Friday 19th, April 2024
canara news

ಮೇ ೧೯ರಂದು ದಕ್ಷಿಣ ಕನ್ನಡ ಬಂದ್ ಖಚಿತ; ವಿಫಲವಾದ ಜಿಲ್ಲಾಧಿಕಾರಿ ಸಂಧಾನ

Published On : 19 May 2016


ಮಂಗಳೂರು: ನೇತ್ರಾವತಿ ಹೋರಾಟಗಾರರು ಮೇ ೧೯ರಂದು ಕರೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಹಿಂಪಡೆದುಕೊಳ್ಳುವ ಬಗ್ಗೆ ದ.ಕ.ಜಿಲ್ಲಾಧಿಕಾರಿ ಅವರ ಸಂಧಾನಸಭೆ ವಿಫಲಗೊಂಡಿದ್ದು, ಬಂದ್ ಖಚಿತವಾಗಿದೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೇತೃತ್ವದಲ್ಲಿ ಹೋರಾಟಗಾರರ ಹಾಗೂ ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ನೇತ್ರಾವತಿ ಸಂಯುಕ್ತ ರಕ್ಷಣಾ ಸಮಿತಿ ಪರವಾಗಿ ವಿಜಯ್ ಕುಮಾರ್ ಶೆಟ್ಟಿ, ಸಂಚಾಲಕರಾದ ಹರಿಕೃಷ್ಣ ಬಂಟ್ವಾಳ, ಸತ್ಯಜಿತ್ ಸುರತ್ಕಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೇ. ೧೯ರಂದು ನಡೆಯುವ ಬಂದ್ ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದು.

ಈ ಮೊದಲು ನಡೆದ ಹೋರಾಟದಲ್ಲಿ ಯಾವುದೇ ಗಲಭೆಯಾಗಿಲ್ಲ. ಜಿಲ್ಲಾಡಳಿತಕ್ಕೆ ಈ ಬಗ್ಗೆ ಅನುಮಾನ ಬೇಡ ಎಂದು ಅವರು ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಬಂದ್ ನಿಂದ ಯಾವುದೇ ಪರಿಹಾರ ನಿರೀಕ್ಷಿಸುವಂತಿಲ್ಲ. ಇದರಿಂದಾಗಿ ೧೯ರ ಬಂದ್ ವಿಚಾರದ ಬಗ್ಗೆ ಪುನರ್ ವಿಮರ್ಶಿಸಬೇಕು.ಅಲ್ಲದೆ, ಈ ಯೋಜನೆ ೯೦ರ ದಶಕದಲ್ಲೆ ಪ್ರಸ್ತಾವಿತ ಯೋಜನೆ. ೨೦೧೦ರ ನಂತರ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಈ ಯೋಜನೆಗೆ ಬದ್ಧವಾಗಿದೆ ಎಂದರು. ಜಿಲ್ಲಾಧಿಕಾರಿಯವರು ಸಂಧಾನ ನಡೆಸಿದರೂ ಹೋರಾಟಗಾರರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹಾಗಾಗಿ ಮೇ ೧೯ರಂದು ನಡೆಯಲಿರುವ ಬಂದ್ ಖಚಿತಗೊಂಡಿದೆ. ಸಭೆಯಲ್ಲಿ ಪೊಲೀಸ್ ಆಯುಕ್ತ ಚಂದ್ರಶೇಖರ್, ಎಡಿಸಿ ಕುಮಾರ್, ಎಸ್ಪಿ ಶರಣಪ್ಪ ಮೊದಲಾದವರು ಉಪಸ್ಥಿತರಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here