Friday 19th, April 2024
canara news

ಎಸಿಬಿಯಿಂದ ಲೋಕಾಯುಕ್ತಕ್ಕೆ ಸಮಸ್ಯೆಯಿಲ್ಲ; ಸಚಿವ ರೈ

Published On : 08 Apr 2016   |  Reported By : Canaranews Network

ಮಂಗಳೂರು: ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಲಾಗಿದೆ. ಈಗಾಗಲೇ ಗುಜರಾತ್‌, ಒಡಿಶಾ, ಹರಿಯಾಣ, ಕೇರಳ, ಹೊಸದಿಲ್ಲಿ, ತೆಲಂಗಾಣ ಮುಂತಾದ 12 ರಾಜ್ಯಗಳಲ್ಲಿ ಎಸಿಬಿ ಕಾರ್ಯನಿರ್ವಹಿಸುತ್ತಿದೆ. ಇಂದಿಗೂ ಹಲವರು ಎಸಿಬಿಯಿಂದ ಲೋಕಾಯುಕ್ತದ ಬಲ ಕುಂಠಿತವಾಗುತ್ತದೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಆದರೆ, ಲೋಕಾಯುಕ್ತವನ್ನು ಮುಟ್ಟದೆಯೇ ಎಸಿಬಿ ರೂಪಿಸಲಾಗಿದೆ. ಪ್ರತೀ ಇಲಾಖೆ ವಿಭಾಗದಲ್ಲಿ ವಿಜಿಲೆನ್ಸ್‌ ರಚಿಸುವ ಕುರಿತು ಕೋರ್ಟ್‌ ಆದೇಶವನ್ನೂ ಪಾಲಿಸಲಾಗುತ್ತಿದೆ. ಲೋಕಾಯುಕ್ತದಲ್ಲಿ ಸುಮಾರು 18,000ಕ್ಕಿಂತಲೂ ಮಿಕ್ಕಿ ಪ್ರಕರಣಗಳು ಬಾಕಿಯಾಗಿವೆ ಎಂದು ತಿಳಿದುಬಂದಿದೆ. ಭ್ರಷ್ಟರ ವಿರುದ್ಧ ತನಿಖೆ ನಡೆಸುವಲ್ಲಿ ಹೆಚ್ಚಿನ ವೇಗ ಪಡೆಯಲು ಸಹಕರಿಸುವಲ್ಲಿ ಎಸಿಬಿ ಲೋಕಾಯುಕ್ತಕ್ಕೆ ಸಮಸ್ಯೆಯಾಗುವುದಿಲ್ಲ ಎಂದು ಸಚಿವ ರೈ ಹೇಳಿದರು.

More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here