Friday 29th, March 2024
canara news

ನೀರು ನೂರಾಗುವ ಅಮೃತ ಘಳಿಗೆ ಹೊಮ್ಮಲಿ

Published On : 27 Apr 2016   |  Reported By : Rayee Rajkumar


ಹಳ್ಳಿಯ ಇಳೆಯೇ ಬಾಯ್ಬಿಟ್ಟು ಹಪಹಪಿಸುತ್ತ “ವಟರ್-ವಟರ್ ಎಂದುವಾಟರ್, ನೀರು, ನೀರ್, ಉದಾಕ್, ಪಾನೀ ಗಳಿಗೆ ಕೇಳಿಕೆ ಇಡುತ್ತಿರುವಾಗ ಪಟ್ಟಣಿಗರು ಯಾವ ಜವಾಬ್ದಾರಿಯೂ ಇಲ್ಲದೆ ತಮ್ಮ ಐಷಾರಾಮೀ ಬದುಕಿನ ಹುಲ್ಲು ಹಾಸಿಗೆ, ಹೂ ತೋಟಕ್ಕೆ, ಸ್ವಚ್ಛಂದವಾಗಿ ನೀರು ಹರಿಸುತ್ತಾ; ಸಾರ್ವಜನಿಕ ನಲ್ಲಿಗಳಿಗೆ ಪೈಪು ಸಿಕ್ಕಿಸಿ ವಾಹನ ತೊಳೆಯುತ್ತಾ; ಒಂದು ಬಕೆಟ್ ನೀರಿನಲ್ಲಿ ಸ್ನಾನ ಸಾಧ್ಯವಿರುವಲ್ಲಿ ನಾಲ್ಕಾರು ಬಕೆಟ್ ನೀರು ತುಂಬುವ ಸ್ನಾನ ತೊಟ್ಟಿಯಲ್ಲಿ ಮಲಗಿ; ಅರ್ಧ ಬಕೆಟ್ ನೀರಿನಲ್ಲಿ ಪಾಯಿಖಾನೆ ಶುದ್ಧಗೊಳಿಸಲು ಸಾಧ್ಯವಿರುವಲ್ಲಿ; ಎರಡು ಬಕೆಟ್ ನೀರು ಉಪಯೋಗಿಸುವ ಪಾಯಿಖಾನೆ ಫ್ಲಶ್‍ಗಳನ್ನು ಉಪಯೋಗಿಸಲಾಗುತ್ತಿದೆ. ಇದೆಲ್ಲವೂ ನೀರನ್ನು ಪೋಲು ಮಾಡುತ್ತಿರುವ ಕೆಲವು ಸ್ಯಾಂಪಲ್ಲುಗಳು. ಇದೇ ರೀತಿ ಕೆಲವು ಷೋಕಿಗಳ ನೀರು ಪೋಲಿನ ವೃತ್ತಾಂತವನ್ನು ಹೇಳುತ್ತಾ ಹೋದರೆ ಅದಕ್ಕೆ ಕೊನೆ ಮೊದಲಿಲ್ಲದಂತೆ ಬೆಳೆಯುತ್ತಾ ಸಾಗುತ್ತದೆ.

