Thursday 25th, April 2024
canara news

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಭದ್ರತೆಯ ಕೊರತೆ

Published On : 19 May 2016   |  Reported By : Canaranews Network


ಮಂಗಳೂರು: ರಾಜ್ಯದ ಅತಿ ಪ್ರಮುಖ ರೈಲು ನಿಲ್ದಾಣದಲ್ಲಿ ಒಂದಾಗಿರುವ ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣ ಭದ್ರತೆ ದೃಷ್ಠಿಯಲ್ಲಿ ಹಿಂದುಳಿದಿದೆ. ಇಲ್ಲಿನ ಭದ್ರತಾ ಸಲಕರಣೆಗಳು ಉಪಯೋಗವಾಗದೆ ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂಬಂತಾಗಿದ್ದು, ಪ್ರಯಾಣಿಕರು ಆತಂಕಿತರಾಗಿದ್ದಾರೆ.

ಈ ನಿಲ್ದಾಣಕ್ಕೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಿದ್ದು, ಅವರ ಬ್ಯಾಗ್‌ಗಳನ್ನು ತಪಾಸಣೆ ನಡೆಸಲು ಸೂಕ್ತ ಕ್ರಮಗಳಿಲ್ಲ. ಪ್ರಯಾಣಿಕರು ಯಾವುದೇ ತಪಾಸಣೆಗೆ ಒಳಗಾಗದೆ ಬ್ಯಾಗ್‌ಗಳ ಸಹಿತ ನೇರವಾಗಿ ಪ್ಲಾಟ್‌ಫಾರಂವರೆಗೆ ಪ್ರವೇಶಿಸಬಹುದಾಗಿದೆ. ರೈಲು ನಿಲ್ದಾಣದ ಒಳಭಾಗದಲ್ಲಿ 3 ಡಿಟೆಕ್ಟರ್‌ ಹಾಗೂ ಒಂದು ಲಗೇಜ್‌ ಸ್ಕ್ಯಾನರ್‌ ಇದ್ದರೂ, ಸರಿಯಾಗಿ ಉಪಯೋಗವಾಗುತ್ತಿಲ್ಲ. ಇವುಗಳನ್ನು ಪ್ರವೇಶ ದ್ವಾರದ ಎಡಭಾಗದಲ್ಲಿ ಇರಿಸಲಾಗಿದೆ. ಮೂರು ಡಿಟೆಕ್ಟರ್‌ಗಳ ಪೈಕಿ ಒಂದು ಹಾಗೂ ಸುಮಾರು 40 ಲಕ್ಷ ರೂ. ವೆಚ್ಚದ ಲಗೇಜ್‌ ಸ್ಕ್ಯಾನರ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸ್ಕ್ಯಾನರ್‌ನ ಮೋನಿಟರ್‌ ಕೆಲವು ತಿಂಗಳಿಂದ ಹಾಳಾಗಿದ್ದು, ದುರಸ್ತಿ ನಡೆದಿಲ್ಲ. ಕಾರ್ಯ ನಿರ್ವಹಿಸುವ ಡಿಟೆಕ್ಟರ್‌ಗಳನ್ನೂ ಸರಿಯಾಗಿ ಬಳಸಲಾಗುತ್ತಿಲ್ಲ.

ಪ್ರಯಾಣಿಕರು ಸಿಕ್ಕಸಿಕ್ಕಲ್ಲೆಲ್ಲ ನಿಲ್ದಾಣದ ಒಳಗೆ ಪ್ರವೇಶಿಸುವುದು ಕಂಡು ಬರುತ್ತಿದೆ. ಸಿಬಂದಿಗೆ ಸಂಶಯ ಮೂಡಿದರೆ ಮಾತ್ರ ಡಿಟೆಕ್ಟರ್‌ ಮೂಲಕ ಪ್ರವೇಶಿಸುವಂತೆ ಸೂಚಿಸುತ್ತಾರೆ. ಅಸ್ಪಷ್ಟ, ಕಾರ್ಯನಿರ್ವಹಿಸದ ಕೆಮರಾ ನಿಲ್ದಾಣದಲ್ಲಿ ಸುಮಾರು 32 ಸಿಸಿ ಕೆಮರಾಗಳಿವೆ. ಇವುಗಳ ಪೈಕಿ ಪ್ರವೇಶ ದ್ವಾರದ ಹೊರಭಾಗ ಹಾಗೂ ಒಳಭಾಗದಲ್ಲಿರುವ ಕೆಮರಾ ಉತ್ತಮ ಸ್ಥಿತಿಯಲ್ಲಿವೆ. ಕೆಲವುಗಳ ಕಾರ್ಯನಿರ್ವಹಣೆ ತೀರಾ ಕಳಪೆ. ಹಗಲು ಹೊತ್ತಿನಲ್ಲಿ ರೆಕಾರ್ಡ್‌ ಆದರೆ, ರಾತ್ರಿ ಅಸ್ಪಷ್ಟವಾಗಿರುತ್ತವೆ. ಹಲವು ಕೆಮರಾಗಳು ಕೆಟ್ಟು ಹೋಗಿದ್ದು, ಹೆಸರಿಗೆ ಮಾತ್ರ ಎಂಬಂತಿದೆ. ನಿಲ್ದಾಣದ ಒಳಗೆ ರೆಕಾರ್ಡ್‌ ಆಗುವ ವಿಡಿಯೋಗಳು ಪಕ್ಕದಲ್ಲಿರುವ ರೈಲ್ವೇ ಪೊಲೀಸರ ಕಚೇರಿಗೆ ಟಿವಿ ಮೂಲಕ ಕಾಣುವ ವ್ಯವಸ್ಥೆ ಮಾಡುವಂತೆ ಇಲಾಖೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ ಸೂಕ್ತ ಸ್ಪಂದನ ದೊರಕಿಲ್ಲ. ಒಟ್ಟಾರೆಯಾಗಿ ಇಲ್ಲಿನ ಅಭದ್ರೆಯಿಂದ ಪ್ರಯಾಣಿಕರು ಭೀತಿ ಎದುರಿಸುವಂತಾಗಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here