Saturday 20th, April 2024
canara news

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ನಡೆಸಲ್ಪಟ್ಟ ಉಪನ್ಯಾಸ ಹಾಗೂ ಸಂವಾದ

Published On : 22 Mar 2016   |  Reported By : Rons Bantwal


ಪ್ರೆಶ್ನಿಸುವುದು ವಿರೋಧಿ ಎಂದರ್ಥವಲ್ಲ : ಡಾ| ನರೇಂದ್ರ ನಾಯಕ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.22: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕವು ಮತ್ತು ಮುಲುಂಡ್ ಫ್ರೆಂಡ್ಸ್ ಸಂಸ್ಥೆಗಳ ಸಹಯೋಗದಲ್ಲಿ ಸಾಂತಾಕ್ರೂಜ್ ಪೂರ್ವದಲ್ಲಿನ ಕಲೀನಾ ಕ್ಯಾಂಪಸ್‍ನ ಮುಂಬಯಿ ವಿಶ್ವವಿದ್ಯಾಲಯದ ರಾನಡೆ ಭವನದಲ್ಲಿ ಇಂದಿಲ್ಲಿ ಶುಕ್ರವಾರ ಪೂರ್ವಾಹ್ನ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನೆರವೇರಿದ ಅವಳಿ ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪೆÇ್ರ. ಡಾ| ನಿತ್ಯಾನಂದ ಬಿ.ಶೆಟ್ಟಿ ಅವರು `ಹಳೆಗನ್ನಡ ಸಾಹಿತ್ಯ', ಅಂತರಾಷ್ಟ್ರೀಯ ಪ್ರಸಿದ್ಧಿಯ ನಾಡಿನ ಹೆಸರಾಂತ ವಿಚಾರವಾದಿ, ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟದ ರಾಷ್ಟ್ರಧ್ಯಕ್ಷ ಡಾ| ನರೇಂದ್ರ ನಾಯಕ್ ಅವರು `ಅಂಧ: ಶ್ರದ್ಧೆ ನಿವಾರಣೆ ಎಂತು ಮತ್ತು ಹೇಗೆ', ಕರ್ನಾಟಕ ಜಾನಪದ ಪರಿಷತ್ತುನ ಆಡಳಿತಾಧಿಕಾರಿ ಡಾ| ಕುರುವೇ ಬಸವರಾಜ್ ಅವರು `ಆಧುನಿಕತೆಯಲ್ಲಿ ಜಾನಪದ' ವಿಚಾರವಾಗಿ ಉಪನ್ಯಾಸ ನೀಡಿದರು. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಪ್ರಧಾನವಾಗಿ ಭಾಗವಹಿಸಿದ್ದರು.

ಡಾ| ನಿತ್ಯಾನಂದ ಶೆಟ್ಟಿ ಉಪನ್ಯಾಸವನ್ನಿತ್ತು ಕುವೆಂಪು ಅವರ ಧೋರಣೆ-ವೈಚಾರಿಕವಾದದ ಧೋರಣೆ. ನಮ್ಮ ದೇಶದಲ್ಲಿ ವಿಭಿನ್ನ ಧ್ವನಿಗಳಿಗೆ ಅವಕಾಶವಿದೆ. ನಮ್ಮ ಪರಂಪರೆಯಲ್ಲಿ ಬಾರ್ವಾಕನಿಗೂ ಸ್ಥಾನವಿದೆ. ಗೌತಮನಿಗೂ ಸ್ಥಾನವಿದೆ. ತಲ್ಲಣ ನಮ್ಮನ್ನು ಕಾಡಿದಾಗ ಮಾತ್ರ ವಿಚಾರವಾದಿಯಾಗಲು ಸಾಧ್ಯ. ಕುವೆಂಪು ಅವರ ರಾಮಾಯಣ ದರ್ಶನದ ಮಂಧರೆಯ ಬಗ್ಗೆ ಇಡೀ ರಾಮಾಯಣದ ಹಗೆ ಬರಹವನ್ನು ಮಂಧರೆ ಬದಲಾಯಿಸುತ್ತಾಳೆ ಎಂದರು.

