Saturday 20th, April 2024
canara news

ಕಟೀಲಿನಲ್ಲಿ 24 ನೇ ಜಿಲ್ಲಾ ಇಂಟರಾಕ್ಟ್ ಅಧಿವೇಶನ "ಪ್ರಜ್ವಲನ-2014"

Published On : 17 Sep 2014   |  Reported By : r


ರೋಟರಿ ಕ್ಲಬ್ ಕಿನ್ನಿಗೋಳಿ ವಲಯ 3, ರೋಟರಿ ಜಿಲ್ಲೆ 3180 ಇದರ 24 ನೇ ಜಿಲ್ಲಾ ಇಂಟರಾಕ್ಟ್ ಅಧಿವೇಶನ ಪ್ರಜ್ವಲನ ಕಾರ್ಯಕ್ರಮವು ಸಪ್ಟಂಬರ್ 14 ರಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ದುರ್ಗಾ ಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು, ಕಟೀಲಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ರೊಟೇರಿಯನ್ PHF ಡಾ. ಎಸ್ ಭಾಸ್ಕರ್ರವರು ಉದ್ಘಾಟಿಸಿದರು. ನಂತರ ಮಾತನಾಡಿದ PHF ಎ. ಎಸ್.ಎನ್ ಹೆಬ್ಬಾರ್ "ನಾವು ತುಂಬಾನೆ ಆಸಕ್ತಿಯಿಂದ ಅತೀ ಹೆಚ್ಚು ವಿಚಾರಗಳನ್ನು ತಿಳಿದುಕೊಳ್ಳಬೇಕು. ನಾವು ಎಷ್ಟು ಒಳ್ಳೆಯ ವಿಚಾರಗಳನ್ನು ತಿಳಿದು ಕೊಳ್ಳುತ್ತೇವೆಯೋ ಅಷ್ಟು ಶಕ್ತಿ ನಮಗೆ ಸಿಗುತ್ತದೆ. ಈ ಜಗತ್ತಿನಲ್ಲಿ ಒಳ್ಳೆಯದ್ದೂ ಇದೆ, ಕೆಟ್ಟದ್ದೂ ಇದೆ. ಇದರ ಆಯ್ಕೆ ಮಕ್ಕಳು ಮಾಡಿಕೊಳ್ಳಬೇಕು. ನಾವು ನಮ್ಮ ಜೀವನದಲ್ಲಿ ಶಿಸ್ತು ಮತ್ತು ಸಂಯಮವನ್ನು ರೂಢಿ ಮಾಡಿಕೊಳ್ಳುವುದರ ಮೂಲಕ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಪರಿವರ್ತನೆ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ" ಎಂದು ಹೇಳಿದರು.

ಈ ಸಂದರ್ಭದಲ್ಲಿ ರೊ.ವಿಲಿಯಂ ಸಿಕ್ವೇರಾ (ಅಧ್ಯಕ್ಷರು, ರೋಟರಿ ಕ್ಲಬ್ ಕಿನ್ನಿಗೋಳಿ), ವೇದಮೂರ್ತಿ ಶ್ರೀ ವಾಸುದೇವ ಆಸ್ರಣ್ಣ (ಅನುವಂಶಿಕ ಮೊಕ್ತೇಸರರು ಮತ್ತು ಅರ್ಚಕರು, ಶ್ರೀ ಕ್ಷೇತ್ರ ಕಟೀಲು), ರೊ.ಜಗನ್ನಾಥ್ ಕೋಟೆ (ಜಿಲ್ಲಾ ಇಂಟರಾಕ್ಟ್ ಸಭಾಪತಿ, ರೋಟರಿ ಜಿಲ್ಲೆ 3180), ರೊ.ಸದಾಶಿವ ಶೆಟ್ಟಿ (ಜಿಲ್ಲಾ ಇಂಟರಾಕ್ಟ್ ಉಪ ಸಭಾಪತಿ, ರೋಟರಿ ಜಿಲ್ಲೆ 3180), ರೊ.ಎಮ್.ಜಿ.ನಾಗೇಂದ್ರ (ಸಹಾಯಕ ಗವರ್ನರ್ ವಲಯ 3), ಇಂ.ರೋಹನ್ ಜಿ.ಎಡ್ಕೆ (ಜಿಲ್ಲಾ ಇಂಟರಾಕ್ಟ್ ಪ್ರತಿನಿಧಿ). ಇಂ. ಶಿಶಿರ್ ಬಾರ್ಕೂರ್ (ನಿರ್ಗಮನ ಜಿಲ್ಲಾ ಇಂಟರಾಕ್ಟ್ ಪ್ರತಿನಿಧಿ), ರೊ.ಬಾಲಕ್ರಷ್ಣ ಶೆಟ್ಟಿ ಕಳ್ಳಿಗೆ (ಇಂಟರಾಕ್ಟ್ ವಲಯ ಸಂಯೋಜಕರು, ವಲಯ 3), ರೊ.ಶರತ್ ಶೆಟ್ಟಿ (ವಲಯ ಸೇನಾನಿ, ವಲಯ 3), ಇಂ. ವೀಣಾ ಶೆಟ್ಟಿ (ಅಧ್ಯಕ್ಷರು, ಇನ್ನರ್ ವಿಲ್ ಕ್ಲಬ್ ಕಿನ್ನಿಗೋಳಿ), ರೊ.ವಲೇರಿಯನ್ ಡಿಸೋಜಾ (ಅಧಿವೇಶನ ಸಂಚಾಲಕರು, ನಿರ್ದೇಶಕರು ಯುವ ಸಮುದಾಯ ಕಿನ್ನಿಗೋಳಿ), ರೊ. ಗಂಗಾಧರ ಶೆಟ್ಟಿ (ಕಾರ್ಯದರ್ಶಿ ರೋಟರಿ ಕ್ಲಬ್, ಕಿನ್ನಿಗೋಳಿ), ರೊ.ಯಶವಂತ್ ಐಕಳ (ಇಂಟರಾಕ್ಟ್ ಸಭಾಪತಿ ರೋಟರಿ ಕ್ಲಬ್ ಕಿನ್ನಿಗೋಳಿ) ಮತ್ತಿತರರು ಉಪಸ್ಥಿತರಿದ್ದರು. ರೊ.ವಿಲಿಯಂ ಸಿಕ್ವೇರಾ ಸ್ವಾಗತಿಸಿ ವಲೇರಿಯನ್ ಡಿಸೋಜಾ ವಂದಿಸಿದರು. ರೂಪಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ: ರೋಶನ್ ಕಿರೆಂ




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here