Thursday 25th, April 2024
canara news

ಅಪಾಯಕಾರಿ ಮದ್ದಿನ ದುಷ್ಪರಿಣಾಮದ ಹೊಣೆ?

Published On : 17 Apr 2016   |  Reported By : Rayee Rajkumar


ಔಷಧ ನೀಡುವ ವೈದ್ಯರನ್ನು “ವೈದ್ಯೋ ನಾರಾಯಣೋ ಹರಿ:” ಎಂದು ಭಗವಂತನಿಗೆ ಹೋಲಿಸಲಾಗಿದೆ. ಆದರೆ ಅಂತಹ ವೈದ್ಯರು ನೀಡುತ್ತಿರುವ ಔಷಧಿಗಳು, ಮಾಡುತ್ತಿರುವ ಕಾರ್ಯಗಳು, ಜನರಿಗೆ ಸಹಾಯಕವೇ? ಖಂಡಿತಾ ಇರಲಾರದು. ಕಾರಣ ಇತ್ತೀಚೆಗೆ ಕೇಳಿಬರುತ್ತಿರುವ ಘಟನೆಗಳು, ಕಂಡುಬರುತ್ತಿರುವ ಹಲವಾರು ನೈಜ ನೋಟಗಳು ವೈದ್ಯರನ್ನು ಎಷ್ಟರಮಟ್ಟಿಗೆ ಸಾಧ್ಯವೋ ಅಷ್ಟರಮಟ್ಟಿಗೆ ಸಾಧ್ಯವಾದಷ್ಟೂ ದೂರ ಇಡುವುದೇ ಪರಮ ಸುಖ ಎನ್ನುವಂತೆ ಮಾಡಿದೆ.. ಅದರಲ್ಲೂ ಚಿಕ್ಕಪುಟ್ಟ ಖಾಯಿಲೆಗಳಿಗಂತೂ ನಾವೇ ಕೈಯಾರೆ ಮನೆಯಲ್ಲೇ ಮಾಡಿದ ಕಷಾಯ ಇತ್ಯಾದಿ ಸೇವಿಸುವುದು ಬಹಳ ಉತ್ತಮ. ಏಕೆಂದರೆ ಇತ್ತೀಚೆಗೆ ಸ್ವತ: ಕೇಂದ್ರ ಸರಕಾರವೇ ಸುಮಾರು 500 ಕ್ಕೂ ಹೆಚ್ಚು ಔಷಧಿಗಳು ಅಪಾಯಕಾರಿ ಎಂದು ಅವುಗಳ ಮಾರಾಟವನ್ನು ನಿಷೇಧಿಸಿದೆ. ಆದರೆ ಅವೆಲ್ಲಾ ಎಷ್ಟರಮಟ್ಟಿಗೆ ಅಂಗಡಿಗಳ ದಾಸ್ತಾನುಗಳಿಂದ, ಡಾಕ್ಟರರ ನಿರ್ದೇಶನಗಳಿಂದ ಈಗಲಾದರೂ ದೂರಾಗಿದೆ ಎಂದು ಯಾರಿಗೆ ತಿಳಿಯಲು ಸಾಧ್ಯವಿದೆ? ಸಾಮಾನ್ಯ ಜನರಲ್ಲಿ ಅದರ ಪಟ್ಟಿ ಇದೆಯೇನು?

