Friday 19th, April 2024
canara news

ತುಳುಪರ್ಬದಲ್ಲಿ ಹೆಚ್.ಬಿ.ಎಲ್ ರಾವ್ ಸಂಪಾದಕತ್ವದ `ಅಣಿಅರದಲ ಸಿರಿ ಸಿಂಗಾರ ಗ್ರಂಥ' ಅನಾವರಣ

Published On : 28 Mar 2016   |  Reported By : Rons Bantwal


ಮೂಲ ಸ್ವರೂಪ ಉಳಿಸುವ ಕಲಾವಿದರು ಕ್ಷಿಣಿಸುತ್ತಿದ್ದಾರೆ: ಡಾ| ವೈ.ಎನ್ ಶೆಟ್ಟಿ

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.27: ದಾಖಲಾತಿಯ ದೃಷ್ಟಿಯಿಂದ ದಾಖಲೀಕರಣ ಗ್ರಂಥವಾಗಿ ಅಣಿಅರದಲ ಸಿರಿಸಿಂಗಾರವು ಅಧ್ಯಯನ ಗ್ರಂಥವಾಗಿ ರೂಪುಗೊಂಡಿದೆ. ದೈವಾರಾಧನಾ ಕಲೆಯನ್ನು ಒಳÀಗೊಂಡ ಈ ಗ್ರಂಥದ ಅಧ್ಯಯನ ಕಮ್ಮಟದ ಸಂದರ್ಭ ನಡೆದ ಕೆಲ ಘಟನೆಗಳಿಂದ ಮೂಲ ಸ್ವರೂಪವನ್ನು ಉಳಿಸುವ ಕಲಾವಿದರು ಕಡಿಮೆ ಆಗುತ್ತಿದ್ದಾರೆ ಎಂದು ಜಾನಪದ ವಿದ್ವಾಂಸ ಡಾ| ವೈ.ಎನ್ ಶೆಟ್ಟಿ ಕಳವಳ ವ್ಯಕ್ತ ಪಡಿಸಿದರು.

ಸಾಹಿತ್ಯ ಬಳಗ ಮುಂಬಯಿ ಸಂಸ್ಥೆಯು ಆಯೋಜಿಸಿರುವ 22ನೇ ತುಳುಪರ್ಬದಲ್ಲಿ ಇಂದು ಆದಿತ್ಯವಾರ ಅಪರಾಹ್ನ ಮಾಟುಂಗ ಪಶ್ಚಿಮದ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿನ ಸಮ್ಮೇಳನಾಧ್ಯಕ್ಷ, ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಡಾ| ವಸಂತಕುಮಾರ್ ಪೆರ್ಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತ್ಯ ಬಳಗದ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಅವರ ಪ್ರಧಾನ ಸಂಪಾದಕತ್ವದ `ಅಣಿಅರದಲ ಸಿರಿ ಸಿಂಗಾರ ಗ್ರಂಥ' ಅನಾವರಣಗೊಳಿಸಿ ಡಾ| ವೈ.ಎನ್ ಶೆಟ್ಟಿ ಮಾತನಾಡಿದರು.

ಗ್ರಂಥದ ಸಂಪಾದಕ, ಜನಪದ ವಿದ್ವಾಂಸ ಕೆ.ಎಲ್ ಕುಂಡಂತಾಯ ಗ್ರಂಥ ಪರಿಚಯದಲ್ಲಿ ಮಾತನಾಡಿ, ಭೂತಾರಾಧನೆಯನ್ನು ಆರಾಧನೆ ಎಂಬ ಶ್ರದ್ಧೆ, ರಂಗ ಕಲೆಯಾಗಿ ಗೌರವದಿಂದ ಸ್ವೀಕರಿಸುತ್ತಾ ಭೂತ ಅಥವಾ ದೈವ ಲೋಕದ ಅಣಿ ಮತ್ತು ಅರದಲ ವಿಭಾಗದ ಚಿಂತನೆಗೆ ರಂಗಕಲೆಯ ಅಧ್ಯಯನವಾಗಿ 2 ಸಂಸ್ಥೆಗಳು, 50 ಕಲಾವಿದರು, 3 ವಿದ್ವಾಂಸರು, 3 ಸಂಪನ್ಮೂಲ ವ್ಯಕ್ತಿಗಳು ನಡೆಸಿದ್ದ ದಾಖಲೀಕರಣ, ಅಧ್ಯಯನದ 4 ದಿನಗಳ ಕಮ್ಮಟದ ಹುಟ್ಟುವಳಿಯಾಗಿ ಈ ಗ್ರಂಥ ಮೂಡಿಬಂದಿದೆ ಎಂದರು.


