Thursday 25th, April 2024
canara news

ಮೂಲ್ಕಿ ಬಳಿಯ ಕೆರೆಕಾಡಿನ ಕೊರಗರ ಕಾಲೋನಿಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್ ಆ೦ಜನೇಯ ಗ್ರಾಮ ವ್ಯಾಸ್ತವ್ಯಕ್ಕೆ ಸಜ್ಜು

Published On : 14 Apr 2016   |  Reported By : Roshan Kinnigoli


ಮೂಲ್ಕಿಯ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರಕಾಡು ಪ್ರದೇಶದ ಕೊರಗರ ಕಾಲೋನಿಯಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಚಿವರಾದ ಎಚ್. ಆಂಜನೇಯ ಅವರು ವಾಸ್ತವ್ಯ ಹೂಡಲಿದ್ದು ಅವರು ತಂಗಲಿರುವ ಮನೆಯು ದುರಸ್ಥಿಗೊಳ್ಳುತ್ತಿದೆ ಹಾಗೂ ಸುತ್ತಮುತ್ತ ಪ್ರದೇಶವು ಅಧಿಕಾರಿಗಳ ಸುಪದರ್ಿಯಲ್ಲಿ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದಾರೆ.

ಎ.15ರಂದು ಬೆಳಿಗ್ಗೆಯಿಂದ ಎ16ರ ಬೆಳಿಗ್ಗೆಯವರೆಗೆ ತಂಗಲಿರುವ ಸಚಿವ ಆಂಜನೇಯರವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಭಾಗವಹಿಸಲಿದ್ದು ಕೊರಗರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಸಹ ಪ್ರಕಟಿಸಲಿದ್ದಾರೆ. ಸಮಾಲೋಚನಾ ಸಭೆಯು ಸಹ ನಡೆಯಲಿದ್ದು ಜಿಲ್ಲೆಯ ವಿವಿಧೆಡೆಯಿಂದ ಸುಮಾರು ಸಾವಿರ ಸಂಖ್ಯೆಯಲ್ಲಿ ಕೊರಗ ಸಮಾಜದವರು ಆಗಮಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಹೇಮಲತಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪಡುಪಣಂಬೂರು ಗ್ರಾಮ ಪಂಚಾಯಿತಿಯ ಬೆಳ್ಳಾಯರು ಗ್ರಾಮ ಕೆರೆಕಾಡು ಪ್ರದೇಶದ ಸುಮಾರು 9 ಎಕರೆ ವಿಶಾಲ ಪ್ರದೇಶದಲ್ಲಿರುವ ಈ ಕೊರಗರ ಕಾಲೋನಿಯಲ್ಲಿ ದಾಖಲೆಗಳ ಪ್ರಕಾರ 14 ಮನೆಗಳಿದೆ. ಆದರೆ ಒಂದೆರಡು ಮನೆಗಳಿಗೆ ಸೂಕ್ತ ದಾಖಲೆಳಿಲ್ಲದೆ ಏಳೆಂಟು ವರ್ಷಗಳಾಗಿದ್ದು ಇವರಿಗೆಲ್ಲಾ ಮಂತ್ರಿಗಳು ಬಂದ ಮೇಲೆ ತಮ್ಮ ಸಮಸ್ಯೆ ಸರಿಯಾಗಬಹುದು ಎಂಬ ಆಶಯವಿದೆ ಎಂದು ಕೊರಗ ಸಮಾಜದವರ ಆಶಯವಾಗಿದೆ.

ಸಚಿವರು ಇಲ್ಲಿನ ನಿವಾಸಿ ಬೇಬಿ ಎಂಬುವರ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದು ಆ ಮನೆಯು ಈಗ ದುರಸ್ಥಿಗೊಳ್ಳುತ್ತಿದೆ, ಸುಣ್ಣ ಬಣ್ಣ ಹಾಗೂ ಮನೆಯ ಅಂಗಳಕ್ಕೆ ಸಿಮೆಂಟ್ ಶೀಟ್ನ ಹೊದಿಕೆಯನ್ನು ಹಾಕಲಾಗಿದ್ದು, ಸ್ವಾನಗೃಹವನ್ನು ಪ್ರತ್ಯೇಕವಾಗಿ ನಿಮರ್ಿಸಲಾಗುತ್ತಿದೆ. ಒಳಗಿನ ಕೋಣೆಗಳ ಸಹಿತ ಅಡುಗೆ ಕೋಣೆಯ ಗೋಡೆಗಳಿಗೆ ಗಾರೆ ಕೆಲಸ ಮಾಡಲಾಗಿದೆ. ಇದೀಗ ಕಾಲೋನಿಯ ಎಲ್ಲಾ ಮನೆಗಳಲ್ಲೂ ಸ೦ಭ್ರಮದ ವಾತವರಣ ಕ೦ಡು ಬರುತ್ತಿದೆ.