ಸರಕಾರವೇನೋ ಪತ್ರಿಕಾ ಜಾಹೀರಾತು, ಮಾಹಿತಿ, ವಿವರ ಒದಗಿಸಿ ತನ್ನ ಕೈ ತೊಳೆದು ಕೊಂಡಿತು. ಆದರೆ ಅದೇ ಸರಕಾರ ಅಂತಹ ಎಲ್ಲಾ ಆ 500 ಕ್ಕೂ ಮಿಕ್ಕಿ ಅಪಾಯಕಾರಿ ಔಷಧಿಗಳನ್ನು ಮಾರುಕಟ್ಟೆ, ಅಂಗಡಿ, ಡಾಕ್ಟರರುಗಳಿಂದ, ಆಸ್ಪತ್ರೆ ಹಾಗೂ ಮುಖ್ಯವಾಗಿ ದಾಸ್ತಾನು ಮಳಿಗೆಗಳಿಂದ ವಾಪಸ್ಸು ಪಡೆದು ನಾಶ ಪಡಿಸಿದೆಯೇ? ಅಂತಹ ಒಂದಾದರೂ ಕ್ರಮ ಕೈಗೊಂಡ ಉದಾಹರಣೆಗಳಿದ್ದರೆ ತಿಳಿಸಿರಿ. ಯಾವನೇ ಒಬ್ಬನೇ ಒಬ್ಬ ನಾಗರಿಕನಾದರೂ ಈ ಬಗ್ಗೆ ತುಟಿಬಿಚ್ಚಿ ಪ್ರಶ್ನಿಸಿದ್ದು ಇದೆಯೇ? ಹೇಳಿ ಸ್ವಾಮೀ. ನಮ್ಮ ನಮ್ಮ ಆರೋಗ್ಯದ ಬಗೆಗೆ, ನಮ್ಮ ಮನೆಯವರ, ಸ್ನೇಹಿತರ, ಓರಗೆಯವರ ಆರೋಗ್ಯದ ಬಗೆಗೆ ನಾವೆಷ್ಟು ಜಾಗೃತರಿದ್ದೇವೆ? ಸಾಕೇ? ಉದಾಹರಣೆ? ಇರಲಿ ಅಂತೂ ನಾವು ದಪ್ಪ ಚರ್ಮದವರು. ಏನೇ ಆದರೂ ನಮಗಲ್ಲ ಎಂದು ಕೊಡವಿಕೊಳ್ಳುವವರು.

ಸರಕಾರ ನಿಗದಿಗೊಳಿಸಿ ನಿಷೇಧಿಸಿದ ಆ ಎಲ್ಲಾ ಅಪಾಯಕಾರಿ ಮದ್ದುಗಳನ್ನು ಇದುವರೆವಿಗೆ ಸೇವಿಸಿ ಆರೋಗ್ಯವನ್ನು ಹಾಳು ಮಾಡಿಕೊಂಡ ವ್ಯಕ್ತಿಗಳ ಕಥೆ? ಆ ಅಪಾಯಕಾರಿ ಮದ್ದಿನ ಪರಿಣಾಮದಿಂದ ಕೆಟ್ಟು ಹೋದ ಅವರ ಆರೋಗ್ಯವನ್ನು ಸರಿಪಡಿಸುವುದಕ್ಕಾಗುವ ಹಣವನ್ನು ಯಾರು ಕೊಡುತ್ತಾರೆ? ಸರಕಾರ ಈ ಬಗ್ಗೆ ಯೋಚಿಸಿದೆಯೇ? ಅಂತಹ ಅಪಾಯಕಾರಿ ಮದ್ದನ್ನು ಸೇವಿಸಿದವರ ಪಟ್ಟಿ ಸರಕಾರದ ಬಳಿ ಇದೆಯೇ? ಅಂತಹ ಅಪಾಯಕಾರಿ ಮದ್ದಿನ ಬಗೆಗೆ ತಿಳಿದಿದ್ದೂ ಅದನ್ನು ಉಪಯೋಗಿಸುವಂತೆ ನಿರ್ದೇಶಿಸಿದ ವೈದ್ಯರುಗಳ ಅರ್ಹತೆ ಸರಿಯಾಗಿದೆಯೇ? ಖಂಡಿತಕ್ಕೂ ಇರಲಿಕ್ಕಿಲ್ಲ. ಏಕೆಂದರೆ ಯಾವದೇ ವೈದ್ಯನೂ ಕೂಡಾ ಅಪಾಯಕಾರಿ ಮದ್ದುಗಳನ್ನು ಆರೋಗ್ಯ ಬಯಸಿ ಬರುವ ವ್ಯಕ್ತಿಗೆ ಖಂಡಿತಕ್ಕೂ ನೀಡಲಾರ. ಆತ ಬಗವತ್ ಸ್ವರೂಪಿಯಲ್ಲವೇ?

ಈಗ ಪ್ರತಿಯೊಬ್ಬ ವ್ಯದ್ಯನೂ ತನ್ನನ್ನು ತಾನು ಪ್ರಶ್ನಿಸಿಕೊಳ್ಳಬೇಕಾಗಿದೆ. ಸ್ವತ: ತಾನು ಎಷ್ಟರಮಟ್ಟಿಗೆ ಭಗವಂತನ ಸ್ವರೂಪಿ ಎಂದು. ಏಕೆಂದರೆ ದಿ£ ಬೆಳಗಾದರೆ ಭಗವಂತನ ಸ್ತುತಿ, ಚಿತ್ರಕ್ಕೆ ಎರಗುವ ವೈದ್ಯನೂ ಬೇರೊಬ್ಬರ ಕಿಡ್ನಿ, ಕಣ್ಣು, ಇತ್ಯಾದಿ ಅವಯವಗಳನ್ನು ಮುಟ್ಟುವ ಮೊದಲು ಸ್ವತ: ತನ್ನ ಅವಯವಗಳ, ತನ್ನ ಸ್ವ ಆರೋಗ್ಯದ ಬಗೆಗೆ ಯೋಚಿಸಿದನೆಂದಾದರೆ ಯಾರೂ ಯಾವದೇ ಅವಯವದ ಕಳ್ಳರಾಗಲು, ಅಪಾಯಕಾರಿ