ಗಿಡ ಬೆಳೆಸಿ, ಚೆಕ್ ಡ್ಯಾಮ್ ನಿರ್ಮಿಸಿ: ಈ ಎಲ್ಲಾ ನೀರಿನ ಪೋಲುಗಳನ್ನು ಅಗತ್ಯವಾಗಿ ನಿಲ್ಲಿಸಬೇಕಾಗಿದೆ. ನೀರು ನೂರಾಗುವ ಅಮೃತ ಘಳಿಗೆ ಹೊಮ್ಮಬೇಕಾಗಿದೆ. ಅದಕ್ಕಾಗಿ ಅತ್ಯಂತ ಶೀಘ್ರವಾಗಿ ಎಲ್ಲರೂ ಮಾಡಬೇಕಾದ ಮೊತ್ತಮೊದಲ ಕರ್ತವ್ಯವೆಂದÀರೆ ತಮ್ಮ ಇರುವ ಭೂಮಿಯಲ್ಲಿ ಕನಿಷ್ಠ ವರ್ಷಕ್ಕೆ ಒಂದಾದರೂ ಗಿಡವನ್ನು ನೆಟ್ಟು ಬೆಳೆಸಿ ಮರವನ್ನಾಗಿ ಬೆಳೆಸುವ ಪ್ರತಿಜ್ಞೆ ಗೈಯುವುದು. ಏನೂ ಮರಗಿಡಗಳಿಲ್ಲದ ಪ್ರದೇಶಗಳಲ್ಲಿ ಸಾಮಾಜಿಕ ಜವಾಬ್ದಾರಿಯ ಸಂಘ, ಸಂಸ್ಥೆ, ಯುವಕ-ಯುವತಿ ಮಂಡಲ, ಸಂಘಗಳು ಒಟ್ಟಾಗಿ ಸೇರಿ ಪರಿಸರದಲ್ಲಿ ಪ್ರತೀ ವರ್ಷ ನೂರಾರು ಗಿಡಗಳನ್ನು ನೆಟ್ಟು ಮರಗಿಡಗಳನ್ನಾಗಿ ಪೋಷಿಸುವುದು. ಅದಕ್ಕಾಗಿ ಬಹುಮಾನ ಯೋಜನೆಗಳನ್ನು ಪ್ರಕಟಿಸಿದರೆ ಹೆಚ್ಚು ಹೆಚ್ಚು ಮರಗಿಡಗಳು ಬೆಳೆದು ಪರಿಸರ ಉಳಿದಾವು. ಅದೇರೀತಿ ತಂತಮ್ಮ ಊರಿನಲ್ಲಿರುವ ಎಲ್ಲಾ ಮದಗ, ಕೆರೆ, ಕಾಲುವೆಗಳ ಹೂಳು ತೆಗೆದು ಸಾಧ್ಯವಿರುವಷ್ಟು ಆಳಗೊಳಿಸಿ ಅತಿ ಹೆಚ್ಚು ನೀರು ಮಳೆಗಾಲದಲ್ಲಿ ನಿಲ್ಲುವಂತೆ ಕ್ರಮ ಕೈಗೊಳ್ಳುವುದು. ಅದೇರೀತಿ ಸಾಧ್ಯವಿರುವಲ್ಲೆಲ್ಲಾ ತೋಡು, ಕಾಲುವೆಗಳಲ್ಲಿ ಸೂಕ್ತ ಮಟ್ಟದಲ್ಲಿ ಅಲ್ಲಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಿ ನೀರು ಹರಿದು ಹೋಗುವದನ್ನು ತಡೆಗಟ್ಟಿ ಅಲ್ಲಲ್ಲಿ ಶೇಖರಗೊಳ್ಳುವಂತೆ ನೋಡಿಕೊಳ್ಳಬೇಕು. ಈ ಕೆಲಸವನ್ನು ಸರಕಾರಕ್ಕೆ ಬಿಟ್ಟುಕೊಟ್ಟಲ್ಲಿ ಏನೇನೂ ಪ್ರಯೋಜನವಿಲ್ಲ. ಇದೆಲ್ಲವನ್ನೂ ಸಾಮಾಜಿಕ ಜವಾಬ್ದಾರಿಯ ಮೇಲ್ಕಂಡ ಸಂಘ, ಸಂಸ್ಥೆ, ಮಂಡಲಗಳೊಂದಿಗೆ ಅಂತಹುದೇ ಜವಾಬ್ದಾರಿ ಹೊಂದಿದ ಕ್ಲಬ್‍ಗಳೂ ಕಾರ್ಯಗತಗೊಳಿಸಿದರೆ ಹೆಚ್ಚು ವ್ಯಾಪಕವೂ, ಹೆಚ್ಚು ಪ್ರಾಸಂಗಿಕವೂ ಆಗಲು ಸಾಧ್ಯವಿದೆ.

ಅಣೆಕಟ್ಟು, ಕಾಲುವೆ, ಕೆರೆ, ಹಳ್ಳ ತೋಡುಗಳ ಶುಚಿಗೊಳಿಸಿ, ಆಳಗೊಳಿಸಿ: ಅಣೆಕಟ್ಟು, ಹಿನ್ನೀರಿನ ಪ್ರದೇಶಗಳನ್ನು ಹೆಚ್ಚು ಅಗಲಗೊಳಿಸಿ ಅಲ್ಲಿಂದ ಹೊರ ಹರಿಯುವ ನೀರಿನ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಹೆಚ್ಚು ನೀರು ಶೇಖರಗೊಂಡು ಹೆಚ್ಚು ಕಾಲಕ್ಕೆ ಉಪಯೋಗಕ್ಕೆ ದೊರಕಲು ಲಭ್ಯವಾಗುತ್ತದೆ. ಮಳೆಗಾಲದಲ್ಲಿ ಚರಂಡಿಯಲ್ಲಿ ಅಲ್ಲಲ್ಲಿ ಗುಂಡಿಗಳನ್ನು ನಿರ್ಮಿಸಿ ನೀರು ನಿಲ್ಲುವಂತೆ ಕ್ರಮ ಕೈಗೊಂಡರೆ ಹೆಚ್ಚು ನೀರು ಭೂಮಿಗೆ ಇಳಿಯಲ್ಪಟ್ಟು ಇಂಗುವಿಕೆಯ ಪ್ರಮಾಣ ಹೆಚ್ಚಲು ಸಾಧ್ಯವಿದೆ. ಅದಕ್ಕಾಗಿ ಕಾಲುವೆ, ಕೆರೆ, ಹಳ್ಳ ತೋಡುಗಳನ್ನು ಶುಚಿಗೊಳಿಸಿ, ಆಳಗೊಳಿಸಿ ಹೆಚ್ಚು ನೀರು ಶೇಖರಗೊಳ್ಳುವಂತೆ ಆಳಗೊಳಿಸಬೇಕು.

