Thursday 28th, March 2024
canara news

ವಿದ್ಯಾಥಿ೯ಗಳು ಹಿರಿಯರ ಆದರ್ಶವನ್ನು ಮೈಗೂಡಿಸಬೇಕು : ರಾಜಶ್ರೀ ಭಜೇ

Published On : 16 May 2016   |  Reported By : Rons Bantwal


ಮುಂಬಯಿ, ಮೇ.16: ಸಾಮಾಜಿಕ ಕಳಕಳಿಯ ಮನೋಭಾವದವರಿಂದ ಸಮಾಜದ ಬಡ ಕುಟುಂಬಗಳಿಗೆ, ಆವಶ್ಯಕತೆಯುಳ್ಳವರಿಗೆ ಪ್ರಯೋಜನವಾಗುತ್ತದೆ. ಆತ್ಮವಿಶ್ವಾಸದಿಂದ ಧನಾತ್ಮಕ ಭಾವನೆಗಳಿಂದ ವಿದ್ಯಾಥಿರ್üಗಳು ಹಿರಿಯರ ಆದರ್ಶವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ನಮ್ಮನ್ನು ನಾವು ಅರಿತುಕೊಂಡು ಸಾಗಿದಾಗ ಯಶಸ್ಸು ನಮ್ಮ ಜತೆಗಿರುತ್ತದೆ ಎಂದು ಜೇಸಿಐ (ಮಹಾರಾಷ್ಟ್ರ-ನಾಗ್ಪುರ ಮೂಲದ) ಭಾರತದ ರಾಷ್ಟ್ರಾಧ್ಯಕ್ಷೆ ರಾಜಶ್ರೀ ಭಜೇ ಹೇಳಿದರು.

ರಾಜಶ್ರೀ ಅವರು ಇಂದಿಲ್ಲಿ ಸೋಮವಾರ ವಿಟ್ಲ ಜೇಸಿಐಯ ಅಧ್ಯಕ್ಷ ಬಾಬು ಕೆ.ವಿ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ವಿವಿಧ ಸಮಾಜೋಪಯೋಗಿ ಕಾರ್ಯಕ್ರಮಗಳ ಉದ್ಘಾಟನೆ ನಡೆಸಿ ವಿಟ್ಲ ಜೇಸಿಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.

ವಲಯ ಉಪಾಧ್ಯಕ್ಷ ಜೇಸಿ ರಕ್ಷಿತ್, ವಲಯಾಧಿಕಾರಿಗಳಾದ ಚಿದಾನಂದ ಇಡ್ಯ, ನಿತಿನ್ ಅವಭೃತ, ಮೋಹನ ಎ., ಸಂದೀಪ್ ಕುಮಾರ್, ಪ್ರಶಾಂತ್ ರೈ, ಚೇತನಾ, ದತ್ತಾತ್ರೇಯ, ಮನೋಜ್ ಕಡಬ, ಶಕೀರ್ ಎಂ.ಹಾವಂಜೆ, ಅಶೋಕ್ ಚೂಂತಾರು, ಸಂದೇಶ್ ಕುಮಾರ್, ಹಿರಿಯ ಸದಸ್ಯರಾದ ಹಸನ್ ವಿಟ್ಲ, ಪ್ರಭಾಕರ ಶೆಟ್ಟಿ, ದಯಾನಂದ ಆಳ್ವ ಕಡಂಬು, ಸದಸ್ಯರಾದ ಭಾಸ್ಕರ ಶೆಟ್ಟಿ, ಈಶ್ವರ ಭಟ್ ಕಾಶಿಮಠ, ಅಬ್ದುಲ್ ಕರೀಂ ಕುದ್ದುಪದವು, ಅಣ್ಣಪ್ಪ ಸಾಸ್ತಾನ, ಸಂಜೀವ ಎಂ., ಜೈಕಿಶನ್, ರಾಜಶೇಖರ್, ರಮೇಶ್ ಬಿ.ಕೆ, ಬಾಲಕೃಷ್ಣ ವಿ., ಕ್ಲಿಫರ್ಡ್, ವಿಜಯ ಕುಮಾರ್ ಕೊಪ್ಪಳ, ಜಯಂತ್ ಪೂರ್ಲಪ್ಪಾಡಿ, ಹರೀಶ್, ಜಯರಾಮ ಅನಿಲಕಟ್ಟೆ, ಮುರಳಿ ಮತ್ತಿತರರು ಉಪಸ್ಥಿತರಿದ್ದರು.

ಉಪಪ್ರಾಂಶುಪಾಲೆ ಶಾಲಿನಿ ಆರ್ ನೋಂಡಾ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಧರ ಕೊಡಕ್ಕಲ್ಲು ಪ್ರಸ್ತಾವನೆಗೈದರು. ವಿಟ್ಲ ಜೇಸಿಐ ಕಾರ್ಯದರ್ಶಿ ಲೂಯಿಸ್ ಮಸ್ಕರೇನ್ಹಸ್ ವಂದಿಸಿದರು.

`ನ್ಯಾಪ್ಕಿನ್ ಬರ್ನಿಂಗ್ ಮೆಷಿನ್ ' ಅನ್ನದ ವಿತರಣೆ ವಾಹನ ಉದ್ಘಾಟನೆ:
ಜೆಸಿಐ ಸುರಕ್ಷಾ ಯೋಜನೆಯಡಿಯಲ್ಲಿ ವಿಟ್ಲ ಸೈಂಟ್ ರೀಟಾ ಶಾಲೆ, ವಿಟ್ಲ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಗೆ ವಿಟ್ಲ ಜೆಸಿಐ ವತಿಯಿಂದ ತಲಾ 16.5ಸಾವಿರ ರೂ ಮೌಲ್ಯದ ನ್ಯಾಪ್ಕಿನ್ ಬರ್ನಿಂಗ್ ಮೆಶಿನ್ ಹಾಗೂ ವಿಟ್ಲ ಜೆಸಿಐ ಆಂಗ್ಲ ಮಾಧ್ಯಮ ಶಾಲೆಗೆ ಅನ್ನ ವಿತರಣೆಗೆ ಸಹಾಯವಾಗುವ ನಿಟ್ಟಿನಲ್ಲಿ 80ಸಾವಿರ ರೂ. ವೆಚ್ಚದ ವಾನಹನವನ್ನು ಜೆಸಿಐ ಭಾರತದ ರಾಷ್ಟ್ರಧ್ಯಕ್ಷೆ ರಾಜಶ್ರೀ ಭಜೆ ಉದ್ಘಾಟಿಸಿದರು.

ಸೈಂಟ್ ರೀಟಾ ಶಾಲೆಯ ಸಂಚಾಲಕ ಎರಿಕ್ ಕ್ರಾಸ್ತಾ, ಮುಖ್ಯಶಿಕ್ಷಕರಾದ ಮರಿನಾ, ಸಚಿನ್, ವಿಟ್ಲ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಮೇಲ್ವಿಚಾರಕಿ ಭವಾನಿ, ಸಿಬ್ಬಂದಿಗಳಾದ ಹರಿಣಾಕ್ಷಿ, ಶೋಭಾ, ಲೀಲಾಮಣಿ, ರೇವತಿ, ವಿಟ್ಲ ಜೆಸಿಐ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಲ್ ಎನ್ ಕೂಡೂರು, ಆಡಳಿತಾಧಿಕಾರಿ ಮೋನಪ್ಪ ಶೆಟ್ಟಿ ಹಾಜರಿದ್ದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here