Friday 19th, April 2024
canara news

ಹೊಟ್ಟೆಯಲ್ಲಿ ಮಾರುದ್ದದ ಬಟ್ಟೆ -ಖಾಸಗಿ ಆಸ್ಪತ್ರಯಲ್ಲಿ ಸಿಜೇರಿಯನ್ ಅವಾಂತರ- ಮುತ್ತಿಗೆ

Published On : 17 Sep 2014   |  Reported By : Bernard J Costa


ಕುಂದಾಪುರ: ಕುಂದಾಪುರದ ಖಾಸಗಿ ಆಸ್ಪತ್ರೆಯೊಂದಕ್ಕೆ ಹೆರಿಗೆಗಾಗಿ ದಾಖಲಾಗಿ ಸಿಜೆರಿಯನ್ ಮಾಡಲಾದ ಮಹಿಳೆಯ ಹೊಟ್ಟೆಯಲ್ಲಿ ಬಾಕಿ ಉಳಿದಿದ್ದ ಬಟ್ಟೆಯನ್ನು ಸುಮಾರು ಮೂರು ತಿಂಗಳ ನಂತರ ಶಸ್ತ್ರ ಚಿಕಿತ್ಸೆ ಮಾಡಿ ಹೊರ ತೆಗೆಯಲಾಗಿರುವ ಘಟನೆಯ ಕುರಿತಂತೆ ಆಕ್ರೋಶ ವ್ಯಕ್ತ ಪಡಿಸಿರುವ ಆಕೆಯ ಕುಟುಂಬಿಕರು ಈ ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಮೂಲತ ಬೈಂದೂರಿನ ಅರೆ ಶಿರೂರಿನವರಾದ ಅರಣ್ ಕುಮಾರ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಹೋಟೇಲ್ ಉದ್ಯಮವನ್ನು ನಡೆಸುತ್ತಿದ್ದು ಕೆದೂರು ಸಮೀಪದ ಶಾನಾಡಿಯವರಾದ ತನ್ನ ಪತ್ನಿ ಸುಲೋಚನಾ ಶೆಟ್ಟಿ (31) ಎನ್ನುವವರನ್ನು ಹೆರಿಗೆಗೆಂದು ಜೂ.24 ರಂದು ಕುಂದಾಪುರದ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಜೂ.25 ಕ್ಕೆ ಆಕೆಗೆ ಸಿಸೇರಿಯನ್ ಮೂಲಕ ಹೆರಿಗೆ ನಡೆಸಿದ್ದರಿಂದ ಹೆಣ್ಣು ಜನಿಸಿತ್ತು. ಬಳಿಕ ಒಂದು ವಾರಗಳಳಿಗಿಂತಲೂ ಜಾಸ್ಥಿ ಆಸ್ಪತ್ರೆಯಲ್ಲಿದ್ದ ಅವರು ಜುಲೈ 9 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದರು. ಬಳಿ ಆಕೆ ವಿಪರೀತ ರಕ್ತ

ಸ್ರಾವದ ಕಾರಣದಿಂದ ಮತ್ತೆ ಆಸ್ಪತ್ರೆಗೆ ಬಂದು ವೈದ್ಯರನ್ನು ಸಂಪಕಿ೯ಸಿದ್ದು ಈ ವೇಳೆ ಆಕೆಯನ್ನು ಪರೀಕ್ಷಿಸಿದ್ದ ವೈದ್ಯರು ಹೆರಿಗೆಯ ಸಮಯದಲ್ಲಿ ಇದು ಸಾಮಾನ್ಯ. ಸ್ವಲ್ಪ ದಿನದ ಬಳಿಕ ಸರಿ ಹೋಗುವುದಾಗಿ ತಿಳಿಸಿದ್ದರು. ಸುಮಾರು 30 ದಿನವಾದ ಬಳಿಕವೂ ರಕ್ತಸ್ರಾವ ನಿಲ್ಲದೆ ಇದ್ದುದರಿಂದ ಮತ್ತೆ ಆಸ್ಪತ್ರೆಗೆ ಬಂದಿದ್ದ ಆಕೆಗೆ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರಲು ಸೂಚಿಸಲಾಗಿತ್ತು.

