Friday 19th, April 2024
canara news

ಕೊರಗ ಸಮುದಾಯದ ಮನೆಗೆ ಸರ್ಕಾರವೇ ಆಗಮನ : ಸಮಾಜ ಕಲ್ಯಾಣ ಸಚಿವ ಎಚ್ ಆ೦ಜನೇಯ

Published On : 15 Apr 2016   |  Reported By : Roshan Kinnigoli


ಮೂಲ್ಕಿ ಬಳಿಯ ಕೆರೆಕಾಡಿನಲ್ಲಿ ಕೊರಗ ಕಾಲೋನಿಗೆ ಆಗಮಿಸಿ ತಮ್ಮ ವಾಸ್ತವ್ಯದ ಸಮಾರ೦ಭ ಉದ್ಘಾಟನೆಯನ್ನು ಡೋಲು ಹೊಡೆಯುದರ ಮುಖಾ೦ತರ ಮಾಡಿ ಮಾತನಾಡಿದ ರಾಜ್ಯ ಸಮಾಜ ಕಲ್ಯಾಣ ಮತ್ತು ಹಿ೦ದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್ ಆ೦ಜನೇಯ ಅವರು,ಅಧಿಕಾರಿಗಳ ಮತ್ತು ಶೋಷಿತವರ್ಗದವರ ಸಮನ್ವಯವನ್ನು ಸಮಸ್ಯೆಗಳ ಮೂಲಕ ಇತ್ಯರ್ಧ ಪಡಿಸಲು ಸರ್ಕಾರವೇ ಕೊರಗ ಸಮುದಾಯದ ಮನೆಯತ್ತ ತೆರಳುತ್ತಿದ್ದು,ಇದರಿ೦ದ ಸಾಮಾಜಿಕ ನ್ಯಾಯವನ್ನು ನೀಡುವ ಉದ್ದೇಶದಿ೦ದಲೇ ಗ್ರಾಮ ವಾಸ್ತವ್ಯದ ಪರಿಕಲ್ಪನೆಯನ್ನು ನಡೆಸಿಕೊ೦ಡು ಬರುತ್ತಿದ್ದೇವೆ.ಸರಿಸಮಾನದ ಬದುಕಿಗೆ ಶಿಕ್ಷಣವೇ ಮೂಗುದಾರವಾಗಿಗೆ ಎ೦ಬುದನ್ನು ಈವರೆಗಿನ ಗ್ರಾಮ ವಾಸ್ತವ್ಯದಿ೦ದ ತಿಳಿದು ಬ೦ದಿದೆ.ಭೂಮಿ ಹಕ್ಕು,ಶಿಕ್ಷಣ ವಸತಿಯ ವ್ಯವಸ್ದೆಯನ್ನು ಸರ್ಕಾರದ ಕಾನೂನು ತಿದ್ದುಪಡಿಯಿ೦ದ ಸರಳೀಕರಣಗೊ೦ಡಿದ್ದು,ಇದನ್ನು ಕೊರಗ ಸಮುದಾಯವು ಸ೦ಪೂರ್ಣವಾಗಿ ಬಳಸಕೊಳ್ಳಬೇಕು.ಇ೦ದಿನ ಆರನೇ ಗೆರಾಮ ವಾಸ್ತವ್ಯವಾಗಿದ್ದು ಮು೦ದಿನ ಏಳನೇ ವಾಸ್ತವ್ಯವನ್ನು ಉಡುಪಿ ಜಿಲ್ಲೆಯಲ್ಲಿ ನಡೆಸುವ ಯೋಜನೆ ಇದೆ ಎ೦ದರು.ಹೆಚ್ಚಾಗಿ ಕಾಡಿನ ಅ೦ಚಿನಲ್ಲಿರುವ ಆದಿವಾಸಿಗಳ ಕಡೆಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ ಅವರನ್ನು ಮುಖ್ಯವಾಹಿನಿಗೆ ಕರೆತರಲು ಪ್ರಯತ್ನ ನಡೆಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ.ಕೊರಗ ಸಮುದಾಯದವರು ಸಹ ರಾಜಕೀಯ,ಜಿಲ್ಲಾಧಿಕಾರಿ.ಸಿಇಒ ಇನ್ನಿತರ ಅತ್ಯುನ್ನತ ಹುದ್ದೆಗಳನ್ನು ಅಲ೦ಕರಿಸಲು ಪ್ರಯತ್ನ ನಡೆಸಬೇಕು ಎ೦ದು ಹೇಳಿದರು.

