Thursday 18th, April 2024
canara news

ವಿಶಿಶ್ಠ ನಕ್ಷತ್ರ ಆಕಾರಾದ ಸಂತ ಫ್ರಾನ್ಸಿಸ್ ಅಸಿಸಿ ತಲ್ಲೂರಿನ ನೂತನ ಇಗರ್ಜಿಯು ಬಿಶಪ್ ಜೆರಾಲ್ಡ್ ಲೋಬೊರಿಂದ ಲೋಕಾರ್ಪಣೆ

Published On : 12 May 2016   |  Reported By : Bernard J Costa


ಕುಂದಾಪುರ, ಮೆ.12: ‘ದೇವಾಲಯವು, ದೇವರ ಮನೆಯಾಗಿದೆ, ದೇವಾಲಯವು ಮನುಷ್ಯನಿಗೆ ಪ್ರಾರ್ಥನ ಮನೆಯಾಗಿದೆ, ದೇವಾಲಯವು ಮನುಷ್ಯನಿಗೆ ಸ್ವರ್ಗದ ದಾರಿಯಾಗಿದೆ’ ಎಂದು ತಲ್ಲೂರಿನಲ್ಲಿ ನೂತನವಾಗಿ ಕಟ್ಟಲ್ಪಟ್ಟ ವಿಶಿಶ್ಠ ರೀತಿಯ ನಕ್ಷತ್ರ ರೂಪದ ಕರ್ನಾಟಕದಲ್ಲೆ ಅಪರೂಪ ಶೈಲಿಯ ಸಂತ ಫ್ರಾನ್ಸಿಸ್ ಅಸಿಸಿ ಇಗರ್ಜಿಯನ್ನು ಉಡುಪಿ ಧರ್ಮ ಪ್ರಾಂತ್ಯದ ಬಿಶಪ್ ಅತಿ ವ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಆಶಿರ್ವಾದಿಸಿ ಉದ್ಘಾಟನೆ ಮಾಡಿ ಲೊಕಾರ್ಪಣೆ ಮಾಡಿ ಸಂದೇಶ ನೀಡಿದರು. ‘ದೇವಾಲಯದಲ್ಲಿ ದೇವರ ಮತ್ತು ಮನುಷ್ಯರ ಸಂಪರ್ಕವಾಗುತ್ತದೆ, ಹಾಗಾಗಿ ಶುದ್ದ ಮನಸ್ಸಿನಿಂದ ಪ್ರಾರ್ಥಿಸೊಣ, ದೇವರು ನಿಮಗೆ ಸುಭಿಕ್ಷೆಯನ್ನು ನೀಡುತ್ತಾರೆಂದು’ 40 ಕ್ಕೂ ಅಧಿಕ ಧರ್ಮ ಗುರು ಮತ್ತು ಸಹಸ್ರಾರು ಭಕ್ತಾಧಿಗಳೊಂದಿಗೆ ಅವರು ಬಹಳ ವಿಶೇಶ ರೀತಿಯ ಸಡಗರ ಭಕ್ತಿಯ ಬಲಿದಾನ ಅರ್ಪಿಸಿ ನಾನಾ ವಿಧಿಗಳಿಂದ ಇಗರ್ಜಿಗೆ ಸಂಬದ್ದ ಪಟ್ಟ ಪೂಜಾ ವಸ್ತುಗಳನ್ನು ಆಶಿರ್ವದಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸಚಿವ ವಿನಯ ಕುಮಾರ್ ಸೊರಕೆವರೊಡನೆ ಬಿಶಪರು ಗಿಡ ನೆಟ್ಟು ಅದಕ್ಕೆ ನೀರುಣ್ಣಿಸಿ ವಿಶಿಸ್ಠ ರೀತಿಯಲ್ಲಿ ಉದ್ಘಾಟನೆ ಮಾಡಿದರು. ಈ ರೀತಿ ಗಿಡ ನೆಟ್ಟು ಉದ್ಘಾಟನೆ ಮಾಡಲು ಕಾರಣ ಈ ಇಗರ್ಜಿಯನ್ನು ಸಮರ್ಪಿಸಲ್ಪಟ ಸಂತ ಫ್ರಾನ್ಸಿಸ್ ಅಸಿಸಿ ಎಲ್ಲಿ ಹೋದರು ಅವರು ಪುಟ್ಟ ಕಾಡೊಂದು ರಚಿಸುತಿದ್ದರು. ಅವರು ಈ ರೀತಿ ಮಾಡಲು ಅವರು ಪ್ರಕ್ರತಿ ಪ್ರೀತಿಯೆ ಕಾರಣ, ಇದರಿಂದ ಇವತ್ತು ನಮಗೆ ಅಗತ್ಯವಾದ ಮಳೆ ನೀರಿನ ಪ್ರಯತ್ನಕ್ಕೆ ಅವರು ಪ್ರೇರಣೆಯಾಗಿದ್ದಾರೆಂದು ಬಿಶಪರು ತಿಳಿಸಿದರು.

