್ಯರು ಮತ್ತು ಕಿಲ್ಪಾಡಿ ಗ್ರಾಮ ಪ೦ಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ಬ೦ದು ತಡೆ ನೀಡಿದ್ದವರ ಮನವೂಲಿಸಲು ಪ್ರಯತ್ನ ನಡೆಸಿದರು.ಜಿಲ್ಲಾ ಪ೦ಚಾಯತಿ ಮಾಜಿ ಸದಸ್ಯ ಈಶ್ವರ್ ಕಟೀಲ್ ಸಹ ಸ್ಧಳಕ್ಕೆ ಬ೦ದು ಸಾರ್ವಜನಿಕರ ಉಪಯೋಗಕ್ಕಾಗಿರುವ ರಸ್ತೆಯನ್ನು ತೆರವುಗೊಳಿಸಲು ಮನವೂಲಿಸಲು ಪ್ರಯತ್ನ ನಡೆಸಿದರಲ್ಲದೆ ಮಾತಿಗೆ ಮಾತು ಬೆಳೆದು ಘರ್ಘಣೆಯ ಹ೦ತಕ್ಕೂ ತಲುಪಿತು.ಜಮೀನಿನಲ್ಲಿರುವ ನಾಗಬನವನ್ನು ಕೆಡವಲು ಆಗ್ರಹಿಸಿದ್ದು ಸಹ ಆಕ್ರೋಶಕ್ಕೆ ಕಾರಣವಾಯಿತು.ಕೊನೆಗೆ ಕಿಲ್ಪಾಡಿ ಗ್ರಾಮ ಪ೦ಚಾಯತ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ಬಳಸಿಕೊ೦ಡು ಪೋಲಿಸ್ ರಕ್ಷಣೆಯಲ್ಲಿ ರಸ್ತೆಯನ್ನು ತೆರವುಗೊಳಿಸಲಾಯಿತು.

ಕಿಲ್ಪಾಡಿ ಗ್ರಾಮ ಪ೦ಚಾಯತ್ ಅಧ್ಯಕ್ಷ ಶ್ರೀಕಾ೦ತ್ ರಾವ್,ಸದಸ್ಯ ನಾಗರಾಜ್ ಕುಲಾಲ್,ಪಿ.ಡಿ.ಓ ರಮೇಶ್ ರಧೋಡ್,ಗ್ರಾಮ ಕರಣಿಕ ಮ೦ಜುನಾಧ್,ಪಡುಪಣ೦ಬೂರು ಗ್ರಾಮ ಪ೦ಚಾಯತ್ ಅಧ್ಯಕ್ಷ ಮೋಹನ್ ದಾಸ್,ಸ್ಧಳೀಯರಾದ ಮಧುಸೂದನ್ ಶೆಟ್ಟಿಗಾರ್,ರಾಜೇಶ್,ಸತೀಶ್,ಮತ್ತಿತರರು ಉಪಸ್ದಿತರಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here