ಮಳೆ ನೀರನ್ನು ಹಿಡಿದು ಜಲ ಮರು ಪೂರಣ ಮಾಡಿ : ನಮ್ಮ ಹಿರಿಯರು ತೋಡಿ ಸದಾಕಾಲ ಬಳಸುತ್ತಿದ್ದ ಬಾವಿಗಳನ್ನು ಸರಿಗೊಳಿಸಿ, ಶುದ್ಧೀಕರಿಸಿ ಉಪಯೋಗ ಯೋಗ್ಯ ಬಾವಿಯನ್ನಾಗಿ ಪರಿವರ್ತಿಸಬೇಕೇ ಹೊರತು, ಮುಚಿ ್ಚಇರುವ ಜಲ ಮೂಲವನ್ನು ಹಾಳು ಮಾಡುವ ಹುಚ್ಚುತನವನ್ನು ತೋರಬಾರದು. ಒಂದು ವೇಳೆ ಅಂತಹ ಬಾವಿಗಳಲ್ಲಿ ನೀರಿಲ್ಲದಿದ್ದಲ್ಲಿ ಹತ್ತಿರದ ಪರಿಸರವಲ್ಲಿರುವ ಮನೆ, ಕಟ್ಟಡಗಳ ಛಾವಣಿ ನೀರು ಅಂತಹ ಬಾವಿಗಳಿಗೆ ಇಳಿಯುವಂತೆ ಮಾಡಿ ಜಲ ಮರು ಪೂರಣಕ್ಕೆ ಸಹಕಾರಿಯನ್ನಾಗಿ ಬಳಸಿಕೊಳ್ಳಬಹುದು. ಅದೇ ರೀತಿ ಪ್ರತಿಯೊಬ್ಬರೂ ತಂತಮ್ಮ ಮನೆಯ ಛಾವಣಿ ನೀರನ್ನು ಸೂಕ್ತ ರೀತಿ ಶೇಖರಿಸಿ ಶುದ್ಧೀಕರಿಸಿ ಬಾವಿ ಯಾ ಬೋರ್ ವೆಲ್‍ಗಳಿಗೆ ಬಿಡುವ ಮೂಲಕವೂ ಜಲ ಮರು ಪೂರಣದಲ್ಲಿ ಕೈ ಜೋಡಿಸ ಬಹುದಾಗಿದೆ. ಇದಕ್ಕಾಗಿ ಪ್ರಾದೇಶಿಕ ಪಂಚಾಯತ್, ನಗರಸಭೆ, ಪುರಸಭೆ, ಮಹಾ ನಗರಗಳಲ್ಲಿ ಜಲ ಮರು ಪೂರಣ ವ್ಯವಸ್ಥೆ ಮಾಡಿದವರಿU Éತೆರಿಗೆಯಲ್ಲಿ ಅರ್ಧಾಂಶ ಅಥವಾ ನಿರ್ದಿಷ್ಟ ಪ್ರಮಾಣದ ಕಡಿತವನ್ನು ಜಾರಿಗೊಳಿಸಿ ಉತ್ತೇಜಿಸ ಬಹುದಾಗಿದೆ.

