Friday 29th, March 2024
canara news

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ

Published On : 27 Mar 2016   |  Reported By : Rons Bantwal


ಸಮುದಾಯದ ಉದ್ಧಾರವೇ ಸಂಘದ ಉದ್ದೇಶ : ಮಂಜುನಾಥ ಬಿಲ್ಲವ ಶಿರೂರು

ಮುಂಬೈ. ಮಾ. 27 : ಯುವ ಜನಾಂಗವನ್ನು ಒಗ್ಗೂಡಿಸಿ ಮುಖ್ಯವಾಹಿನಿಗೆ ತರುವ ಪ್ರಯತ್ನ ನಮ್ನಲ್ಲಿ ನಿರಂತರವಾಗಿದ್ದಲ್ಲಿ ಖಂಡಿತ ನಾವು ಯಶಸ್ಸು ಪಡೆಯಬಹುದು, ಇಂದು ಸಂಘ ಸಂಸ್ಥೆಗಳಲ್ಲಿ ಯುವ ಜನತೆ ಪಾಲ್ಗೊಳ್ಳುವಿಕೆ ಕ್ಷೀಣಿಸಿದರೆ ಪಾಲಕರು ತಮ್ಮ ಮಕ್ಕಳಿಗೆ ಸಮುದಾಯ ಸಂಘಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಿ ಯುವ ಜನತೆಯನ್ನು ಕರೆದು ಕೊಂಡು ಬಂದರೆ ಅವರಲ್ಲಿ ಆಸಕ್ತಿ ಬೆಳೆಯುತ್ತದೆ. ನಾವು ಮಕ್ಕಳಿಗೆ ಸಂಸ್ಕಾರ, ಸಂಸ್ಕøತಿ , ಸಮುದಾಯ ಸಂಘಟನೆಗಳ ಬಗ್ಗೆ ಅರಿವು ಮೂಡಿಸಿದರೆ ಮಾತ್ರ ಮುಂಬರುವ ದಿನಗಳಲ್ಲಿ ಯುವ ಜನತೆ ಸಾಕಷ್ಟು ಸಕ್ರೀಯರಾಗಬಹುದು. ನಮ್ಮ ಸಂಘದ ಮುಖ್ಯ ಉದ್ದೇಶವೇ ಸಮುದಾಯದ ಉದ್ಧಾರ, ಅದನ್ನು ಸದಸ್ಯರು ಅರ್ಥೈಸಿಕೊಂಡು ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕು. ಸಂಘದ ಮೂಲಕ ಪರಸ್ಪರ ಕಷ್ಟ ಸುಖಗಳ ವಿನಿಮಯದೊಂದಿಗೆ ಅಶಕ್ತರಿಗೆ ನೆರವಾಗುವ ಸಮಾಜೋದ್ಧಾರದ ಉದ್ದೇಶವೇ ನಮ್ಮದಾಗಿದೆ ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಇದರ ಅಧ್ಯಕ್ಷರಾದ ಮಂಜುನಾಥ ಬಿಲ್ಲವ ಶಿರೂರು ನುಡಿದರು.

ಅವರು ಮಾರ್ಚ್ 20 ರಂದು ಥಾಣೆ ಪಶ್ಚಿಮದಲ್ಲಿರುವ ರೋಟರಿ ಕ್ಲಬ್ ಸಭಾಗೃಹದಲ್ಲಿ ನೆಡೆದ ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಇದರ ಉಪಸಮಿತಿಗಳಲ್ಲಿ ಒಂದಾದ ಯುವ ಅಭ್ಯುದಯ ಸಮಿತಿಯು ಆಯೋಜಿಸಿದ ಸದಸ್ಯರೆಡೆಗೆ ನಮ್ಮ ನಡಿಗೆ, ಯುವ ಸ್ನೇಹ ಸಮ್ಮಿಲನ ಮತ್ತು ಮನೋರಂಜನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಯುವ ಅಭ್ಯುದಯ ಸಮಿತಿಯವರು ಸಾಕಷ್ಟು ಪರಿಶ್ರಮದಿಂದ ಎಲ್ಲ ಸದಸ್ಯರ ಮನೆ ಮನೆಗೆ ತೆರಳಿ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು ಮುಂಬರುವ ಯುವ ಪೀಳಿಗೆಗೆ ಮಾದರಿಯಾಗಬೇಕು. ಅವರು ಪಟ್ಟ ಪ್ರಯತ್ನಕ್ಕೆ ಪ್ರತಿಫಲ ಸಿಗಬೇಕು ಎಂದರೆ ಮುಂಬರುವ ಕಾರ್ಯಕ್ರಮಗಳಲ್ಲಿ ಸದಸ್ಯರೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಲ್ಲದೆ ತಮ್ಮ ಮನೆಯಲ್ಲಿರುವ ಯುವಜನರನ್ನು ಕರೆದುಕೊಂಡು ಬರಬೇಕು. ಹೀಗೆ ಸದಸ್ಯರು ಸಕ್ರೀಯರಾದಲ್ಲಿ ಮಾತ್ರ ನಾವು ಅಭಿವೃದ್ಧಿಯ ಪಥದಲ್ಲಿ ನಿರಂತರವಾಗಿ ಮುನ್ನೆಡೆಯಬಹುದು ಎಂದರು.

