Tuesday 16th, April 2024
canara news

ಹೂಳೆತ್ತಲು ಬಾವಿಗೆ ಇಳಿದ ನಾಲ್ಕರ ರಕ್ಷಣೆ

Published On : 15 Apr 2016   |  Reported By : Roshan Kinnigoli


ಕಿನ್ನಿಗೋಳಿ ಬಳಿಯ ಪಕ್ಷಿಕೆರೆಯ ಕಾಪಿಕಾಡಿನಲ್ಲಿ ಕುಡಿಯುವ ನೀರಿನ ಬಾವಿಗೆ ಹೂಳೆತ್ತಲು ಇಳಿದಿದ್ದು ನಾಲ್ವರನ್ನು ಸುಮಾರು ಮೂರು ಘಂಟೆಯ ಕಾರ್ಯಾಚರಣೆಯಿಂದ ರಕ್ಷಣೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ಅತ್ತೂರು ಕಾಪಿಕಾಡಿನ ನಿವಾಸಿ ಮಹಮ್ಮದ್ ಉಂಞರವರ ಮನೆಯ ಬಾವಿಯಲ್ಲಿ ಇದ್ದ ಕೆಸರನ್ನು ತೆಗೆಯಲು ಅವರ ಇಬ್ಬರು ಪುತ್ರರಾದ ಮುಸ್ತಾಫ, ಅಬ್ದುಲ್ ಅಜೀಜ್ ಹಾಗೂ ನೆರೆಮನೆಯ ಮಹಮ್ಮದ್ ಜೊತೆಗೆ ವೃತ್ತಿಯಲ್ಲಿ ಬಸ್ಸಿನ ಚಾಲಕನಾಗಿರುವ ಸ್ಥಳೀಯ ನಿವಾಸಿ ಪೂವಪ್ಪ ಬಾವಿಗೆ ಇಳಿದಿದ್ದರು.

ಸುಮಾರು 65 ಅಡಿ ಆಳದ ಬಾವಿಗೆ ಇಳಿದ ಇವರಿಗೆ ಬಾವಿಯ ಒಳಗೆ ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿ ಜೀವನ್ಮರಣ ಸ್ಥಿತಿಯಲ್ಲಿ ಕಂಡು ಬಂದುದನ್ನು ಬಾವಿಯ ಮೇಲ್ಭಾಗದಲ್ಲಿದ್ದ ಮಹಮ್ಮದ್ ಉಂಞರವರು ಸ್ಥಳೀಯರಲ್ಲಿ ಮಾಹಿತಿ ನೀಡಿ ರಕ್ಷಣೆಯ ಸಹಾಯವನ್ನು ಯಾಚಿಸಿದರು.

ಸ್ಥಳೀಯ ಯುವಕರು ಸೇರಿಕೊಂಡು ವಿಶೇಷ ಕಾರ್ಯಾಚರಣೆಯನ್ನು ನಡೆಸಿ ವ್ಯಕ್ತಿಯೊಬ್ಬನನ್ನು ಬಾವಿಗೆ ಇಳಿಸಲು ಪ್ರಯತ್ನ ನಡೆಸಿದರಾದರು ಅವರಿಗೂ ಉಸಿರುಗಟ್ಟಿದಂತಾಗಿ ಹಿಂದುರಿಗಿದರಲ್ಲದೇ ಅಗ್ನಿಶಾಮಕದಳದವು ಎರಡು ತಾಸಿನ ನಂತರ ಸ್ಥಳಕ್ಕೆ ಆಗಮಿಸಿ ಬಾವಿಯಲ್ಲಿ ನಾಲ್ವರನ್ನು ಸಹ ಮೇಲೆತ್ತಿ ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಾಲ್ವರೂ ಸಹ ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮೂಲ್ಕಿ ಪೊಲೀಸ್ ಇನ್ಸ್‍ಪೆಕ್ಟರ್ ರಾಮಚಂದ್ರ ನಾಯಕ್ ಸೂಕ್ತ ಬಂದೋಬಸ್ತನ್ನು ನಿಡಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here