ಸ್ವ ಸರ್ಕಾರಗಳು ಜಲ ರಕ್ಷಣಾ ಸಮಿತಿ ರಚಿಸಲಿ: ಪ್ರತಿಯೊಂದೂ ಸ್ವ ಸರ್ಕಾರಗಳ ವಾರ್ಡು ಮಟ್ಟದ ಸಮಿತಿಗಳನ್ನು ಮಾಡಿ ಆಯಾ ಸ್ಥಳಕ್ಕೆ ಸೂಕ್ತ ಕಂಡ ಜಲ ರಕ್ಷಣಾ ಯೋಜನೆಗಳನ್ನು ಜಾರಿಗೊಳಿಸಲು ಸಮಿತಿಗಳನ್ನು ರಚಿಸಬೇಕು. ಸಾರ್ವಜನಿಕರು ಹೆಚ್ಚು ಹೆಚ್ಚು ನೀರನ್ನು ಉಳಿಸುವಂತೆ ಪ್ರೇರೇಪಿಸಲು ಮನೆ ಮನೆಗೆ ಭೇಟಿ ಇತ್ತು ಮನವೊಲಿಸುವಂತೆ ಮಾಡಬೇಕು. ಮಾತ್ರವಲ್ಲ ಸಮಿತಿಗಳ ನಿರ್ಧಾರಗಳು ಕಾರ್ಯರೂಪಕ್ಕೆ ಬರುವಂತೆ ಮಾಡಬೇಕು.

ಸ್ವಂತ ವಾಹನ, ಬುಲೆಟ್ ಟ್ಯಾಂಕರ್ ನಿಯಂತ್ರಿಸಿರಿ: ಸಾಧ್ಯವಿರುವಲ್ಲೆಲಾ ್ಲಸ್ವಂತ ವಾಹನಗಳ ಬಳಕೆಯನ್ನು ನಿಯಂತ್ರಿಸಬೇಕು, ಸಾರ್ವಜನಿಕ ವಾಹನ ಬಳಸುವಂತೆ ಪ್ರೇರೇಪಿಸಬೇಕು. ಇದರಿಂದಾಗಿ ವಿಷಯುಕ್ತ ಹಾಗೂ ಅಪಾಯಕಾರಿ ಹೊಗೆ ಶುದ್ಧ ಗಾಳಿಗೆ ಸೇರುವುದು ಕಡಿತಗೊಳ್ಳುತ್ತದೆ ಮತ್ತು ಮುಗಿಯುವ ಇಂಧನದ ಉಳಿಕೆಯೂ ಸಾಧ್ಯವಿದೆ. ಸಾಧ್ಯವಾದಷ್ಟು ಮಟ್ಟಿಗೆ, ಆದಷ್ಟು ಬೇಗ ಬುಲೆಟ್ ಟ್ಯಾಂಕರ್ ಗಳ ಓಡಾಟವನ್ನು ನಿಲ್ಲಿಸುವದಕ್ಕಾಗಿ ಗ್ಯಾಸ್ ಪೈಪ್ ಲೈನ್ ವ್ಯವಸ್ಥೆ ತ್ವರಿತಗೊಳಿಸಬೇಕು. ಏಕೆಂದರೆ ಸರಾಸರಿ 20-30 ಬುಲೆಟ್ ಟ್ಯಾಂಕರ್ ಗಳು ಪ್ರತೀ ವರ್ಷ ಅಪಘಾತಗೊಂಡು ಸ್ವತ: ಹೊತ್ತಿ ಉರಿಯುವದು ಮಾತ್ರವಲ್ಲ ಅಪಘಾತದ ಪರಿಸರವೆಲ್ಲಾ ನಾಶವಾಗುತ್ತಿದೆ. ಇದು ಸಾಧುವಲ್ಲ. ಆದ್ದರಿಂದ ಶೀಘ್ರಾತಿ ಶೀಘ್ರ ಪೈಪ್ ಲೈನ್ ಮೂಲಕವೇ ಗ್ಯಾಸ್ ಸರಬರಾಜಾಗುವಂತೆ ಹಾಗೂ ರಸ್ತೆ, ಗಾಳಿ, ಪರಿಸರವೆಲ್ಲವೂ ಉಳಿಯುವಂತೆ ಮಾಡಬೇಕಾಗಿದೆ.

ಜಪ, ತಪಕ್ಕಿಂತ ವ್ಯರ್ಥ ಪೋಲನ್ನು ತಡೆಗಟ್ಟಿ : “ಮಂತ್ರಕ್ಕೆ ಮಾವಿನಕಾಯಿ ಉದುರುವದಿಲ್ಲ.” ಆದ್ದರಿಂದ ನೀರಿಗಾಗಿ ಪ್ರಾರ್ಥನೆ, ಜಪ, ತಪ ಇತ್ಯಾದಿಗಳಿಗಿಂತ ಮುಖ್ಯವಾಗಿ ಮೇಲ್ಕಂಡ ಎಲ್ಲ ಕ್ರಮ ಕೈಗೊಳ್ಳುವದರೊಂದಿಗೆ ಅವರವರ ಮನೆಗಳಲ್ಲಿ ಒಟ್ಟಾಗುವ ಪಾತ್ರೆ ತೊಳೆದ, ಬಟ್ಟೆ ಒಗೆದ, ಇತ್ಯಾದಿ ಎಲ್ಲಾ ನೀರನ್ನೂ ಅನಗತ್ಯ ಹಾಳು ಮಾಡದೇ ಗಿಡ-ಮರಗಳಿಗೆ, ಪಾಯಿಖಾನೆಗಳಿಗೆ ಬಳಸಬಹುದಾಗಿದೆ.