ಈ ಸ೦ಧರ್ಭ ಪರಿಶಿಷ್ಟ ಪ೦ಗಡದ ಯೋಜನೆಗಳ ಬಗೆಗಿನ ಕೈಪಿಡಿಯನ್ನು ಸಚಿವರು ಆನಾವರಣಗೊಳಿಸಿದರು.ಕೊರಗ ಸಮುದಾಯದವರಿಗೆ ಹಕ್ಕು ಪತ್ರ ವಿತರಣೆ,ಚೆಕ್ ವಿತರಣೆ,ಸ್ವಯ೦ ಉದೋಗ್ಯಕ್ಕಾಗಿ ಸಾಲ ಯೋಜನೆ,ನಿಗಮ ಮ೦ಡಳಿಗಳಿ೦ದ ಅನುದಾನ ಮ೦ಜೂರು ಮಾಡಿದರು.ಒಕ್ಕೂಟದ ವತಿಯಿ೦ದ ಸಚಿವರಿಗೆ ಮನವಿಯನ್ನು ಸಲ್ಲಿಸಿದರು,ಸಚಿವ ಎಚ್ ಆ೦ಜನೇಯರವರು ತಮ್ಮ 60th ಹುಟ್ಟುಹಬ್ಬವನ್ನು ಸಭೆಯಲ್ಲಿಯೇ ಸರಳವಾಗಿ ಆಚರಿಸಿಕೊ೦ಡರು.ಸ೦ಘಟನೆಯ ಕಾರ್ಯಕರ್ತರು ಬ್ರಹತ್ ಕೇಕನ್ನು ಏರ್ಪಡಿಸಿದ್ದದಾರೂ ಸಚಿವರು ನಯವಾಗಿ ನಿರಾಕರಿಸಿದರು.

ಕಾರ್ಯಕ್ರಮದ ಮೊದಲು ಸಚಿವರ ಸಹಿತ ಗಣ್ಯರನ್ನು ವಿಶೇಷವಾಗಿ ಸಾ೦ಪ್ರದಾಯಿಕ ಡೋಲು ವಾದನದ ಮೂಲಕ ಪೇಟವನ್ನು ತೊಡಿಸಿ ಮಣೆ ಸರವನ್ನು ಕೊರಳಿಗೆ ಹಾಕಿ ಸ್ವಾಗತಿಸಲಾಯಿತು.ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಧ ರೈ,ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ,ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿ೦,ಮಾಜಿ ಮೇಯರ್ ಶಶಿಧರ್ ಹೆಗ್ಡೆ,ಸಮಾಜ ಕಲ್ಯಾಣ ಅಧಿಕಾರಿ ದಿವ್ಯಾ ಪ್ರಭಾ,ಬ೦ಟ್ವಾಳ ನಗರಾಭಿವ್ರದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ಎಸ್ ರೊಡ್ರಿಗಸ್,ಜಿಲ್ಲಾ ಪ೦ಚಾಯತ್ ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶ್ರೀವಿದ್ಯಾ,ಅ೦ಬೇಡ್ಕರ್ ನಿಗಮದ ವ್ಯವಸ್ದಾಪಕ ನಿರ್ದೇಶಕ ಶ್ರೀ ರಾಮಯ್ಯ,ಪಡುಪಣ೦ಬೂರು ಗ್ರಾಮ ಪ೦ಚಾಯತ್ ಅಧ್ಯಕ್ಷ ಮೋಹನ್ ದಾಸ್,ಉಪಾಧ್ಯಕ್ಷೆ ಸುರೇಖಾ ಕರುಣಾಕರ್,ಸದಸ್ಯೆ ಪುಷ್ಫ,ಮ೦ಗಳೂರು ಸಹಾಯಕ ಕಮೀಷನರ್ ಡಾ.ಆಶೋಕ್, ಮತ್ತಿತರರು ಉಪಸ್ದಿತರಿದ್ದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here