Saturday 20th, April 2024
canara news

ಕಿನ್ನಿಗೋಳಿ: ಪಾಚಿ ಹಿಡಿದಿರುವ ನಾಮಫಲಕ

Published On : 17 Sep 2014   |  Reported By : Roshan Kirem


ಮುಲ್ಕಿಯಿಂದ ಮೂಡಬಿದ್ರಿಗೆ ಹೋಗುವ ರಾಜ್ಯ ಹೆದ್ದಾರಿಯ ಕಿನ್ನಿಗೋಳಿ ಸಮೀಪದ ಐಕಳ ಎಂಬಲ್ಲಿ ರಸ್ತೆ ಬದಿಯ ನಾಮಫಲಕವೊಂದು ಪಾಚಿ ಹಿಡಿದು ಅಯ್ಯೋ ಎನ್ನುವ ಸ್ಥಿತಿಯಲ್ಲಿದೆ. ಮುಲ್ಕಿ ಪೋಲಿಸ್ ಠಾಣೆಯ ಗಡಿ ಪ್ರದೇಶವಾದ ಐಕಳದ ರಾಜ್ಯ ಹೆದ್ದಾರಿಯಲ್ಲಿರುವ ಈ ನಾಮಫಲಕದಲ್ಲಿ ಮುಲ್ಕಿ ಠಾಣೆಯ ಸರಹದ್ದು ಮುಕ್ತಾಯ ಎಂದು ಇದ್ದು, ಇದರ ಇನ್ನೊಂದು ಬದಿಯಲ್ಲಿ ಮುಲ್ಕಿ ಠಾಣಾ ಸರಹದ್ದು ಪ್ರಾರಂಭ ಎಂದು ಬರೆಯಲಾಗಿದೆ. ರಾ.ಹೆ. 66 ಹಾಗೂ ರಾ.ಹೆ.13- ಈ ಎರಡು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಈ ರಾಜ್ಯ ಹೆದ್ದಾರಿಯಲ್ಲಿ ಪ್ರತಿನಿತ್ಯ ನೂರಾರು ಪ್ರವಾಸಿಗರು ಪ್ರಯಾಣಿಸುತ್ತಾರೆ. ಒಂದು ವೇಳೆ ಅಪಘಾತ ಸಂಭವಿಸಿದರೆ ಘಟನೆ ನಡೆದ ಪ್ರದೇಶ ಯಾವ ಠಾಣೆಯ ವ್ಯಾಪ್ತಿಗೆ ಒಳಪಟ್ಟಿದೆಯೆಂದು ಪ್ರಯಾಣಿಕರಿಗೆ ತಿಳಿಯಲಾಗದು. ಕಂಡೂ ಕಾಣದಂತಿರುವ ಈ ನಾಮಫಲಕ ಇದ್ದರೆಷ್ಟು ಬಿದ್ದರೆಷ್ಟು ಎಂದು ಸ್ಥಳಿಯರು ಆಕ್ರೋಷ ವ್ಯಕ್ತಪಡಿಸುತ್ತಾರೆ. ರಸ್ತೆಯಲ್ಲಿ ಹಾದು ಹೋಗುವ ಪ್ರಯಾಣಿಕರಿಗೆ ಉಪಯೋಗವಾಗುಂವಂತೆ ಈ ನಾಮಫಲಕವನ್ನು ದುರಸ್ತಿ ಪಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇದರ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸಬೇಕಾಗಿದೆ.

ರೋಶನ್ ಕಿರೆಂ

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here