ಸ್ನಾನ ಮಾಡಿದ ನೀರು ವ್ಯರ್ಥ ಪೋಲಾಗಲು ಬಿಡುವ ಬದಲು ನೇರವಾಗಿ ತರಕಾರಿಯಾ ಗಿಡಗಳಿಗೆ ಬಿಡುವದರಿಂದ ಹೆಚ್ಚು ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ. ಇನ್ನು ಕೆಲವರು ಷೋಕಿಗಾಗಿ ತಮ್ಮ ಮನೆ ಎದುರು ಅಥವಾ ರಸ್ತೆಯಲ್ಲಿ ವಾಹನ ನಿಲ್ಲಿಸಿ ನಲ್ಲಿ ನೀರಿನಿಂದ ತೊಳೆಯುವ ಹೊಣೆಗೇಡಿಗಳಿರುತ್ತಾರೆ. ಆ ರೀತಿ ನಲ್ಲಿ ನೀರನ್ನು ವ್ಯರ್ಥ ಪೋಲು ಮಾಡುವವರ ಬಗೆಗೆ ಪರಿಸರದ ಮನೆಯವರು ಸ್ಥಳೀಯ ಸ್ವ ಸರ್ಕಾರಗಳಿಗೆ ತಿಳಿಸಿ ಅಂತಹವರ ವಿರುದ್ಧ ಉಗ ್ರಶಿಸ್ತು ಕ್ರಮ ಜರುಗಿಸಲು ಸಾಮೂಹಿಕವಾಗಿ ಕೇಳಿಕೊಳ್ಳಬೇಕು. ಇದರಿಂz ಎಲ್ಲರಿಗೂ ಪಾಠ ದೊರಕಲು ಸಾಧ್ಯವಿದೆ.

ಖಾಲಿ ಭೂಮಿ ಉಳಿಯುವಂತೆ ನೋಡಿಕೊಳ್ಳಿ : ಒಂದಕ್ಕಿಂತ ಹೆಚ್ಚು ಮನೆ ಹೊಂದಿರುವವರಿಂದ ಅತಿಹೆಚ್ಚು ಷೋಕಿತನವಾಗುತ್ತಿರುವದರಿಂದ ಅಂತಹವರಿಂದಲೇ ಹೆಚ್ಚು ಹೆಚ್ಚು ಮರ-ಗಿಡಗಳು ನಾಶವಾಗುತ್ತಿರುವದರಿಂದ ಅವರೆಲ್ಲರಿಂದ ಅಂತಹ ಹೆಚ್ಚುವರಿ ಮನೆಗಳನ್ನು ಮುಟ್ಟುಗೋಲು ಹಾಕಿಕೊಂಡು ನಿರ್ಗತಿಕರು, ಬಡವರಿಗೆ ನೀಡಬೇಕು. ಸರಕಾರವೇ ಮಹಡಿ ಮನೆಗಳನ್ನು ಪ್ರೋತ್ಸಾಹಿಸಿ ಸಾಧ್ಯವಾದಷ್ಟು ಖಾಲಿ ಭೂಮಿ ಉಳಿಯುವಂತೆ ನೋಡಿಕೊಂಡು ಆ ಭೂಮಿಯಲ್ಲಿ, ಪರಿಸರದಲ್ಲಿ ಮರ-ಗಿಡಗಳು ಬೆಳೆಯುವಂತೆ, ನೀರು ಶೇಖರವಾಗುವಂತೆ ನೋಡಿಕೊಂಡು ಶುದ್ಧ ಪರಿಸರ ಕಾಪಾಡುವದರೊಂದಿಗೆ ಜಲ ಮರು ಪೂರಣಕ್ಕೂ ಅವಕಾಶವನ್ನು ಮಾಡಿಕೊಡಬಹುದಾಗಿದೆ.

