Tuesday 23rd, April 2024
canara news

ದ.ಕ.: ಮಹಿಳೆಯರಿಗೆ ಅಧಿಕಾರ ಭಾಗ್ಯ

Published On : 08 Apr 2016   |  Reported By : Canaranews Network


ಮಂಗಳೂರು: ದ.ಕ.ಜಿ.ಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಕೊನೆಗೂ ಪ್ರಕಟಗೊಂಡಿದೆ. ದ.ಕ. ಜಿ.ಪಂ.ನಲ್ಲಿ ಈ ಬಾರಿ ಅಧ್ಯಕ್ಷ ಹುದ್ದೆ ಮೀಸಲಾತಿ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಜಿ.ಪಂ.ನ ಒಟ್ಟು 36 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 21 ಹಾಗೂ ಕಾಂಗ್ರೆಸ್‌ 15 ಸ್ಥಾನ ಪಡೆದಿತ್ತು. ಮೀಸಲಾತಿಯನ್ವಯ ಬಿಜೆಪಿಯ ಶಿರ್ತಾಡಿ ಕ್ಷೇತ್ರದ ಸುಜಾತಾ ಕೆ.ಪಿ. ಹಾಗೂ ಪಾಣಾಜೆ ಕ್ಷೇತ್ರದ ಮೀನಾಕ್ಷಿ ಶಾಂತಿಗೋಡು, ಕಾಂಗ್ರೆಸ್‌ನ ಅಳದಂಗಡಿ ಕ್ಷೇತ್ರದ ಶೇಖರ ಕುಕ್ಕೇಡಿ ಅವರಿಗೆ ಅಧ್ಯಕ್ಷರಾಗುವ ಅವಕಾಶಗಳಿವೆ.

ಆದರೆ ಜಿ.ಪಂ.ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿರುವುದರಿಂದ ಸುಜಾತಾ ಅಥವಾ ಮೀನಾಕ್ಷಿ ಶಾಂತಿಗೋಡು ಅವರ ಪೈಕಿ ಒಬ್ಬರು ಅಧ್ಯಕ್ಷರಾಗುವರು. ಈ ಇಬ್ಬರೂ ಮಹಿಳೆಯರು ಕೂಡ ಪ್ರಥಮ ಬಾರಿಗೆ ಜಿ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here