ಬುಟ್ಟಿ ಹೆಣೆಯುವ ಕಾಯಕವಾಗಿರುವ ಎರ್ಮಾಳಿನವರು ಮೂಲದ 48ರ ಹರೆಯದ ಬೇಬಿಯವರ ಪತಿ ವಾಮನರವರು ಕಳೆದ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು ನಾಲ್ಕು ಮಕ್ಕಳ ಸಂಸಾರದ ಬೇಬಿಯವರ ಮಗಳು ಎರ್ಮಾಳಿಗೆ ಮದುವೆ ಮಾಡಿಕೊಡಲಾಗಿದೆ, ಉಳಿದಂತೆ ಐತಪ್ಪ, ಅಶೋಕ್, ಶಶಿ ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಕಳೆದ 30 ವರ್ಷದಿಂದ ಗಂಡನ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

ಈಚಲು ಮರದ ರೆಂಬೆಗಳಿಂದ ಬುಟ್ಟಿಯನ್ನು ನೇಯುವ ಕೆಲಸವೇ ಇಲ್ಲಿನವರ ಪ್ರಮುಖ ಕಸುಬಾಗಿದ್ದು ಈಗೀಗ ಕೂಲಿ ಕೆಲಸಕ್ಕೆ ಹಾಗೂ ಸಣ್ಣ ಪುಟ್ಟ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಇಲ್ಲಿನ ನಿವಾಸಿಗಳಿಗೆ ಮೂಲಬೂತ ಸೌಕರ್ಯವನ್ನು ಪಡುಪಣಂಬೂರು ಗ್ರಾಮ ಪಂಚಾಯತ್ ತನ್ನ ವಿಶೇಷ ಅನುದಾನದಲ್ಲಿ ನೀಡುತ್ತಿದೆ. ಇಲ್ಲಿನ ನಿವಾಸಿ ಕೊಲ್ಲುರವರು ಕಳೆದ 13 ವರ್ಷದಿಂದ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರಲ್ಲದೆ ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿಯುವ ಸೇವೆ ನೀಡಿದ್ದರು.

ಸಚಿವರ ಭೇಟಿಯ ದಿನದಂದು ಬೆಳಿಗ್ಗೆ ಆರೋಗ್ಯ ಶಿಬಿರ, 12 ಲಕ್ಷ ರೂ. ಮೌಲ್ಯದ ಸಮುದಾಯ ಭವನಕ್ಕೆ ಶಿಲಾನ್ಯಾಸ, ಕೊರಗ ಸಮುದಾಯ ಸಂಘಟನೆಯೊಂದಿಗೆ ಮುಖಾಮುಖಿ, ಸಮಾಲೋಚನೆ, ವಿವಿಧ ಇಲಾಖೆಗಳಿಂದ ಮಾಹಿತಿ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ನಡೆಯಲಿದೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಲ್ಲಿನ ವಿಶೇಷ ಡೋಲು ವಾದನಕ್ಕೆ ಸಚಿವರು ಹೆಜ್ಜೆ ಹಾಕಲಿದ್ದಾರೆ.

ಇಲ್ಲಿನ ನಿವಾಸಿಗಳಾದ ಬಾಡು, ತೋಮ, ಮಾಯಿಲರವರು ಈಗಲೂ ಬಪ್ಪನಾಡು ಶ್ರೀ ದುಗರ್ಾಪರಮೇಶ್ವರೀ ದೇವಳದ ಜಾತ್ರಾ ಮತ್ತು ಇನ್ನಿತರ ಮಹೋತ್ಸವ ಹಾಗೂ ಪಡುಪಣಂಬೂರು ಅರಸು ಕಂಬಳ ಇನ್ನಿತರ ವಿವಿಧ ಕ್ಷೇತ್ರದಲ್ಲಿ ಪಾರಂಪರಿಕ ಡೋಲು ವಾದನವನ್ನು ನುಡಿಸುತ್ತಾರೆ. ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ದಾಸ್, ಅಭಿವೃಧ್ಧಿ ಅಧಿಕಾರಿ ಅನಿತಾ ಕ್ಯಾಥರಿನ್, ಗ್ರಾಮ ಕರಣಿಕ ಮೋಹನ್, ಸವರ್ೇಯರ್ ಮಧುಕರ್, ಸಮಾಜ ಕಲ್ಯಾಣ ಇಲಾಖೆಯ ಹೇಮಚಂದ್ರ, ಮೂಲ್ಕಿ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ಮಾಜಿ ಪಂಚಾಯಿತಿ ಅಧ್ಯಕ್ಷ ವಿನೋದ್ ಸಾಲ್ಯಾನ್, ಮೆಸ್ಕಾಂ ಸಿಬ್ಬಂದಿಗಳು ಇನ್ನಿತರ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಸಚಿವರ ಆಗಮನಕ್ಕೆ ಸರ್ವ ತಯಾರಿ ನಡೆಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here