ಮರ ಕಡಿಯಲು ಪರವಾನಿಗೆ ನಿಲ್ಲಿಸಿ : ಗಿಡ-ಮರ ಕಡಿಯಲು ಪರವಾನಿಗೆ ನೀಡುವದನ್ನು ಶಾಶ್ವತವಾಗಿ ನಿಲ್ಲಿಸಬೇಕು. ಒಂದು ವೇಳೆ ಯಾವದೇ ಮಿಲ್ಲುಗಳವರಿಗೆ ಪರವಾನಿಗೆ ಬೇಕಿದ್ದಲ್ಲಿ ಅದಕ್ಕೆ ದುಪ್ಪಟ್ಟು ಪ್ರಮಾಣದ ಗಿಡಗಳನ್ನು ನೆಟ್ಟು ಕನಿಷ್ಠ 20 ವರ್ಷ ಪೋಷಿಸಿ ತೋರಿಸಿದ ಬಳಿಕವೇ ಪರವಾನಿಗೆ ನೀಡುವ ಶರತ್ತು ವಿಧಿಸಿ ಅವರೆಲ್ಲರೂ ಪರಿಸರ ಉಳಿಸುವತ್ತ ಮನ ಮಾಡುವಂತೆ ಮಾಡುವ ಅನಿವಾರ್ಯ ಪ್ರಸಂಗ ಈಗ ಎದುರಾಗಿದೆ. ಏಕೆಂದರೆ ಈ ಬಿಸಿಲಿನ ಸೆಖೆಯಿಂದ, ನೀರು ಅಲಭ್ಯತೆಯಿಂದ ಬಚಾವಾಗಬೇಕಿದ್ದರೆ ಈ ರೀತಿ ಮಾಡುವದು ಅನಿವಾರ್ಯವಾಗಲಿದೆ. ಇಲ್ಲದಿದ್ದಲ್ಲಿ ಮರವೂ ಇಲ್ಲ, ನೀರೂ ಇಲ್ಲದೆ ಬೆಂಗಾಡಾಗುವ ದಿನ ದೂರ ಉಳಿದಿರಲಾರದು. ಹೆಚ್ಚಿನ ಕಡೆಗಳಲ್ಲಿ ಒಂದು ಮರಕ್ಕೆ ಪಡೆದ ಪರವಾನಿಗೆಯಲ್ಲಿ 5-10 ಮರಗಳು ಕಡಿದು ಸಾಗಿಸಲ್ಪಡುತ್ತಿವೆ. ಇದು ಅತ್ಯಂತ ಕೆಟ್ಟ ಸಂಪ್ರದಾಯ ಸ್ವತ: ಅಧಿಕಾರಿಗಳೇ ಕಣ್ಣಿದೂ ್ದಕುರುಡರಂತೆ ವರ್ತಿಸುತ್ತಾ ಮಿಲ್ಲುಗಳವರೊಂದಿಗೆ ಶಾಮೀಲಾಗಿ ಕಾಡುಗಳನ್ನು ಸೂರೆಗೈಯುತ್ತಿದ್ದಾರೆ. ಅದನ್ನು ನಿರ್ದಾಕ್ಷಿಣ್ಯವಾಗಿ ತಡೆಯಬೇಕಾಗಿದೆ. ಬೇಲಿಯೇ ಹೊಲಮೇಯುತ್ತಿದ್ದರೆ ಯಾರು ತಡೆಯಲು ಸಾಧ್ಯವಿದೆ ಸ್ವಾಮೀ??

ಚಿಕ್ಕಂದಿನಲ್ಲೇ ಶಿಕ್ಷಣ ನೀಡಿ ಸುಸಂಸ್ಕøತಗೊಳಿಸಿ : ಇನ್ನೊಂದು ಅತ್ಯಂತ ಮುಖ್ಯವಾದ ಘಟ್ಟ ಶಿಕ್ಷಣ. ಚಿಕ್ಕ ಪ್ರಾಯದ ಮಕ್ಕಳಿಗೆ ಪ್ರಾಥಮಿಕ ಶಾಲೆಗಳಲ್ಲಿಯೇ ಈ ಮೇಲ್ಕಂಡ ಎಲ್ಲಾ ವಿಚಾರಗಳನ್ನೂ ತಿಳಿ ಹೇಳಿಕೊಟ್ಟು ಅವರಲ್ಲಿ ನೀರಿಂಗಿಸುವ, ನೀರು ಶೇಖರಿಸುವ, ನೀರು ಉಳಿಸುವ, ನೀರನ್ನು ವ್ಯರ್ಥ ಪೋಲು ಮಾಡದಿರುವ, ಪರಿಸರವನ್ನು ಉಳಿಸುವ, ಬೆಳೆಸುವ, ಗಿಡ-ಮರ ಕಾಪಾಡುವ, ಅಗತ್ಯಕ್ಕಿಂತ ಹೆಚ್ಚು ಪರಿಸರವನ್ನು ಬಳಸದೇ ಇರುವ ಹಾಗೂ ಇನ್ನಿತರ ಪೂರಕ ಜ್ಞಾನವನ್ನು ಮನಸ್ಸಿನಲ್ಲಿ ಬಿತ್ತುವುದು. ಇದರಿಂದಾಗಿ ಅವರು ಬೆಳೆದಂತೆ ಅಂತಹದ್ದೇ ಅಂಶಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡುವದರಿಂದ ಪೋಷಕರೂ, ಶಿಕ್ಷಕರೂ, ಹೆತ್ತವರೂ ಬಹಳ ಯೋಗ್ಯವಾಗಿ ಕೈ ಜೋಡಿಸಿ ನೀರು ನೂರಾಗುವ ಅಮೃತ ಘಳಿಗೆಗೆ ಶ್ರೀಕಾರ ಹಾಡಬಹುದಾಗಿದೆ.

