Thursday 25th, April 2024
canara news

ತೋನ್ಸೆ ಅಶ್ವಿನಿ ಪೂಜಾರಿ ಅವರಿಂದ ರೈಲ್ವೇ ನಿಲ್ದಾಣದ ಸ್ವಚ್ಛತೆಗೆ ಚಿತ್ರ ವೈಭವ

Published On : 22 Mar 2016   |  Reported By : Rons Bantwal


ಮುಂಬಯಿ, ಮಾ.22: ಕು| ಅಶ್ವಿನಿ ಪೂಜಾರಿ ತೋನ್ಸೆ ಅವರು ಭಾರತ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನ ಉದ್ದೇಶವನ್ನು ಪೂರೈಸುವ ನಿಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಮಹಾನಗರದಲ್ಲಿನ ಆಯ್ದ ರೈಲ್ವೇ ನಿಲ್ದಾಣಗಲಲ್ಲಿ ಸ್ವಚ್ಛ ಅಭಿಯಾನಕ್ಕಾಗಿ ಪೈಂಟಿಗ್ ಮೂಲಕ ಚಿತ್ರ ವೈಭವ ನಡೆಸಿದರು.

 

ವಿಲೇಪಾರ್ಲೆ ಪಶ್ಚಿಮದ ಪ್ರತಿಷ್ಠಿತ ಶ್ರೀ ವಿಲೇ ಪಾರ್ಲೆ ಕೆಲ್ವಣಿ ಮಂಡಲ್ (ಎಸ್‍ವಿಕೆಎಂ) ದ್ವಾರಕದಾಸ್ ಜೆ.ಸಾಂಘ್ವಿ ಇಂಜಿನೀಯರಿಂಗ್ ಕಾಲೇಜ್‍ನ ಎನ್‍ಎಸ್‍ಎಸ್ ಘಟಕದ ಮುಂದಾಳುತ್ವದಲ್ಲಿ ಮುಂಬಯಿ ಮೂಲತತ್ವ ಧ್ಯೇಯವನ್ನಾಗಿಸಿ ಆಯೋಜಿಸಲಾಗಿದ್ದ ಈ ಅಭಿಯಾನದಲ್ಲಿ ನಗರದ ಜನತೆ ಸ್ವಚ್ಛತೆ ಕಾಪಾಡುವಂತೆ ಮನವರಿಸಲಾಗಿದ್ದು, ವಡಾಪಾವ್, ಡಬ್ಬವಾಲ, ಸೀಲಿಂಕ್, ಭ್ರಷ್ಟಾಚಾರ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆ, ಮೂತ್ರ ವಿಸರ್ಜನೆ ನಿಷೇಧ, ಸಾಮರಸ್ಯ ಬದುಕು, ಸುಖಕರ ರೈಲ್ವೇಯಾನ, ಚರ್ಚ್, ಮಸೀದಿ, ಮಂದಿರಗಳಲ್ಲಿನ ಸೌಹಾರ್ದತೆ, ತಾಜ್‍ಮಹಾಲ್, ಗೇಟ್‍ವೇ ಆಫ್ ಇಂಡಿಯಾ ಇತ್ಯಾದಿ ವಿವಿಧ ಸಾಮಾಜಿಕ ಸಂದೇಶಗಳನ್ನು ಸಾರುವ ಅನೇಕ ಜನಾಕರ್ಷಕ ತಾಣಗಳ ಚಿತ್ರಗಳ ಪೈಂಟಿಂಗ್ ರಚಿಸಿ ಸ್ವಚ್ಛತೆಗೆ ಮನವರಿಸಿದರು. ಸುಮಾರು 50 ಪ್ರತೀಹಾರಿಗಳು (ಅಶರ್) ಸ್ವಸಂತೋಷದಿಂದ 20 ತಾಸುಗಳ ನಿರಂತರ ಶ್ರಮದ ಮೂಲಕ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ ತಡೆಗೋಡೆಗಳನ್ನು ಸುಂದರೀಕರಣ ನಡೆಸಿ ಸಾವಿರಾರು ಜನತೆ, ಪ್ರಾಯಾಣಿಕರು, ಕಲಾಸಕ್ತರ ಪ್ರಶಂಸೆಗೆ ಪಾತ್ರರಾದರು.

ಕಾರ್ಯಕ್ರಮಕ್ಕೆ ಪ್ರಾಂಶುಪಾಲ ಡಾ| ಹರಿ ವಾಸುದೇವನ್, ಕಾರ್ಯಕ್ರಮ ಸಂಯೊಜಕ ಚಂದ್ರಶೇಖರ್ ಬೆರಲ್, ಸ್ಟೇಶನ್ ಮೆನೇಜರ್ ಸಾಗರ್ ಕುಲ್ಕರ್ಣಿ ಪ್ರಮುಖರಾಗಿ ಸಹಯೋಗವನ್ನೀಡಿದ್ದರು. ಕು| ಅಶ್ವಿನಿ ಪೂಜಾರಿ ಅವರು ಕುರ್ಲಾ ಪೂರ್ವದ ಜೆರಿಮೆರಿ ಅಲ್ಲಿನ ತೋನ್ಸೆ ಸಂಜೀವ ಪೂಜಾರಿ ಮತ್ತು ವಿಜಯಾ ಸಂಜೀವ ದಂಪತಿ ಸುಪುತ್ರಿಯಾಗಿದ್ದಾರೆ.

ಶೀರ್ಷಿಕೆ: ನಿರ್ಮಿತ ಪೈಂಟಿಂಗ್ ಹಾಗೂ ಒಳಚಿತ್ರದಲ್ಲಿ ಕು| ಅಶ್ವಿನಿ ಪೂಜಾರಿ ತೋನ್ಸೆ




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here