ಸ್ಥಳೀಯ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಸ್ಕ್ಯಾನ್ ಮಾಡಿದಾಗ ಹೊಟ್ಟೆಯ ಭಾಗದಲ್ಲಿ ಗಾಳಿ ಗುಳ್ಳೆಗಳಿರುವ ಹಾಗೂ ರಕ್ತ ಹೆಪ್ಪುಗಟ್ಟಿರುವ ಕುರಿತು ತಿಳಿಸಿದ್ದರಿಂದ ವೈದ್ಯರು ಸಣ್ಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು. ಆದರೆ ಮಹಿಳೆಯರು ಮಾತ್ರ ಬಂದಿದ್ದರಿಂದ ಶಸ್ತ್ರ ಚಿಕಿತ್ಸೆ ಕೂಡಲೇ ಬೇಡ ಎಂದು ಆಕೆ ಅಲ್ಲಿಂದ ತೆರಳಿದ್ದರು.

ಆದರೆ ಪದೇ ಪದೇ ಸಮಸ್ಯೆ ಕಾಡ ತೊಡಗಿದಾಗ ಗಂಡ ಹಾಗೂ ಮನೆಯವರ ಸಲಹೆಯಂತೆ ಬೆಂಗಳೂರಿಗೆ ಹೋಗಿ ಅಲ್ಲಿ ಜೆ.ಪಿ ನಗರದ ಸ್ತ್ರೀ ರೋಗ ತಜ್ಞೆಯೊಬ್ಬರ ಬಳಿ ಪರೀಕ್ಷೆ ನಡೆಸಿದಾಗ, ಅವರು ಸಮಸ್ಯೆಯ ಗಂಭೀರತೆಯ ಬಗ್ಗೆ ಸೂಕ್ಷ್ಮವಾಗಿ ತಿಳಿಸಿ ದೊಡ್ಡ ಆಸ್ಪತ್ರೆಗೆ ತೆರಳಲು ಸಲಹೆ ನೀಡಿದ್ದರು.

ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಸುಪರ್ ಸ್ಪೇಶಾಲಿಟಿ ಆಸ್ಪತ್ರೆಯೊಂದರಲ್ಲಿ ಪರೀಕ್ಷೆ ನಡೆಸಿದಾಗ ಆಕೆಯ ಗರ್ಭಕೋಶದಲ್ಲಿ ಮೃದು ಬಟ್ಟೆಯಂತಹ ವಸ್ತು ಇರುವುದು ಪತ್ತೆಯಾಗಿದ್ದರಿಂದ ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಆ ವಸ್ತುವನ್ನು ಹೊರ ತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸುವ ಸಂದರ್ಭದಲ್ಲಿ 4.4 ಸೆ.ಮೀ ಉದ್ದ, 2.5 ಅಗಲ, 0.6 ದಪ್ಪನೆಯ 6 ಗ್ರಾಂ ತೂಕದ ರಕ್ತ ಸ್ರಾವವನ್ನು ತೆಡೆಗಟ್ಟಲು ಬಳಸು ಮೃದುತ್ವ ಹೊಂದಿದ್ದ ಬ್ಯಾಂಡೇಜ್ ಬಟ್ಟೆಯಂತಹ ವಸ್ತುವನ್ನು ಆಕೆಯ ದೇಹದಿಂದ ಹೊರ ತೆಗೆಯಲಾಗಿದೆ. ಹೊಟ್ಟೆಯ ಒಳಗೆ ಉಳಿದಿದ್ದ ವಸ್ತುವನ್ನು ಹೊರ ತೆಗೆದ ಬಳಿಕ ಇದೀಗ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಆಕೆಯ ಆರೋಗ್ಯ ಸ್ಥಿತಿಯನ್ನು ನಿಗಾ ವಹಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿರುವುದಾಗಿ ಆಕೆ ಬಂಧುಗಳು ತಿಳಿಸಿದ್ದಾರೆ.

