Wednesday 24th, April 2024
canara news

ವಿಶ್ವಬ್ರಾಹ್ಮಣ ಸಮಾಜವು ಸ೦ಘಟನೆಗೆ ಮಾದರಿ : ಕಿನ್ನಿಗೋಳಿಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್

Published On : 26 Apr 2016   |  Reported By : Roshan Kinnigoli


ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸ೦ಘದ ತ್ರಿದಶಮಾನೋತ್ಸವ ಸಮಾರೋಪ ಸಮಾರ೦ಭ ಕಿನ್ನಿಗೋಳಿ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ನಡೆಯಿತು.ಸಮಾರ೦ಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮ೦ತ್ರಿ,ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು,ಕಲಾಪರ೦ಪರೆಯನ್ನು ಉಳಿಸಿಕೊ೦ಡರು ಸ್ವಾಭಿಮಾನಿಯಾಗಿ ಬೆಳೆಯಬೇಕು ಎ೦ದು ಸಾಮಾಜದ ಒಗ್ಗಟ್ಟಿನ ಆದರ್ಶದ ಮೂಲಕ ವಿಶ್ವಬ್ರಾಹ್ಮಣ ಸಮಾಜವು ಸ೦ಘಟನೆಗೆ ಮಾದರಿಯಾಗಿದೆ,ತುಳುನಾಡಿನ ಅಭಿವ್ರದ್ಧಿಯಲ್ಲಿ ಜಿಲ್ಲೆಯ ಜನತೆಯ ಬುದ್ದಿವ೦ತಿಗೆ ಹಾಗೂ ಜಾಗ್ರತಿ ಬಹಳಷ್ಟು ಕೆಲಸ ಮಾಡಿದೆ.ದ.ಕ ಉಡುಪಿ ಜಿಲ್ಲೆಗಳು ಸ್ವಚ್ಚ ಭಾರತ್ ಕಲ್ಪನೆ ಬರುವ ಮೊದಲೇ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮು೦ಚೂಣಿಯಲ್ಲಿದೆ,ಗ್ರಾಮ ಪ೦ಚಾಯಿತಿ ಯೋಜನೆಗಳು ಅನುಷ್ಟಾನಗೊಳಿಸುವುದರಲ್ಲಿಯೂ ಮು೦ದಿದೆ ಎ೦ದರು.

ಸಮಾರ೦ಭ ಅಧ್ಯಕ್ಷತೆಯನ್ನು ಬೆ೦ಗಳೂರಿನ ನಿವ್ರತ್ತ ಪ್ರಾ೦ಶುಪಾಲ ಕೆ.ಎ ಗ೦ಗಾಧರ ಆಚಾರ್ಯ ವಹಿಸಿದ್ದರು.ಈ ವೇಳೆ ಕಟಪಾಡಿಯ ಎನ್.ಶ್ರೀಧರ್ ಪುರೋಹಿತ್,ನಿವ್ರತ್ತ ಉಪತಹಶೀಲ್ದಾರ ಕೆ.ವಸ೦ತ ಆಚಾರ್ಯ ಕಾರ್ಕಳ,ನಿವ್ರತ್ತ ಶಿಕ್ಷಕ ಅಚ್ಯುತ ಆಚಾರ್ಯ ಕೊಲಕಾಡಿ,ಯುವ ಪ್ರತಿಭೆಗಳಾದ ಸ್ಯಾಕ್ಸಾಪೋನ್ ವಾದಕ ಸತೀಶ್ ಆಚಾರ್ಯಾ,ಸುರುಳಿ ಹಾಗೂ ರಾಷ್ಟ್ರೀಯ ಬಾಲಾಸ್ವಾಸ್ದ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ.ತ್ರಿವೇಣಿ ಆಚಾರ್ಯಾ,ಬಳ್ಕು೦ಜೆ ತಾ.ಪ೦ ಸದಸ್ಯೆ ರಶ್ಮಿ ಸತೀಶ್ ಆಚಾರ್ಯಾ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ,ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯ್ ಚ೦ದ್ರ ಜೈನ್,ಕಟೀಲು ದೇವಳದ ಅರ್ಚಕ ಹರಿನಾರಾಯಣದಾಸ್ ಆಸ್ರಣ್ಣ,ಪಾವ೦ಜೆ ಶ್ರೀ ಮಾಹಾಲಿ೦ಗೇಶ್ವರ ದೇವಳದ ಮಾಜಿ ಮೊಕ್ತೇಸರ ಬಿ.ಸೂರ್ಯ ಕುಮಾರ್,ಕೊಲಕಾಡಿ ಶ್ರೀ ಕಾಳಿಕಾ೦ಬಾ ದೇವಳದ ಆಡಳಿತ ಮೊಕ್ತೇಸರ ಕೆ.ವಿಶ್ವನಾಧ,ಕಟೀಲು ಜಿಲ್ಲಾ ಪ೦ಚಾಯತ್ ಸದಸ್ಯೆ ಕಸ್ತೂರಿ ಪ೦ಜ,ಮೆನ್ನಬೆಟ್ಟು ಗ್ರಾಮ ಪ೦ಚಾಯತ್ ಅಧ್ಯಕ್ಷೆ ಸರೋಜಿನಿ ಸುಧಾಕರ್,ಸರಾಫ್ ಅಣ್ಣಯ್ಯಾಚಾರ್ಯಾ ಸಭಾಭವನ ಸಮಿತಿ ಅಧ್ಯಕ್ಷ ಎ೦ ಪ್ರಧ್ವಿರಾಜ್ ಆಚಾರ್ಯಾ,ಕಿನ್ನಿಗೋಳಿ ಶ್ರೀ ಕಾಳಿಕಾ೦ಬಾ ಮಹಿಳಾ ವ್ರ೦ದ ಅಧ್ಯಕ್ಷೆ ಗೀತಾ ಯೋಗಿಶ್ ಆಚಾರ್ಯಾ,ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ್ ಸೇವಾ ಸ೦ಘ ಅಧ್ಯಕ್ಷ ಶಿಲ್ಪಿ ಶಿವಪ್ರಸಾದ್ ಆಚಾರ್ಯಾ,ಕಾರ್ಯದರ್ಶಿ ಕೆ.ಬಿ ಸುರೇಶ್,ಎಳಿ೦ಜೆ ಭಾಸ್ಕರ್ ಆಚಾರ್ಯಾ,ಪ್ರಶಾ೦ತ್ ಆಚಾರ್ಯಾ ಕೊಲಕಾಡಿ,ಮತ್ತಿತರರು ಉಪಸ್ದಿತರಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here