ಒಂದು ಕಾಲದಲ್ಲಿ ಶಾಲೆಯಲ್ಲಿ ತುಳು ಭಾಷೆ ಮಾತನಾಡಿದರೆ ದಂಡ ವಿಧಿಸಲ್ಪಡುತ್ತಿರುವ ತುಳು ಭಾಷೆ ಪ್ರಸ್ತುತ ಕಂಡಕಂಡವರ ಬಾಯಿಯಲ್ಲಿ ಕೇಳುವಂತಹದ್ದು ತುಂಬಾ ಅಭಿಮಾನವೆಣಿಸುತ್ತಿದೆ. ಸ್ಥಿತ್ಯಂತರದ ಕಾಲಘಟ್ಟದಲ್ಲಿ ಭಾಷೆಯು ಭದ್ರ ಬುನಾದಿಯೂಡಲು ಕನಿಷ್ಠ 2-3 ತಲೆಮಾರುಗಳು ಬೇಕಾಗುತ್ತವೆ. ಸದ್ಯ ಸಾಹಿತ್ಯದ ನಾನಾ ವಿಧಗಳಿಂದ ತುಳು ಭಾಷೆ ಬೆಳೆಯುತ್ತಿದೆ. ಆಕಾಶವಾಣಿ, ತುಳುಕೂಟ, ತುಳು ಅಕಾಡೆಮಿ ಸ್ಥಾಪನೆ, ನಾಟಕ, ಕವಿತೆ, ಸಾಹಿತ್ಯಗಳ ಹೆಚ್ಚಳಗಳ ಕೃಷಿಯಿಯಿಂದ ಮಾತೃಮೂಲ್ಯ ತುಳು ಭಾಷೆಗೆ ಹೆಚ್ಚು ಸ್ಥಾನಮಾನ ದೊರೆತಿದೆ. ಆದುದರಿಂದಲೇ ಭಾಷೆಯಾಗಿ ತುಳು ಮೆರೆಯುತ್ತಿದೆ. ಭಾಷೆ, ಸಂಸ್ಕøತಿ, ಸಂಸ್ಕಾರಗಳ ಬೆಳವಣಿಗೆಗಾಗಿ ಲಿಪಿ ಅನಿವಾರ್ಯವಲ್ಲ. ಮುಂಬಯಿಯಲ್ಲಿ ತುಳುವಿನ ಬೆಳವಣಿಗೆಗಾಗಿ ತುಳುನಾಡಿನ ಪ್ರತಿನಿಧಿ ಸಂಸ್ಥೆಗಳು ನಡೆಸುವ ಪರಿಶ್ರಮ ಸಾರ್ಥಕತೆಯೊಂದಿಗೆ ಕಲಶಪ್ರಾಯವಾಗಿ ಭವಿಷ್ಯ ಕಾಣಲಿ ಎಂದು ಡಾ| ವಸಂತಕುಮಾರ್ ಪೆರ್ಲ ಅಧ್ಯಕ್ಷೀಯ ನುಡಿಗಳನ್ನಾಡಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಬಾಲಚಂದ್ರ ರಾವ್ ನಂದಳಿಕೆ, ಧರ್ಮಪಾಲ ಯು. ದೇವಾಡಿಗ ವೇದಿಕೆಯಲ್ಲಿದ್ದು, ಪೆÇೀಲಿಸ್ ಅಧಿಕಾರಿ ಸಾಧಕರಾದ ಪ್ರಕಾಶ್ ಬಿ.ಭಂಡಾರಿ, ಪುರೋಹಿತ, ಗೋಕುಲದ ಪ್ರಧಾನ ಅರ್ಚಕ ಎ.ಹರಿ ಭಟ್ ಮತ್ತು ಮಾಧವಿ ಭಟ್ (ದಂಪತಿ), ವಿರಾರ್ ಶಂಕರ್ ಶೆಟ್ಟಿ, ಜಾನಪದ ವಿದ್ವಾಂಸ ಕೆ.ಎಲ್ ಕುಂಡಂತಾಯ, ಪತ್ರಕರ್ತ ವಿಜಯ ಆಚಾರ್ಯ ಉಚ್ಚಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಸಾಹಿತ್ಯ ಬಳಗದ ಅಧ್ಯಕ್ಷ ಎಚ್.ಬಿ.ಎಲ್. ರಾವ್ ಆಶಯ ನುಡಿಗಳನ್ನಾಡಿದರು. ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಡಾ| ಕರುಣಾಕರ ಶೆಟ್ಟಿ ವಂದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here