ಗರಂ ಅದ ಪರಿಸರ: ಸುಲೋಚನಾ ಶೆಟ್ಟಿ ನರಳುವಿಕೆಗೆ ಆಸ್ಪತ್ರೆಯವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಆಕೆಯ ಕುಟುಂಬಿಕರು ಹಾಗೂ ಬಂಧುಗಳು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಪ್ರಮುಖರೊಂದಿಗೆ ಚಚೆ೯ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎರಡು ಕಡೆಯವರಿಗೆ ಮಾತಿನ ಚಕಮಕಿಯೂ ನಡೆಯಿತು ಎನ್ನಲಾಗಿದ್ದು ಮನುಷ್ಯರಾದವರು ತಪ್ಪು ಮಾಡುವುದು ಸಹಜ ಎನ್ನುವ ನಿರ್ಲಕ್ಷ್ಯದ ಮಾತುಗಳು ಶಸ್ತರ ಚಿಕಿತ್ಸೆಮಾಡಿದ ವೈದ್ಯರಾದ ಡಾ. ಭವಾನಿ ಅವರು ತನ್ನ ಪತಿ ಡಾ. ರವೀಂದ್ರ ರಾವ್ ಅವರ ಜೊತೆಗೂಡಿ ಹೇಳಿದ್ದು ಮಹಿಳೆಯ ಕುಟುಂಬಿಕರು ಕೆರಳಲು ಕಾರಣ ವಾಗಿತ್ತೆನ್ನಲಾಗಿದೆ.ಬಂದಿದೆ ಎನ್ನಲಾಗಿದೆ. ಮುಂದೆ ಈ ರೀತಿ ಘಟನೆಗಳು ಯಾರಿಗೂ ನಡೆಯದಂತೆ ತಡೆಯಲು ಹಾಗೂ ಸೂಕ್ತ ಕಾನೂನು ಕ್ರಮಕ್ಕಾಗಿ ಕಾನೂನು ಮೊರೆ ಹೋಗುವುದಾಗಿ ಮಹಿಳೆಯ ಸಂಬಂಧಿಕರು ಪತ್ರಿಕೆಗೆ ತಿಳಿಸಿದ್ದಾರೆ.

ಸ್ಕ್ಯಾನಿಂಗ್.. ಶಾಮೀಲು..!: ಈ ಕಾಂಡದಲ್ಲಿ ಆಸ್ಪತ್ರಯವರು ಸ್ಕ್ಯಾನಿಂಗ್ ಮಾಡಿಸಿ ಕೊಂಡು ಬರುವಂತೆ ಸೂಚಿಸಿದ ಕುಂದಾಪುರದ ಸ್ಕ್ಯಾನಿಂಗ್ ಸೆಂಟರ್ ನವರೂ ಭಾಗಿಯಾಗಿದ್ದಾರೆ. ತಪಾಸಣೆಯ ನಂತರ ನಮ್ಮಲ್ಲಿ ಏನೂ ಇಲ್ಲ ರಕ್ತ ಹೆಪ್ಪು ಗಟ್ಟಿದೆ ಎಂದು ಹೇಳಿರುವ ಸೆಂಟರ್ ನವರು ಅಸಲಿ ವಿಚಾರವನ್ನು ಆಸ್ಪತ್ರೆಯವರಿಗೆ ತಿಳಿಸಿ ತಮ್ಮ ಋಣ ಸಂದಾಯ ಮಾಡಿದ್ದಾರೆ. ಅದರ ನಂತರವೇ ಆಸ್ಪತ್ರೆಯಿಂದ ಸಣ್ಣ ಶಸ್ತ್ರ ಚಿಕಿತ್ಸೆಯಿದೆ ಬನ್ನಿ ಎಂದು ಪದೇ ಪದೇ ಕಾಲ್ ಬಂದಿದೆ ಏಂದು ಸುಲೋಚನಾ ಸಹೋದರ ಸುಭಾಶ್ ಶೆಟ್ಟಿ ತಿಳಿಸಿದ್ದಾರೆ. ಅದ್ಯಾಗೂ ಸಿಜೇರಿಯನ್ ಜತೆಗೆ

ಕುಟುಂಬ ಯೋಜನೆ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆಂದು ಸುಳ್ಳು ಹೇಳಿರುವ ವೈದ್ಯರು ಸರಿ ಸುಮಾರು 40 ಸಾವಿರದಷ್ಟು ಬಿಲ್ಲಿನ ಮೊತ್ತವನ್ನು ನಮ್ಮಿಂದ ಪಡೆದಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here