ಬದ್ಧತೆ, ಎದೆಗಾರಿಕೆ ಇದೆಯೇ? : ಉಪಯೋಗ ರಹಿತ ಹುಲ್ಲು ಹಾಸಿಗೆ, ವಾಹನ ತೊಳೆಯಲು ಬಹು ಅಮೂಲ್ಯ ನಲ್ಲಿ ನೀರನ್ನು ಪೋಲು ಮಾಡುವವರಿಗೆ ದುಪ್ಪಟ್ಟು/ ನಾಲ್ಕು ಪಟ್ಟು ದರ ವಿಧಿಸಿ ಅಂತಹವರ ವ್ಯರ್ಥ ಪೋಲುತನವನ್ನು ಹದ್ದು ಬಸ್ತಿಗೆ ತರಬಹುದಾಗಿರುತ್ತದೆ. ಕೆಲವಾರು ಬಾರಿ ಅಂತಹವರು ಮನೆ ಹತ್ತಿರದ ಸಾರ್ವಜನಿಕ ನಲ್ಲಿಯಿಂದಲೂ ಸಂಪರ್ಕ ಎಳೆದುಕೊಂಡು ಈ ರೀತಿ ಮಾಡುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಕೂಡಾ ಆ ಸಾರ್ವಜನಿಕ ನಲ್ಲಿಗಳನ್ನು ಶಾಶ್ವತವಾಗಿ ನಿವಾರಿಸಿ ಅನಗತ್ಯ ಸಂಪರ್ಕವನ್ನು ನಿವಾರಿಸಬೇಕಾಗಿದೆ. ಇಂತಹ ಎಲ್ಲಾ ಉಪಕ್ರಮಗಳನ್ನು ಜಾರಿಗೆ ತರಲು ಬದ್ಧತೆ, ಗುಂಡಿಗೆ, ಎದೆಗಾರಿಕೆ, ಯಾವ ಸರ್ಕಾರ, ಯಾವ ಅಧಿಕಾರಿಗೆ ಇದೆ ಹೇಳಿ? ಇದೆಲ್ಲವೂ ಆಚರಣೆಗೆ ಯೋಗ್ಯವಾಗಿಲ್ಲವೇ? ನೀವೇ ಹೇಳಿ.