ಮದ್ದಿನ ದಾತರಾಗಲು ಸಾಧ್ಯವಿಲ್ಲ. ಏಕೆಂದರೆ ಇತರರಿಗೆ ಯಾತರವೋ ತನಗೂ ಅಂತಹದ್ದೇ ಎಂದು ಯೋಚನಾಗ್ರನಾದಾನು.

ನಿಷೇಧಿಸಲ್ಪಡುವಂತಹ ಯಾವದೇ ಅಪಾಯಕಾರಿ ಮದ್ದುಗಳಿದ್ದರೂ ಅವು ಮಾರುಕಟ್ಟೆ, ಸಂಗ್ರಹಾಗಾರ, ಆಸ್ಪತ್ರೆಗಳಿಗೆ ತಲುಪುವ ಮೊದಲೇ ನಾಶ ಮಾಡಲ್ಪಡಬೇಕು. ಇಲ್ಲವೆಂದಾದಲ್ಲಿ ಸ್ವತ: ಸರಕಾರವೇ ನಾಟಕ ಮಾಡಿ ತನ್ನ ಬೊಕ್ಕಸವನ್ನು ತುಂಬಿಸಿಕೊಂಡು ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಭಾವಿಸಬೇಕಾಗುತ್ತದೆ. ಹೀಗಾಗಿ ಯಾವದೇ ವಿಧದ ಪರಿಣಾಮದ, ದುಷ್ಪರಿಣಾಮದ ಹೊಣೆ ಎಲ್ಲವೂ ಆಯಾ ಸರಕಾರ, ಅಧಿಕಾರಿಗಳದ್ದಾಗಿದೆ. ಒಂದು ವೇಳೆ ಯಾರಾದರೂ ಗ್ರಾಹಕ ಅಂತಹ ಅಪಾಯಕಾರಿ ಮದ್ದಿನ ತೊಂದರೆಯನ್ನು ಭರಿಸಿಕೊಡಬೇಕೆಂದು ಆಶಿಸಿದಲ್ಲಿ ಇದು ಆ ಸರಕಾರದ ಗುರುತರ ಜವಾಬ್ದಾರಿ ಕೂಡಾ ಆಗಿರುತ್ತದೆ. ಅದರಿಂದ ನುಣುಚಿಕೊಳ್ಳಲು ಸಾದ್ಯವಿಲ್ಲ. ಸರಕಾರ, ಅಧಿಕಾರಿಗಳು, ವೈದ್ಯರÀು ಎಲ್ಲರೂ ಸಾಮೂಹಿಕ ಜವಾಬ್ದಾರರು. ಹೀಗಾಗಿ ಗ್ರಾಹಕರಾದವರ ಆರೋಗ್ಯ, ಹಿತ, ಎಲ್ಲವನ್ನೂ ಕಾಪಾಡುವುದು ಮೇಲ್ಕಂಡ ಎಲ್ಲರ ಸಾಮೂಹಿಕ ಕರ್ತವ್ಯ ಕೂಡಾ. ಆದುದರಿಂದ ಯಾವದೇ ಔಷಧಿ ಅಪಾಯಕಾರಿಯಾಗಿದ್ದಲ್ಲಿ ಅದು ಸಾರ್ವಜನಿಕವಾಗಿ ಸಿಗುವ ಮೊದಲೇ ನಾಶಪಡಿಸಿ ಜನರ ಪ್ರಾಣ ರಕ್ಷಿಸುವ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ಎಲ್ಲರೂ ನಿಭಾಯಿಸಬೇಕೆಂದು ಗ್ರಾಹಕರೆಲ್ಲರ ಪರವಾಗಿ ಕೇಳಿಕೆ.

ಲೇಖನ : ರಾಯೀ ರಾಜ ಕುಮಾರ, ಮೂಡುಬಿದಿರೆ




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here