ಆಧುನಿಕತೆಯಲ್ಲಿ ಜಾನಪದ ವಿಷಯದಲ್ಲಿ ಮಹ್ಲದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ನಮ್ಮ ಹಿರಿಯರು ನಮಗೆ ಪ್ರಶ್ನಿಸುವುದನ್ನು ಕಲಿಸಿಲ್ಲ. ವೈಚಾರಿಕತೆಯನ್ನು ಹೇಗೆ ಹಬ್ಬಿಸುವುದೇ ಮೂಲಭೂತ ಪ್ರಶ್ನೆ. ವಿಚಾರವಾದಿಗಳದ್ದು 3ನೇ ದೊಡ್ಡ ಸಂಸ್ಥೆ. ಪ್ರಸ್ತುತ ಪ್ರೆಶ್ನಿಸುವುದು ಎಂದರೆ ವಿರೋಧಿಯೇ ಎಂದರ್ಥವಾಗಿರುವುದು ಶೋಚನೀಯ. ನಾನು ಅಂದೋಲನಕ್ಕೆ ಸೇರಿ ನಾಸ್ತಿಕನಾದವನಲ್ಲ. ಪವಾಡವನ್ನು ಯಾರೂ ಮಾಡಬಹುದು. ಪ್ರಶ್ನಿಸುವ ಮನೋವೃತ್ತಿ ಜನರು ನಿರ್ಮಾಣ ಮಾಡಬೇಕು. ಇಂದಿನ ಸರ್ಕಾರ ಪ್ರತ್ಯಕ್ಷವಾಗಿ ಬಾಬಾರಂತಹವರನ್ನು ಬೆಂಬಲಿಸುತ್ತಿರುವುದು ನಮ್ಮ ದುರಂತ ಎಂದÀು ಡಾ| ನರೇಂದ್ರ ನಾಯಕ್ ತಿಳಿಸಿದರು.

ಡಾ| ಬಸವರಾಜ್ ಮಾತನಾಡಿ ಅಕ್ಕ ಸರಸೋಲೆ ಹಟ್ಟಿಲ್ಯಾಕೆ ನಿಂತೆ-ಕೊಟ್ಟೇನು ಬಾರೆ ನಿನಗಿಂಬ, ಹೆಂಗಸು ಮುಕ್ತವಾಗಿ ಯೋಚಿಸಬಲ್ಲಳು. ಶಾಸ್ತ್ರಗಳನ್ನು ಮಾಡಿಕೊಂಡಿರುವುದು ನಮ್ಮ ತಪ್ಪು. ಜಾನಪದ ಹಳೆಯ ಯೋಚನೆ, ಹಳೆಯ ದಾರಿ ಆದರೆ ಸಮಯ ತಕ್ಕಂತೆ ಮುಂದುವರಿಯುತ್ತದೆ. ಎಲ್ಲರಿಗೂ ಬುದ್ಧಿಯಿದೆ, ಪ್ರಜ್ಞೆ ವಿಕಾಸವಿದೆ. ಬದುಕೋ ದೊಡ್ದದು ಜಾನಪದ ಮನುಶ್ಯ ಬದುಕುವುದನ್ನು ಕಲಿಸಿಕೊಳ್ಳುತ್ತದೆ ಎಂದರು.

ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷೀಯ ನುಡಿಗಳನ್ನಾಡಿ ಮನೆ ಚಿಕ್ಕದಾಗಿದ್ದರೂ ಮನಸ್ಸು ದೊಡ್ಡದಾಗಿರಬೇಕು. ಈ ವರ್ಷದ 26ನೇ ಕಾರ್ಯಕ್ರಮ. ವಿಭಾಗ ದ್ವೀಪವಾಗಿ ಕೆಲಸ ಮಾಡುತ್ತಿಲ್ಲ. ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಕೈಗೂಡಿಸಿ ಕೆಲಸ ಮಾಡುತ್ತಿದೆ. 8 ದತ್ತಿ ಉಪನ್ಯಾಸ. ವಿಭಾಗದ ವಿದ್ಯಾಥಿರ್sಗಳು ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಊರಿಗೆ ಮಹತ್ವ ಬರುವುದು ಅಲ್ಲಿಯ ವ್ಯಕ್ತಿಗಳಿಂದಾಗಿ ಅಲ್ಲಿನ ಸಂಘ ಸಂಸ್ಥೆಗಳಿಂದಾಗಿ(ಕುರುವ ಬಸವರಾಜ್) ಈಗ ಎಲ್ಲಾ ಕ್ಷೇತ್ರಗಳಲ್ಲೂ ನೈತಿಕ ಅರ್ಥ ಪತನವಾಗುತ್ತಿದೆ. ಕ್ಷೋಭೆಯ ಮನಸ್ಥಿತಿ-ಜಾಗತೀಕರಣದ ಕರಾಳ ಮುಖವನ್ನು ಕಾಣುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಅನೇಕ ಲೇಖಕರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದು, ಸುಶೀಲಾ ಎಸ್.ದೇವಾಡಿಗ ಪ್ರಾರ್ಥನೆಯನ್ನಾಡಿದರು. ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ ಸ್ವಾಗತಿಸಿದರು. ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿದರು. ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮ ನಿರ್ವಾಹಿಸಿ ವಂದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here