ಮುಖ್ಯ ಅತಿಥಿಯಾದ ಪುಣೆ ನಗರದ ಭೃಷ್ಟಾಚಾರ ವಿರೋಧಿ, ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ ಪೂಜಾರಿ ಮಾತನಾಡುತ್ತಾ ಮಹಿಳೆಯರು ತಮ್ಮ ಅಮೂಲ್ಯವಾದ ಸಮಯವನ್ನು ಸಂಘಟನೆಗೆ ನೀಡುತ್ತಿರುವುದು ಸಂತಸದ ಸಂಗತಿ ಎಕೆಂದರೆ ತನ್ನ ಪರಿವಾರದ ಎಲ್ಲಾ ಕೆಲಸ ಗಳನ್ನು ನಿಭಾಯಿಸಿಕೊಂಡು ಉಳಿದ ಸಮಯದಲ್ಲಿ ಸಮಾಜ ಸೇವೆಯಲ್ಲಿ ನಿರತರಾಗಿರುವುದು ನಿಜವಾಗಿಯು ಹೆಮ್ಮೆ ಪಡುವ ವಿಚಾರ ಎಂದರು.

ಗೌರವ ಅತಿಥಿ ನ್ಯಾಯವಾದಿ ಶಕುಂತಲಾ ಎ. ಪೂಜಾರಿ ಮಾತನಾಡುತ್ತಾ ಯುವ ಅಭ್ಯುದಯದ ಈ ಕಾರ್ಯಕ್ರಮ ನೋಡಿ ತುಂಬಾ ಸಂತೋಷವಾಯಿತು ಆರಂಭದಿಂದಲೂ ಯುವ ಜನತೆಯನ್ನು ಮುಖ್ಯವಾಹಿನಿಗೆ ತರುವ ನಮ್ಮ ಪ್ರಯತ್ನ ಇಂದು ಫಲಪ್ರದವಾದಂತಿದೆ. ಅಭಿವೃದ್ಧಿಯ ನೆಡೆಯಲ್ಲಿ ಬರುವ ಆಂತರಿಕ ಸಮಸ್ಯೆಗಳಿಗೆ ಪ್ರಾಧನ್ಯ ನೀಡದೆ ಎಲ್ಲರು ಒಮ್ಮತದಿಂದ ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸಬೇಕು ಎಂದರು.

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಮಾಜಿ ಅಧ್ಯಕ್ಷರುಗಳಾದ ನ್ಯಾಯವಾದಿ ಆನಂದ ಎಂ. ಪೂಜಾರಿ ಮತ್ತು ಎಸ್. ಟಿ. ಪೂಜಾರಿ ಹಾಗೂ ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಸುಶೀಲ ಶೀನ ಪೂಜಾರಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಯುವ ಅಭ್ಯುದಯ ಸಮಿತಿಯು ಹಮ್ಮಿಕೊಂಡ ಕಾರ್ಯಕ್ರಮದ ಕುರಿತು ಪ್ರಶಂಶಿಸುತ್ತಾ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಶುಭಕೋರಿದರು.

ಇದೇ ಸಂದರ್ಭದಲ್ಲಿ ಸದಸ್ಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಯುವ ಅಭ್ಯುದಯ ಸಮಿತಿಯೊಂದಿಗೆ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಸಂಚರಿಸಿ ಮಾಹಿತಿ ಕ್ರೋಢೀಕರಿಸಿದ ಅಶೋಕ ಪೂಜಾರಿ, ಜಯಶ್ರೀ ಎ. ಕೋಡಿ ಮತ್ತು ಜಲಜಾಕ್ಷಿ ಕೆ. ಪೂಜಾರಿಯವರನ್ನು ಗೌರವಿಸಲಾಯಿತು. ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡು ಸದಸ್ಯರನ್ನು ಸಂಪರ್ಕಿಸಲು ಪಟ್ಟ ಪ್ರಯಾಸವನ್ನು ವಿವರಿಸಿದ ಇವರು ಗೌರವಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಯುವ ಅಭ್ಯುದಯದ ಸದಸ್ಯೆ ಸೀಮಾ ಲೋಕೇಶ್ ತಮ್ಮ ಅನುಭವ ಹಂಚಿಕೊಳ್ಳುತ್ತಾ ಯುವ ಜನರು ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಮಂಜುನಾಥ ಬಿಲ್ಲವ ಶಿರೂರು ವಹಿಸಿದರೆ ಮುಖ್ಯ ಅತಿಥಿಯಾಗಿ ಸಂತೋಷ ಪೂಜಾರಿ ಆಗಮಿಸಿದ್ದರು. ಮಾಜಿ ಅಧ್ಯಕ್ಷರುಗಳಾದ ಕೆ. ಎನ್. ಹೊಕ್ಕೋಳಿ,ಆನಂದ ಎಮ್. ಪೂಜಾರಿ ಹಾಗೂ ಎಸ್. ಟಿ. ಪೂಜಾರಿ, ನ್ಯಾಯವಾದಿ ಶಕುಂತಲಾ ಪೂಜಾರಿ,ಗೌರವ ಪ್ರಧಾನ ಕಾರ್ಯದರ್ಶಿ ಸೂರ್ಯ ಎಸ್. ಪೂಜಾರಿ, ಗೌರವ ಕೋಶಾಧಿಕಾರಿ ಅಶೋಕ ಎನ್.ಪೂಜಾರಿ, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಸುಶೀಲ ಶೀನ ಪೂಜಾರಿ,ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಎಸ್.ಕೆ.ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ ಪೂಜಾರಿ ಕೊಡೇರಿ,ಕಾರ್ಯದರ್ಶಿ ರಾಜಶ್ರೀ ಪ್ರವೀಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅತಿಥಿ ಗಣ್ಯರ ಹಸ್ತದಿಂದ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯಶೋಧ ಸತೀಶ ಪೂಜಾರಿ, ಸೀಮಾ ಲೋಕೇಶ್ ಪೂಜಾರಿ, ಸೀಮಾ ಅನಿಲ್ ಪೂಜಾರಿ ಪ್ರಾರ್ಥಿಸಿದರು. ಪ್ರಭಾಕರ ಪೂಜಾರಿ ಮತ್ತು ಸಂತೋಷ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು.

ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ ಪೂಜಾರಿ ಕೊಡೇರಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಕಾರ್ಯದರ್ಶಿ ರಾಜಶ್ರೀ ಪ್ರವೀಣ್ ಸದಸ್ಯರೆಡೆಗೆ ನಮ್ಮನಡಿಗೆಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೂರ್ಯ ಎಸ್. ಪೂಜಾರಿ ಕಾರ್ಯಕ್ರಮದ ನಿರೂಪಣೆಗೈದರೆ ಯುವ ಅಭ್ಯುದಯ ಸಮಿತಿಯ ಜತೆ ಕಾರ್ಯದರ್ಶಿ ಉದಯ ಕೆ. ಪೂಜಾರಿ ವಂದನಾರ್ಪಣೆ ಸಲ್ಲಿಸಿದರು.

ಯುವ ಅಭ್ಯುದಯ ಸಮಿತಿಯ ಉಪ ಕಾರ್ಯಾಧ್ಯಕ್ಷರುಗಳಾದ ಭರತ್ ಬಿ. ಬಿಲ್ಲವ, ಸುನೀಲ್ ಜಿ. ಪೂಜಾರಿ, ಸದಸ್ಯರಾದ ಸಾಗರ್ ಪೂಜಾರಿ, ಪ್ರವೀರ್ ಬೀಜಾಡಿ, ಉಮೇಶ ಪೂಜಾರಿ, ರವಿ ಪೂಜಾರಿ ಮತ್ತು ದೀಪಾ ಪೂಜಾರಿ ಸಹಕರಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here