ಅಗತ್ಯಕ್ಕಿಂತ ಹೆಚ್ಚು ಏರ್‍ಕಂಡೀಷನ್, ಫ್ರಿಡ್ಜ್ ಉಪಯೋಗಿಸದಿರಿ : ಅಯ್ಯೋ ಉರಿ, ಬಿಸಿಲು, ಬೆವರು, ಎಂದೆಲ್ಲಾ ಬೊಬ್ಬಿಡುವ ಅಗತ್ಯವೇನಿದೆ? ನೀವೂ ಐಷಾರಾಮೀ ಕಾರು, ವಾಹನಗಳಲ್ಲಿ; ಮನೆಗಳನ್ನೂ ಏರ್‍ಕಂಡೀಷನ್ ಗೊಳಿಸಿ ಭೂಮಿಯ ತಾಪ, ಸೆಕೆ ಮತ್ತಷ್ಟು ಹೆಚ್ಚಲು ನಿಮ್ಮ ಕೊಡುಗೆಯನ್ನು ನೀಡಿರಿ. ಏಕೆಂದರೆ ಭೂಮಿಯ ತಾಪಮಾನ ಏರಲು ಮುಖ್ಯ ಕಾರಣ ಹೆಚ್ಚುತ್ತಿರುವ ಏರ್‍ಕಂಡೀಷನ್, ಫ್ರಿಡ್ಜ್, ಐಷಾರಾಮೀ ವಾಹನಗಳು, ಕಟ್ಟಡಗಳು, ಎತ್ತರೆತ್ತರವಾಗಿ ಬೆಳೆದ ಸಿಮೆಂಟಿನ ಬೆಂಗಾಡುಗಳು.ಇವೆಲ್ಲವೂ ನೋಡಲು ಸುಂದರವಾಗಿ ಕಂಗೊಳಿಸುತ್ತವೆ. ಆದರೆ ಅವುಗಳು ಪರಿಸರಕ್ಕೆ ಬಿಡುತ್ತಿರುವ ಫ್ಲೋರೋ ಕಾರ್ಬನ್‍ನಿಂದಾಗಿ ಓಜೋನ್ ಪದರ ಮತ್ತಷು ್ಟತೂತಾಗಿ ಸೂರ್ಯನ ನೇರಳಾತೀತ ಕಿರಣಗಳು ನೇರವಾಗಿ ಭೂಮಿಗೆ ಅಪ್ಪಳಿಸಿ ತಾಪಮಾನವನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ಮಂಜುಗಡ್ಡೆಗಳು ಕರಗಿ ಸಮುದ್ರದ ನೀರು ಉಕ್ಕೇರುತ್ತಿದ್ದು, ಭೂಕಂಪ, ಸುನಾಮಿಗಳ ಸಂಖ್ಯೆ ಹೆಚ್ಚಿ ಪ್ರಾಕೃತಿಕ ವಿಕೋಪಗಳು ವಿಪರೀತಗೊಳ್ಳುತ್ತಿದ್ದು ಭೂ ಕಬಳಿಕೆ ಯಾಗುತ್ತಿದೆ. ಸಾವು-ನೋವುಗಳು ಹೆಚ್ಚುತ್ತಿವೆ. ಆದರೂ ಮನುಷ್ಯನಿಗೆ ಬುದ್ಧಿ ಬರುತ್ತಿಲ್ಲ. ‘ವಿಪರೀತ ಕಾಲೇ ವಿನಾಶ ಬುದ್ಧಿ’ ಎನ್ನುವಂತೆ ಹೆಚ್ಚು ಹೆಚ್ಚು ಅನಾಚಾರಗಳನ್ನು ಮಾಡುತ್ತಾ ಸಂಭಾವಿತನಂತೆ ಗೋಸುಂಬೆ ತನವನ್ನು ತೋರಿಸುತ್ತಿದ್ದಾನೆ.

ಪರಿಸರ ರಕ್ಷಿಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳೋಣ : ಈ ಎಲ್ಲಾ ಸಂಗತಿಗಳನ್ನು ತಿಳಿದಿದ್ದೂ ಅರ್ಥ ಮಾಡಿಕೊಳ್ಳಲಾರದಷ್ಟೂ ಅನಾಗರಿಕರೇ ನಾವು? ಅನಕ್ಷರಸ್ಥರೇ ನಾವು? ಮಾಡುತ್ತಿರುವ ಅನ್ಯಾಯ, ಅನಾಚಾರ, ಅಸಹ್ಯತನಗಳನ್ನು ನಿಯಂತ್ರಿಸಿಕೊಳ್ಳಲಾರದಷ್ಟೂ ನೀಚತನಕ್ಕೆ ನಾವು ಇಳಿಯುವಂತಾದೆವೇ? ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಇಲ್ಲದಿದ್ದಲ್ಲಿ ಮುಂದೊಂದು ದಿನ ತೊಟ್ಟು ನೀರೂ ಸಿಗದೇ ಒದ್ದಾಡಿ, ಬಾಯಾರಿ ಸಾಯುವ ಪರಿಸ್ಥಿತಿ ನಮಗೂ, ನಿಮಗೂ ನಿಮ್ಮ-ನಮ್ಮ ಮುಂದಿನ ಜನಾಂಗಕ್ಕೂ ಬರಬಹುದೇನೋ. ಯೋಚಿಸಿ, ಯೋಚಿಸಿ, ಆಲೋಚಿಸಿರಿ ಹೇ ಮಾನವ ಬಂಧುಗಳೇ. ಸಮಯ ಇನ್ನೂ ಮೀರಿಲ್ಲ. ಈಗಲೇ ಕಾರ್ಯಾಚರಿಸಿ ಪರಿಸರವನ್ನು, ಈ ಪ್ರಪಂಚದ ಪಂಚಭೂತ ಪರಿಸರಗಳಾದ ಆಕಾಶ, ನೀರು, ಗಾಳಿ, ಭೂಮಿ, ಬೆಂಕಿಯನ್ನು ಕಾಪಾಡಿ ನಮ್ಮನ್ನು ನಾವು ರಕ್ಷಿಸಿಕೊಳ್ಳೋ




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here