‘ಕೆಥೊಲಿಕ್ ಧರ್ಮಗುರುಗಳು ಎಲ್ಲಿ ಹೋದರೂ, ದೇವಾಲಯ ಜೊತೆ, ಶಾಲೆಗಳನ್ನು ಕಟ್ಟಿ ನಿಸ್ವಾರ್ಥ ಸೇವೆ ಮಾಡಿ ಜನರನ್ನು ಸುಶಿಕ್ಷಿತರನ್ನಾಗಿ ಮಾಡುತ್ತಾರೆ, ಇಂತಹ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುವಾಗ, ಪಾರ್ಥನೆ ಸಲ್ಲಿಸುವರಿಗೆ ಮಾತ್ರವಲ್ಲಾ, ಊರವರಿಗೆ ಕೂಡ ಪ್ರತಿ ಫಲ ಸಿಗುತ್ತದೆ’ ಎಂದು ಪುರಾವೆ ಸಮೇತ ತಿಳಿಸಿ ನೂತನ ಚರ್ಚ್ ಕಟ್ಟಲು ಶ್ರಮಿಸಿದವರಿಗೆಲ್ಲರಿಗೂ ಸಚಿವ ವಿನಯ ಕುಮಾರ್ ಸೊರಕೆ ಅಭಿನಂದಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿಯವರು ಶುಭಾಶಯಗಳನ್ನು ನೀಡಿದರು, ಬೈಂದೂರು ಶಾಸಕ ಗೋಪಾಲ ಪೂಜಾರಿ ಇಗರ್ಜಿಯ ಸ್ಮಾರಕ ಪುರವಣಿಗೆಯನ್ನು ಉದ್ಘಾಟಿಸಿ ಶುಭ ಕೋರುತ್ತಾ, ಇನ್ನೂ ಕೂಡಾ ಸರಕಾರದಿಂದ ಮತ್ತು ಶಾಸಕರ ನಿಧಿಯಿಂದ ಧನ ಸಹಾಯದ ಭರವಶೆಯನ್ನು ಕೊಟ್ಟರು. ವಲಯ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾ, ವೇದ ಮೂರ್ತಿ ವಿಧ್ವಾನ್ ರಾಮಚಂದ್ರ ಭಟ್ಟ್, ಇಸ್ಮಾಯಿಲ್ ಮದನಿ, ಮುಲ್ಲಾ. ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವ ಇವರೆಲ್ಲರೂ ಶುಭ ಕೋರಿದರು.

ಇಗರ್ಜಿ ಕಟ್ಟಲು ಒಂದು ಕೋಟಿ , ಕೊಟ್ಟ ರಿಚರ್ಡ್ ಮೆಂಡೊನ್ಸಾ ದಂಪತಿಗಳನ್ನು ಸನ್ಮಾನಿಸಲಾಯಿತು, ಹಾಗೆ 10, 5 ಲಕ್ಷ ಕೊಟ್ಟವರಿಗೆ, ಹಾಗೆ 50 ಸಾವಿರ ಮೆಲ್ಪಟ್ಟು ದಾನಿಗಳನ್ನು ಸನ್ಮಾನಿಸಲಾಯಿತು.

ಇಗರ್ಜಿ ವತಿಯಿಂದ ಬಿಶಪರನ್ನು ಸನ್ಮಾನಿಸಲಾಯಿತು. ನೂತನ ಇಗರ್ಜಿಯ ರೂವಾರಿ ವ|ಧರ್ಮಗುರು ಸುನೀಲ್ ವೇಗಸ್, ಚರ್ಚಿನ ಉಪಾಧ್ಯಕ್ಷ ಅರುಣ್ ಮೆಂಡೊನ್ಸಾ, ಕಾರ್ಯದರರ್ಶಿ ಸ್ಟ್ಯಾನಿ ಡಿಸಿಲ್ವಾ ಕಟ್ಟಡದ ವಿನ್ಯಾಸಕಾರ, ಎಂಜಿನಿಯರ್, ಕಂಟ್ರಾಕ್ಟುದಾರನ್ನು, ಹಾಗೂ ಈ ಹಿಂದೆ ಈ ಇಗರ್ಜಿಯಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳಾದ ವಾಲೇರಿಯನ್ ಮೆಂಡೊನ್ಸಾ, ಫ್ರಾನ್ಸಿಸ್ ಕರ್ನೆಲಿಯೊ, ಆಲೆಕ್ಸಾಂಡರ್ ಲೂವಿಸ್ ಇವರನ್ನು ಬಿಶಪರು ಸನ್ಮಾನಿಸಿದರು.

ಸಿಂಡ್ರೆಲ್ಲಾ ಗೊನ್ಸಾಲ್ವಿಸ್, ಪ್ರೆಸಿಲ್ಲಾ ಮಿನೇಜಸ್, ಜೂಡಿತ್ ಮೆಂಡೊನ್ಸಾ, ರೆನಿಟಾ ಪಸನ್ನಾ, ಸಿಸ್ಟರ್ ತಂಗಮ್ಮಾ ಮುಂತಾದವರು ಸನ್ಮಾನಿತರನ್ನು ಪರಿಚಯಿಸಿದರು, ಇಗರ್ಜಿಯ ಉಪಾಧ್ಯಕ್ಷ ಅರುಣ್ ಮೆಂಡೊನ್ಸಾ ಸ್ವಾಗತಿಸಿದರು. ಕಾರ್ಯದರ್ಶಿ ಸ್ಟ್ಯಾನಿ ಡಿಸಿಲ್ವಾ ಜಗದ್ಗುರು ಪೆÇೀಪ್ ಪ್ರತಿನಿಧಿಗಳ ಸಂದೇಶವನ್ನು ವಾಚಿಸಿದರು. ಇಗರ್ಜಿಯ ಧರ್ಮಗುರು ಸುನೀಲ್ ವೇಗಸ್ ವಂದನೆಗಳನ್ನು ಸಲ್ಲಿಸಿದರು. ಅನಿಲ್ ಡಿಸಿಲ್ವಾ ಮತ್ತು ನೀತಾ ಮೆಂಡೊನ್ಸಾ ಕಾರ್ಯಕ್ರಮವನ್ನು ನಿರೂಪಿಸಿದರು.





More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here