Friday 19th, April 2024
canara news

ಒಂಭತ್ತನೇ ವಾರ್ಷಿಕೋತ್ಸವ ಸಂಭ್ರಮಿಸಿದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ

Published On : 26 Mar 2016   |  Reported By : Rons Bantwal


ತ್ರಿವಳಿ ಉತ್ಸವಗಳೊಂದಿಗೆ ರಂಗೇರಿದ ಸಾಂಸ್ಕೃತಿಕ ಕಲಾಮಹೋತ್ಸವ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.25: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಸ್ಥೆಯು ಸಾಂಸ್ಕೃತಿಕ ಕಲಾ ಮಹೋತ್ಸವವನ್ನು ಇಂದಿಲ್ಲಿ ಶುಕ್ರವಾರ ಅಪರಾಹ್ನ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಡಾ| ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ನೆರವೇರಿಸಿತು. ಮುಖ್ಯ ಅತಿಥಿüಯಾಗಿ ಉಪಸ್ಥಿತ ನಾಡಿನ ಹೆಸರಾಂತ ವೈದ್ಯಾಧಿಕಾರಿ ಡಾ| ರತ್ನಾಕರ್ ಶೆಟ್ಟಿ ದೀಪ ಬೆಳಗಿಸಿ ಸಭೆಗೆ ಚಾಲನೆಯನ್ನಿತ್ತರು.

ಪರಿಷತ್ತುನ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಸಲಾದ ಕಲಾಮಹೋತ್ಸವದಲ್ಲಿ ಗೌರವ ಅತಿಥಿüಗಳಾಗಿ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆÉಟ್ಟಿ, ಸಮಾಜ ಸೇವಕರಾದ ಶೇಖರ್ ಆರ್.ಶೆಟ್ಟಿ, ಆನಂದ ಶೆಟ್ಟಿ ಎಕ್ಕಾರು, ಶಕುಂತಳಾ ಕೆ.ಕೋಟ್ಯಾನ್, ಅನಿತಾ ಸಂತೋಷ್ ಶೆಟ್ಟಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ, ಪ್ರದೀಪ್ ಚಂದನ್, ಸುರೇಶ್ ಶೆಟ್ಟಿ ಗಂಧರ್ವ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವನ್ನಾಗಿಸಿ ಮಹಾನಗರದಲ್ಲಿನ ವಿವಿಧ ಸಂಸ್ಥೆಗಳ ಕಲಾವಿದರು ನೃತ್ಯ ಸಂಭ್ರಮವನ್ನು ಪ್ರಸ್ತುತ ಪಡಿಸಿದರು. ಪರಿಷತ್ತುನ ಸದಸ್ಯರು ಯಕ್ಷಗಾನ ತಾಳಮದ್ದಲೆ ಹಾಗೂ `ಗುರ್ಬಿ' ತುಳು ನಾಟಕ ಹಾಗೂ ಯಕ್ಷ ಕಲಾತರಂಗ ದಶವತಾರ ಯಕ್ಷಗಾನ ಮಂಡಳಿ ಮೀರಾಮುಂಬಯಿ ತಂಡವು `ಪಂಡರ್‍ಪುರ್ ಮಹಿಮಾ' ಮರಾಠಿ ಯಕ್ಷಗಾನ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಪರಿಷತ್ತುನ ಸ್ಥಾಪಕಾಧ್ಯಕ್ಷ ಎಸ್.ಟಿ ವಿಜಯಕುಮಾರ್ ತಿಂಗಳಾಯ, ಗೌ| ಕೋಶಾಧಿಕಾರಿ ಪಿ.ಬಿ ಚಂದ್ರಹಾಸ್, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಜೊತೆ ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಬಾಳಿಕೆ, ಸಂಚಾಲಕ ರಮೇಶ್ ಶಿವಪುರ, ಎಂ.ಟಿ ಪೂಜಾರಿ ಅಭಿಮಾನಿ ಬಳಗದ ಚಂದ್ರಶೇಖರ ವಿ.ಶೆಟ್ಟಿ, ಕುಕ್ಕೆಹಳ್ಳಿ ವಿಠಲ ಪ್ರಭು, ಗುಣಪಾಲ ಉಡುಪಿ, ಸಂಪತ್ ಶೆಟ್ಟಿ ಪಂಜದಗುತ್ತು, ಸಂಜೀವ ಶೆಟ್ಟಿ ಸೇರಿದಂತೆ ಪರಿಷತ್ತುನ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಅಮಿತಾ ಕಲಾ ಮಂದಿರ ಮೀರಾರೋಡ್ ಕಲಾವಿದರು ಸ್ವಾಗತನೃತ್ಯಗೈದರು. ಪರಿಷತ್ತುನ ಉಪಾಧ್ಯಕ್ಷ ಕಮಲಾಕ್ಷ ಸರಾಫ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಮಿತಾ ಕಲಾ ಸುಮಂಗಳ ಶೆಟ್ಟಿ ಮತ್ತು ಸುಶೀಲಾ ದೇವಾಡಿಗ ಪ್ರಾರ್ಥನೆಯನ್ನಾಡಿದರು. ಮೋಹನ್ ರೈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ದಯಾಸಾಗರ್ ಚೌಟ ಸಭಾ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ನಾವುಂದ ರಾಜು ಶ್ರೀಯಾನ್ ವಂದನಾರ್ಪಣೆಗೈದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here