Thursday 28th, March 2024
canara news

ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಶ್ರೀ ಹನುಮೋತ್ಸವ

Published On : 23 Apr 2016   |  Reported By : Rons Bantwal


ವಿಟ್ಲ, ಎ.22: ರಾಮ-ಹನುಮತ್ಯಾಗ ಮತ್ತು ಸೇವೆಗೆ ಮಾದರಿಯಾಗಿದ್ದು, ದೇಶ ಕಟ್ಟು ಕಾರ್ಯದಲ್ಲಿ ಇದು ಮಹತ್ವದ್ದು.ಹನುಮನ ಪಂಚ ಮುಖದಲ್ಲಿ ಐದು ತತ್ವಗಳು ಅಡಗಿದ್ದು, ಹನುಮನ ಆದರ್ಶನದ ಸೇವೆ ನಮಗೆ ಮಾರ್ಗದರ್ಶನವಾಗಬೇಕು. ಆತ್ಮಶಕ್ತಿಯನ್ನು ತುಂಬಲು ರಾಮಾಯಣ ಸಹಕಾರಿಯಾಗಿದ್ದು, ಪುರಾಣ ಗ್ರಂಥಗಳು ಬದುಕಿಗೆ ಬೆಳಕು ಚೆಲ್ಲುತ್ತದೆಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಸ್ವಾಮೀಜಿ ಅವರು ಶುಕ್ರವಾರ ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಶ್ರೀಮದ್ರಾಮಾಯಣ ಮಹಾಯಜ್ಞ - ಶ್ರೀ ಹನುಮೋತ್ಸವ ಕಾರ್ಯಕ್ರಮ ಧರ್ಮ ಸಭೆಯಲ್ಲಿ ಹನುಮ ವೈಭವ ಕೃತಿ ಬಿಡುಗಡೆ ನಡೆಸಿ ಆಶೀರ್ವಚನ ನೀಡಿದರು.

ಜೀವನ ಮೌಲ್ಯವನ್ನು ನೀಡುವ ಶಿಕ್ಷಣ ಇಂದು ಅಗತ್ಯವಿದೆ. ಆದ್ಯಾತ್ಮವನ್ನೊಳಗೊಂಡ ಶಿಕ್ಷಣದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ.ಸಾಹಸ ದೈರ್ಯಕ್ಕೆ ಹನುಮ ಆದರ್ಶನಾಗಿದ್ದು, ಯುವ ಶಕ್ತಿಯಿಂದ ಸಮಾಜಕ್ಕೆ ಬಲ ಬರಲು ಸಾಧ್ಯ. ಬದುಕಿನಲ್ಲಿ ಶಿಸ್ತು ಕಡಿಮೆಯಾದರೆ ದೇಹಕ್ಕೆ ಹಾಗೂ ಸಮಾಜಕ್ಕೆ ತೊಂದರೆಯಿದೆ. ಪರಿಸರವಿದ್ದರೆ ನಾವಿರಲು ಸಾಧ್ಯ, ಪರಿಸರ ನಾಶದಿಂದ ಸಮಾಜಕ್ಕೆ ಕಂಟಕವಿದೆ ಎಂದು ತಿಳಿಸಿದರು.

ವಿವಿಧ ಸಹಾಯಹಸ್ತವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಗೌರವಿಸಲಾಯಿತು.

ಮಂಗಲ್ಪಾಡಿ ಅಡ್ಕ ಶ್ರೀ ಭಗವತೀ ಕ್ಷೇತ್ರ ಅಧಕ್ಷ ಗೋಪಾಲ ಎಂ ಬಂದ್ಯೋಡು, ಕುವೈಟ್ ಬಂಟ್ಸ್ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಅಗರಿ, ಕಂಕನಾಡಿ ಗಣೇಶ್ ಮೆಡಿಕಲ್‍ನ ಸುರೇಶ್ ಆಳ್ವ, ಹನುಭವೈಭವ ಕೃತಿ ರಚನೆಕಾರ ಎನ್ ಪಿ ಶೆಟ್ಟಿ ಮೂಲ್ಕಿ ಉಪಸ್ಥಿತರಿದ್ದರು.

ಸತ್ಯಶ್ರೀ ಪ್ರಾರ್ಥಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕರು ಎಚ್ ಕೆ ಪುರುಷೋತ್ತಮ ಸ್ವಾಗತಿಸಿದರು. ಒಡಿಯೂರು ಶ್ರೀಗುರುದೇವ ವಿದ್ಯಾಪೀಠದ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ವಂದಿಸಿದರು.ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಮೇಲ್ವಿಚಾರಕ ಸದಾವಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಧಾರ್ಮಿಕ ಕಾರ್ಯಕ್ರಮ:
ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರಾತಃಕಾಲ ಅಖಂಡ ಭಗವನ್ನಾಮಸಂಕೀರ್ತನಾ ಸಪ್ತಾಹ ಸಮಾಪ್ತಿ, ಗಣಪತಿ ಹವನ, ಶ್ರೀಮದ್ರಾಮಾಯಣ ಮಹಾಯಜ್ಞ ಮಹಾಯಜ್ಞದ ಆರಂಭ,ಮಧ್ಯಾಹ್ನ ಮಹಾಯಜ್ಞದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀಹನುಮದ್ವ್ರತ ಪೂಜೆ, ವಿಶೇಷ ಬೆಳ್ಳಿ ರಥೋತ್ಸವ, ಉಯ್ಯಾಲೆ ಸೇವೆ ನಡೆಯಿತು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here