Friday 19th, April 2024
canara news

ಆಕಸ್ಮಿಕವಾಗಿ ನಿಧನರಾದ ಪತ್ರಕರ್ತ ಹೈಮದ್ ಹುಸೇನ್,ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಸಂತಾಪ

Published On : 10 Apr 2016   |  Reported By : Rons Bantwal


ಮುಂಬಯಿ, ಎ.10: ಕಳೆದ ಶುಕ್ರವಾರ ಮಂಗಳೂರು ಪತ್ರಕರ್ತರ ವತಿಯಿಂದ ಆಯೋಜಿಸಿದ್ದ ಚಾರ್ಮಾಡಿ ಅಧ್ಯಯನ ಪ್ರವಾಸದ ವೇಳೆ ಹೃದಯಾಘಾತದಿಂದ ನಿಧನರಾದ ಯುವ ಪತ್ರಕರ್ತ ಹೈಮದ್ ಹುಸೇನ್ ಅವರಿಗೆ ದ.ಕ.ಜಿಲ್ಲಾ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್‍ಕ್ಲಬ್ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು. ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದು ಸದಾ ಲವಲವಿಕೆಯಿಂದ ಇರುತ್ತಿದ್ದ ಹೈಮದ್ ಅವರ ಕುರಿತು ಮಾತನಾಡಿದ ಪತ್ರಕರ್ತರು ನುಡಿ ನಮನದೊಂದಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ, ಮಂಗಳೂರು ಪ್ರೆಸ್‍ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್.ಟಿ.ಬಾಳೇಪುಣಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶ್ಹಾ, ನಗರದ ಹಿರಿಯ ಪತ್ರಕರ್ತರುಗಳಾದ ಕೆ.ಆನಂದ ಶೆಟ್ಟಿ, ಸುರೇಶ್ ಬೆಳಗಜೆ, ಪಿ.ಬಿ ಹರೀಶ್ ರೈ, ಬಿ.ಎನ್ ಪುಷ್ಪರಾಜ್, ಬಿ.ರವೀಂದ್ರ ಶೆಟ್ಟಿ, ಮುಹಮ್ಮದ್ ಆರೀಫ್, ವೇಣುವಿನೋದ್ ಕೆ.ಎಸ್, ಆರ್.ಸಿ ಭಟ್, ಬಾಲಕೃಷ್ಣ ಎಂ.ಜಿ., ಹರ್ಷ ರಾವ್, ರವಿಪ್ರಸಾದ್ ಕಮಿಲ, ಸತ್ಯಾ ಕೆ, ಎಸ್.ವಿ ಸುಬ್ರಹ್ಮಣ್ಯ, ವಿಜಯ ಕೋಟ್ಯಾನ್ ಪಡು, ನರಸಿಂಹಮೂರ್ತಿ, ಪ್ರಕಾಶ್ ಪಾಂಡೇಶ್ವರ, ಕಲಾವಿದ ದಿನೇಶ್ ಹೊಳ್ಳ, ಆರೀಫ್ ಕಲಕಟ್ಟ ಮತ್ತಿತರರು ಅಕಾಲಿಕವಾಗಿ ಅಗಲಿದ ಪತ್ರಕರ್ತ ಹುಸೇನ್ ಅವರಿಗೆ ಶ್ರದ್ಧಾಂಜಲಿ ಕೋರಿದರು.

ಯುವ ಪತ್ರಕರ್ತರಾಗಿ ಮಂಗಳೂರುನಲ್ಲಿ ಸೇವಾನಿರತರಾಗಿದ್ದ ಹೈಮದ್ ಹುಸೇನ್ ಚಾರ್ಮಾಡಿ ಘಾಟ್‍ನಲ್ಲಿ ವಿಧಿಯ ಲೀಲೆಗೆ ಮನ್ನಿಸಿ ಆಕಸ್ಮಿಕವಾಗಿ ಕಣ್ಮರೆಯಾಗಿ ಅಕಾಲಿಕವಾಗಿ ಸ್ವರ್ಗ ಸಾಗರದಲ್ಲಿ ಲೀನವಾಗಿರುವುದು ತುಂಬಾ ಬೇಸರತಂದಿದೆ. ಅಗಲಿದ ಪತ್ರಕರ್ತ ಮಿತ್ರನಿಗೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಉಪಾಧ್ಯಕ್ಷ ದಯಾ ಸಾಗರ್ ಚೌಟ, ಗೌರವ ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ, ಗೌ| ಕೋಶಾಧಿಕಾರಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು, ಜತೆ ಕಾರ್ಯದರ್ಶಿ ಬಾಬು ಕೆ.ಬೆಳ್ಚಡ, ಜತೆ ಕೋಶಾಧಿಕಾರಿ ಅಶೋಕ್ ಎಸ್.ಸುವರ್ಣ, ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಡಾ| ಶಿವ ಎಂ.ಮೂಡಿಗೆರೆ, ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ ಮತ್ತು ಸರ್ವ ಸದಸ್ಯರು ಸಂತಾಪ ವ್ಯಕ್ತ ಪಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಮೂಲತಃ ರಾಯಚೂರು ನಿವಾಸಿಯಾಗಿರುವ ಹೈಮದ್ ಅವರು ಪ್ರಜಾವಾಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮತ್ತೆ ರಾಯಚೂರಿಗೆ ವರ್ಗಾವಣೆ ಗೊಂಡು ಎಪ್ರಿಲ್ 24ರಂದು ಹುಟ್ಟೂರಿಗೆ ತೆರಳುವವರು ಇದ್ದರು. ಮಂಗಳೂರು ಪತ್ರಕರ್ತರ ತಂಡ ಪಶ್ಚಿಮ ಘಟ್ಟಕ್ಕೆ ಅಧ್ಯಯನಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿದೆ.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here