Saturday 20th, April 2024
canara news

ಆಳ್ವಾಸ್‌ನಿಂದ ಅನಂತ್‌ಗೆ 5 ಲಕ್ಷ ರೂ., ಇಬ್ಬರಿಗೆ ತಲಾ 1 ಲಕ್ಷ ರೂ.

Published On : 29 May 2016   |  Reported By : Canaranews Network


ಮಂಗಳೂರು: ಸಿಇಟಿ ಪರೀಕ್ಷೆಯಲ್ಲಿ ಮೆಡಿಕಲ್‌ ವಿಭಾಗದಲ್ಲಿ ಪ್ರಥಮ ರ್ಯಾಂಲಕ್‌ ಗಳಿಸಿರುವ ಆಳ್ವಾಸ್‌ ಪ.ಪೂ. ಕಾಲೇಜಿನ ಅನಂತ್‌ ಜಿ. ಅವರಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ತಲಾ 593 ಅಂಕ ಗಳಿಸಿರುವ ಆಳ್ವಾಸ್‌ನ ವಿದ್ಯಾರ್ಥಿಗಳಾದ ಬೆಂಗಳೂರು ಮೂಲದ ಆಶಿಕ್‌ ನಾರಾಯಣ್‌ ಮತ್ತು ಮೂಡಬಿದಿರೆಯ ದಕ್ಷಾ ಜೈನ್‌ ಅವರಿಗೆ ತಲಾ 1 ಲಕ್ಷ ರೂ. ನೀಡುವ ಜತೆಗೆ ಅವರ ಮುಂದಿನ ಶಿಕ್ಷಣವನ್ನು ಆಳ್ವಾಸ್‌ನಲ್ಲಿ ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ..

ತಮ್ಮ ಸಂಸ್ಥೆಯಲ್ಲಿ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಶಿಕ್ಷಣಾವಕಾಶ ಪಡೆದ, ಇಡಗುಂಜಿ ಮೂಲದ ಅನಂತ್‌ ಜಿ. ಅವರು ಮೆಡಿಕಲ್‌ ಮಾತ್ರವಲ್ಲ ಕೃಷಿ, ವೆಟರ್ನರಿ ವಿಭಾಗಗಳಲ್ಲೂ ಪ್ರಥಮ ರ್ಯಾಂ ಕ್‌ ಗಳಿಸಿದ್ದು ಬಿ. ಫಾರ್ಮ ಹಾಗೂ ಡಿ.ಫಾರ್ಮಗಳಲ್ಲಿ 6ನೇ ರ್ಯಾಂೇಕ್‌, ಎಂಜಿನಿಯರಿಂಗ್‌ನಲ್ಲಿ 18ನೇ ರ್ಯಾಂನಕ್‌ ಪಡೆದು ಆಳ್ವಾಸ್‌ಗೆ ಕೀರ್ತಿ ತಂದಿದ್ದಾರೆ. ಕಲೆ, ಕ್ರೀಡೆ, ಸಂಸ್ಕೃತಿಯೊಂದಿಗೆ ಮೌಲ್ಯಯುತ ಶಿಕ್ಷಣವನ್ನು ನೀಡುತ್ತ ಬಂದಿದ್ದು ಸತತ 8 ವರ್ಷಗಳಿಂದಲೂ 99 ಶೇ. ಫಲಿತಾಂಶ (ಈ ಬಾರಿ 99. 20 ಶೇ.) ಬಂದಿದೆ. ಜೆಇಇ ಪರೀಕ್ಷೆಯಲ್ಲಿ 483 ಮಂದಿ ತೇರ್ಗಡೆ ಹೊಂದಿದ್ದಾರೆ ಎಂದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here